
ಕಡಬ: ಮನೆಯೊಂದಕ್ಕೆ ತಡ ರಾತ್ರಿ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾದ ಘಟನೆ ತಾಲೂಕಿನ ನೂಜಿಬಾಳ್ತಿಲ ಗ್ರಾಮದಿಂದ ವರದಿಯಾಗಿದೆ.


ನೂಜಿಬಾಳ್ತಿಲ ಗ್ರಾಮದ ಬೊಳ್ಳಾಜೆ ರಾಜೀವಿ ಗೌಡ ಬೊಳ್ಳಾಜೆ ಅವರ ಮನೆಗೆ ಅ.2ರ ರಾತ್ರಿ ಮರ ಬಿದ್ದಿರುವುದಾಗಿದೆ. ಈ ಘಟನೆಯಿಂದ ಮನೆಗೆ ಹಾನಿಯಾಗಿದೆ.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಗ್ರಾ.ಪಂ ಆಡಳಿತ ಮಂಡಳಿ, ಅಭಿವೃದ್ದಿ ಅಧಿಕಾರಿ,ಗ್ರಾಮ ಸಹಾಯಕರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.


