
ಕಡಬ: ಸ್ಥಳೀಯವಾಗಿ ಮುದ್ರಣ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರಾಗಿರುವ ಕಡಬದ ಈಗಲ್ ಪ್ರಿಂಟ್ಸ್ ಸಂಸ್ಥೆಯಲ್ಲಿ ಪ್ರಪ್ರಥಮವಾಗಿ ಇದೀಗ ಅತ್ಯಾಧುನಿಕ UV (Ultraviolet) ಪ್ರಿಂಟಿಂಗ್ ತಂತ್ರಜ್ಞಾನ ಅಳವಡಿಕೆಯಾಗಿದೆ.


ಕಾಗದ, ಪ್ಲಾಸ್ಟಿಕ್ ಮೊದಲಾದ ಹಲವು ವಸ್ತುಗಳ ಮೇಲೆಯೇ ನೇರವಾಗಿ ಮುದ್ರಣ ಸಾಧ್ಯವಾಗುವ ಈ ತಂತ್ರಜ್ಞಾನವನ್ನು ಮುದ್ರಣ ಕ್ಷೇತ್ರದ ಕ್ರಾಂತಿಕಾರಕ ಹೆಜ್ಜೆಯೆಂದು ಪರಿಗಣಿಸಲಾಗುತ್ತಿದೆ. ಸಾಮಾನ್ಯ ಆಫ್ಸೆಟ್ ಹಾಗೂ ಡಿಜಿಟಲ್ ಪ್ರಿಂಟಿಂಗ್ಗಿಂತ ಭಿನ್ನವಾಗಿ, UV ಪ್ರಿಂಟಿಂಗ್ನಲ್ಲಿ ವಿಶೇಷ ಇಂಕ್ ಬಳಸಲಾಗುತ್ತದೆ. ಅಲ್ಟ್ರಾವಯೊಲೆಟ್ ಕಿರಣಗಳ ಸಹಾಯದಿಂದ ಇಂಕ್ ತಕ್ಷಣವೇ ಒಣಗುವುದರಿಂದ ಬಣ್ಣದ ತೇಜಸ್ಸು ದೀರ್ಘಕಾಲ ಉಳಿಯುತ್ತದೆ.
ಈ ತಂತ್ರಜ್ಞಾನದಿಂದ ಜಾಹೀರಾತು ಬೋರ್ಡ್ಗಳು, ಗಿಫ್ಟ್ ಐಟಂಗಳು, ಕಸ್ಟಮ್ ಡಿಸೈನ್ಗಳು ಮತ್ತು ಇಂಟೀರಿಯರ್ ಡೆಕೋರೇಶನ್ ಕ್ಷೇತ್ರಗಳಲ್ಲಿ ಹೆಚ್ಚು ಆಕರ್ಷಕ ಮುದ್ರಣವನ್ನು ಒದಗಿಸಲಾಗುತ್ತಿದೆ. ಮುದ್ರಣ ತಂತ್ರಜ್ಞಾನದಲ್ಲಿ ಅಳವಡಿಸಲಾದ ನವೀನ UV ಪ್ರಿಂಟಿಂಗ್ ವಿಧಾನವು ದೀರ್ಘಕಾಲಿಕವಾಗಿ ಮತ್ತು ಗುಣಮಟ್ಟದ ದೃಷ್ಟಿಯಿಂದ ವಿಶೇಷವಾಗಿರುತ್ತದೆ.
ದೀರ್ಘಕಾಲ ಬಾಳಿಕೆ: ಈ ತಂತ್ರಜ್ಞಾನದಲ್ಲಿ ಸಿದ್ಧವಾಗುವ ಮುದ್ರಣಗಳು ಬಹಳ ಕಾಲ ಉಳಿಯುತ್ತದೆ . ಜಲನಿರೋಧಕವಾಗಿಯೂ ಸ್ಕ್ರಾಚ್ ಪ್ರತಿರೋಧಕವಾಗಿಯೂ ಇರುತ್ತವೆ. ಇದರ ಪರಿಣಾಮವಾಗಿ ಮುದ್ರಣವು ಹಾಳಾಗದೆ, ಶುದ್ಧತೆ ಹಾಗೂ ಸೌಂದರ್ಯವನ್ನು ದೀರ್ಘಾವಧಿಗೂ ಕಾಪಾಡಿಕೊಳ್ಳುತ್ತದೆ.


ಅತ್ಯುತ್ತಮ ಗುಣಮಟ್ಟ: ಈ ಪ್ರಕ್ರಿಯೆಯಿಂದ ಸಿದ್ಧವಾಗುವ ಮುದ್ರಣಗಳು ಸಂಯೋಜನೆ ಗೊಂಡ ಬಣ್ಣಗಳು, ಸೂಕ್ಷ್ಮ ವಿನ್ಯಾಸಗಳು ಮತ್ತು 3D ಪರಿಣಾಮವನ್ನು ಹೊಂದಿರುತ್ತವೆ. ಜೊತೆಗೆ ಹೆಚ್ಚುವರಿ ರಕ್ಷಣೆಗೆ ವಿಶೇಷ UV ವಾರ್ನಿಷ್ ಲೇಪನವನ್ನು ನೀಡಲಾಗುತ್ತದೆ, ಇದು ಮುದ್ರಣದ ದೀರ್ಘಕಾಲಿಕ ಬಾಳ್ವಿಕೆಗೆ ಮತ್ತಷ್ಟು ಬಲ ನೀಡುತ್ತದೆ
ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ದೀರ್ಘಕಾಲಿಕ ಪ್ರಿಂಟಿಂಗ್ ಸೇವೆಗಳನ್ನು ನೀಡುವುದು ನಮ್ಮ ಉದ್ದೇಶ. ಇದರ ಭಾಗವಾಗಿ UV ಪ್ರಿಂಟಿಂಗ್ ಯಂತ್ರೋಪಕರಣಗಳನ್ನು ಅಳವಡಿಸಿದ್ದೇವೆ” ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9880817356 ನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
