
ಕಡಬ: ಕಸ್ವಿ ಹಸಿರು ದಿಬ್ಬಣ ನಿರ್ಮಾಣದ ರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ಕಿರುಚಿತ್ರ ಹರಿದ್ವರ್ಣ ಇದರ 13ನೇ ಪ್ರದರ್ಶನವು ಕಡಬದ ಜ್ಞಾನಸುಧಾ ವಿದ್ಯಾಲಯದಲ್ಲಿ ನಡೆಯಿತು.



ಸಂಸ್ಥೆಯ ಸ್ಥಾಪಕ ಬಿ ಎಲ್ ಜನಾರ್ಧನ್ ಅವರು ಮಾತನಾಡಿ, ಶಿಕ್ಷಕರು ಜಾಗೃತರಾದರೆ ನೂರಾರು ಮಕ್ಕಳು ಜಾಗೃತರಾದಂತೆ, ಈ ಕಿರುಚಿತ್ರವನ್ನು ನಮ್ಮ ಶಾಲೆಯಲ್ಲಿ ಪ್ರದರ್ಶಿಸಿದ್ದು ಇದರ ಸಂದೇಶವನ್ನು ನಿಜವಾಗಿಯೂ ಅನುಷ್ಠಾನಗೊಳಿಸುತ್ತಾರೆ ಎಂದು ಚಿತ್ರತಂಡಕ್ಕೆ ಶುಭ ಕೋರಿದರು.
ಮತ್ತೋರ್ವ ಅತಿಥಿ ಶಿವಪ್ರಸಾದ್ ರೈ ಮೈಲೇರಿ ಮಾತನಾಡಿ ,ಯೋಚನೆ ಮತ್ತು ಯೋಜನೆ ಎರಡು ಸೇರಿದಾಗ ಮಾತ್ರ ಯಾವುದೇ ಕಾರ್ಯ ಸಾರ್ಥಕತವಾಗಲು ಸಾಧ್ಯ ಆ ನಿಟ್ಟಿನಲ್ಲಿ ಈ ಕಿರುಚಿತ್ರ ತಂಡ ಒಂದೊಳ್ಳೆಯ ಯೋಜನೆಯನ್ನು ಹಾಕಿಕೊಂಡು ಪ್ರಕೃತಿಯ ಉಳಿವಿನತ್ತ ಶ್ರಮಿಸುತ್ತಿದೆ ಎಂದರು


ಯುವವಾಹಿನಿಯ ಪ್ರಶಾಂತ್ ಎನ್ ಎಸ್ ಅವರು ತಮ್ಮ ಹುಟ್ಟುಹಬ್ಬಕ್ಕೆ ಗಿಡ ನೆಟ್ಟ ಸವಿನೆನಪನ್ನು ಹಂಚಿಕೊಂಡರು.
ಶ್ರೀಮತಿ ಶ್ರದ್ಧಾ ಕೇಶವ ರಾಮಕುಂಜ, ಗಂಗಾಧರ ಕಡಬ ,ಕೇಶವ ರಾಮಕುಂಜ .ಉಪನ್ಯಾಸಕ ಡಾ ಪ್ರಸಾದ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
