ಕಡಬದಲ್ಲಿ ಸೌಜನ್ಯಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್

kadaba times

ಕಡಬ ಟೈಮ್ಸ್, ಪ್ರಮುಖ ಸುದ್ದಿ: ಸೌಜನ್ಯ ಪರ ಧ್ವನಿ ಎತ್ತಿದವರ ವಿರುದ್ದ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ.  ಜೊತೆಗೆ ಹೋರಾಟಗಾರರ ವಿರುದ್ದ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ , ಅವರಿಗೆ ಸುಳ್ಳೇ ನೈವೆದ್ಯ, ಸುಳ್ಳಿನದೇ ಅಭಿಷೇಕ ಎಂದು ಸೌಜನ್ಯಪರ ಹೋರಾಟದಲ್ಲಿ ಗುರುತಿಸಿಕೊಂಡಿರುವ  ಗಿರೀಶ್ ಮಟ್ಟಣ್ಣನವರ್  ಆಕ್ರೋಶ ಹೊರ ಹಾಕಿದರು.

kadaba times
uniq

ಅವರು ಅ.9 ರಂದು  ಕಡಬ ಆಡಳಿತ ಸೌಧದಲ್ಲಿ  ತಹಶೀಲ್ದಾರ್  ಅವರಿಗೆ ಜನಾಗ್ರಹ ಮನವಿ  ನೀಡಿ  ಬಳಿಕ ಮಾತನಾಡಿದರು. ಸುಳ್ಯ ಮತ್ತು ಕಡಬದಲ್ಲಿ ಹೆಚ್ಚು ಹೋರಾಟಗಾರು ಇದ್ದಾರೆ. ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದರೂ ಮಹೇಶ್ ಶೆಟ್ಟಿ ತಿಮರೋಡಿ ಮೆಟ್ಟಿ ನಿಂತು ಬಂದಿದ್ದಾರೆ. ಎಸ್.ಐ ಟಿ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದೆ ಎಂದರು.

 ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಅಂತರ ಮಾತನಾಡಿ, ಹೋರಾಟಗಾರರ ವಿರುದ್ದ ಸುಳ್ಳು ಕೇಸು ದಾಖಲಿಸಿ ಧಮನಿಸಿದರೂ   ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಹೆಣ್ಣು ಮಗುವಿಗೆ ನ್ಯಾಯ ಸಿಗಬೇಕೆಂದು ನಮ್ಮ ಹೋರಾಟದ ಮೂಲ ಆಶಯವಾಗಿದೆ. ಕೊಲೆ ಪ್ರಕರಣದ ನೈಜ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು, ಈಗಾಗಲೇ ಸರಕಾರ ರಚಿಸಿದ ಎಸ್.ಐ.ಟಿ ತನಿಖೆ ಪಾರದರ್ಶಕವಾಗಿ ನಡೆದು ನ್ಯಾಯಯುತ ತನಿಖೆಯಾಗಬೇಕೆಂದು ನಮ್ಮ ಒತ್ತಾಯವಾಗಿದೆ  ಎಂದರು.

kadaba times
kadaba times

ಹೋರಾಟದ ಬೆಂಬಲಿಗ ವಾಸು ಕೊಳ್ಳೆಸಾಗು ಮಾತನಾಡಿ,   ಕೇಸನ್ನು ಮುಚ್ಚಿ ಹಾಕಲು ಸಂಚು ರೂಪಿಸಲಾಗುತ್ತಿದೆ ,ನ್ಯಾಯಯುತ ತನಿಖೆಯಾಗುತ್ತಿದೆ ಗ್ರಾಮ ಮಟ್ಟದಲ್ಲಿ ಹೋರಾಟವಾಗಬೇಕು, ಸರ್ಕಾರವನ್ನು ನಡುಗಿಸುವ ಮಟ್ಟದಲ್ಲಿ ಹೋರಾಟವಾಗಬೇಕೆಂದರು.ಸೌಜನ್ಯ ಹೋರಾಟ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ಸರ್ವೋತ್ತಮ ಗೌಡ ,ಕಾರ್ಯದರ್ಶಿ ಶರತ್ ರೈ, ಭೀಮ್ ಆರ್ಮಿ ಸಂಘಟನೆಯ ದ.ಕ ಜಿಲ್ಲಾ ಉಪಾಧ್ಯಕ್ಷ   ರಾಘವ ಕಳಾರ,  ಹೋರಾಟ ಬೆಂಬಲಿಗರಾದ  ರುಕ್ಮಯ ಗೌಡ , ಯೋಗೀಶ್ ಪಂಜೋಡಿ,  ವಿಜಯ್ ಕೊಣಾಜೆ , ಪ್ರತೀಕ್ ಕಾರ್ಕಳ. ,ಸುರೇಶ್,  ಪ್ರಶಾಂತ್ , ಪುರಂದರ ಕೊಡಿಂಬಾಳ, .ಬಾಲಣ್ಣ ಗೌಡ ಸುಳ್ಯ , ನಾರಾಯಣ ಗೌಡ ಬೀಡು,  ಸೇರಿದಂತೆ ಸೌಜನ್ಯ ಹೋರಾಟ ಪ್ರಮುಖರು ಹಾಜರಿದ್ದರು.ಕಡಬ ಉಪ ತಹಶೀಲ್ದಾರ್ ಗೋಪಾಲ್ ಅವರು ಮನವಿ ಸ್ವೀಕರಿಸಿ ಸರ್ಕಾರಕ್ಕೆ  ತಮ್ಮ  ಮನವಿಯನ್ನು ತಲುಪಿಸಲಾಗುವುದು ಎಂದರು.

Related Articles

Latest Articles