ಕಡಬದಲ್ಲಿ ನೂರು ದಿನ ಪೂರೈಸಿದ ಉಚಿತ ಯೋಗ ಶಿಬಿರ

kadaba times

ಕಡಬ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಯೋಗ ಶಿಕ್ಷಕ ಅಶೋಕ್ ರೈ ನೇತೃತ್ವದಲ್ಲಿ ಕಡಬ  ಶ್ರೀ ಕಂಠಸ್ವಾಮಿ  ಶ್ರೀ ಮಹಾಗಣಪತಿ  ದೇವಸ್ಥಾನದ ಸಭಾಂಗಣದಲ್ಲಿ ನಡೆಯುತ್ತಿದ್ದ ಉಚಿತ ಯೋಗಾಭ್ಯಾಸ ಶಿಬಿರವು  ಅ.12ಕ್ಕೆ ನೂರು ದಿನಗಳನ್ನು ಪೂರೈಸಿದೆ.

kadaba times
uniq

ಉದ್ಯಮಿಯಾಗಿದ್ದರೂ ತಾನು ಕಲಿತ ಯೋಗವನ್ನು ಶಿಬಿರದ ಮೂಲಕ  ಕಲಿಕಾ ಆಸಕ್ತರಿಗೆ ಕಲಿಸಿದ್ದಾರೆ. ಉಸಿರಾಟದ ನಿಯಂತ್ರಣ, ದೇಹದ ಭಂಗಿಗಳು (ಆಸನಗಳು), ಮತ್ತು ಧ್ಯಾನವನ್ನು ಒಳಗೊಂಡ ಈ ಯೋಗಾಭ್ಯಾಸವನ್ನು   ಉಚಿತವಾಗಿ ನೀಡಿ ಜನರಲ್ಲಿ  ಆರೋಗ್ಯದ ಜಾಗೃತಿ ಮತ್ತು ಕಾಳಜಿ  ಮೂಡಿಸಿದ್ದಾರೆ. ಬಿಳಿನೆಲೆ ಶ್ರೀ ಗೋಪಾಲಕೃಷ್ಣ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪೂರೈಸಿ, ಪದವಿಯನ್ನು  ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ  ಪೂರೈಸಿದ್ದಾರೆ.  ಹಲವಾರು ವರ್ಷಗಳಿಂದ ಉಚಿತ ಯೋಗ ತರಬೇತಿಯನ್ನು ನೀಡುತ್ತಾ ಬಂದಿದ್ದಾರೆ.

kadaba times
kadaba times

ಶಿಕ್ಷಕ ಸತೀಶ್ ಭಟ್ ಅವರಿಂದ ಯೋಗ ಶಿಕ್ಷಣವನ್ನು ಪಡೆದು ಯೋಗವನ್ನೇ ತನ್ನ ಜೀವನದ ಅವಿಬಾಜ್ಯ ಅಂಗವನ್ನಾಗಿ ಮಾಡಿಕೊಂಡಿದ್ದರು. ಶಿಕ್ಷಣವನ್ನು ಪಡೆಯುತ್ತಿರುವಾಗಲೇ ವಾರದ ರಜಾದಿನದಲ್ಲಿ ಹಲವು ಶಾಲಾ ಕಾಲೇಜುಗಳಲ್ಲಿ  ಯೋಗ ಶಿಕ್ಷಣ ನೀಡಿದ್ದರು. ಅಶೋಕ್ ರೈಯವರು ಪ್ರಸ್ತುತ ಕಡಬದಲ್ಲಿ ನೆಲೆಸಿದ್ದಾರೆ.

Related Articles

Latest Articles