
ಕಡಬ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಾಲೇಶ್ವರ ವಾರ್ಡು ಸದಸ್ಯ ಹಾಜಿ ಕೆ.ಎಂ ಹನೀಫ್ ಕಡಬ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.


ಪ.ಪಂ ಅಧ್ಯಕ್ಷೆ ತಮನ್ನಾ ಜಬೀನ್, ಉಪಾಧ್ಯಕ್ಷೆ ನೀಲಾವತಿ ಶಿವರಾಮ್,ಮುಖ್ಯಾಧಿಕಾರಿ ಲೀಲಾವತಿ ಹಾಗೂ ವಾರ್ಡು ಸದಸ್ಯರು ಹಾಜರಿದ್ದರು.


ಕೆ.ಎಂ ಹನೀಫ್ ಅವರು ಇತ್ತೀಚಿಗೆ ನಡೆದ ಕಡಬ ಪಟ್ಟಣ ಪಂಚಾಯತ್ ಚುಣಾವಣೆಯಲ್ಲಿ ಮಾಲೇಶ್ವರ ವಾರ್ಡ್ ನಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಈ ಹಿಂದೆ ಗ್ರಾಮ ಪಂಚಾಯತ್ ಆಡಳಿತದ ಸಮಯದಲ್ಲಿ ಸತತ ನಾಲ್ಕು ಬಾರಿ ಜಯಗಳಿಸಿ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದರು .
