ಕೋಡಿಂಬಾಳದಲ್ಲಿ ರಸ್ತೆ ಬದಿ ನಿಂತಿದ್ದ ಮಹಿಳೆಗೆ ಗುದ್ದಿದ ಬೈಕ್

kadaba times

ಕಡಬ: ರಸ್ತೆ ಬದಿ ನಿಂತುಕೊಂಡಿದ್ದ ಮಹಿಳೆಯೊಬ್ಬರಿಗೆ ಬೈಕ್ ಡಿಕ್ಕಿಹೊಡೆದ ಪರಿಣಾಮ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಅ.16 ರಂದು ನಡೆದಿದ್ದು ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಕೋಡಿಂಬಾಳ ಗ್ರಾಮದ ಯಶೋಧಾ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು.  ಮಹಿಳೆಯು ಕಡಬ ದಿಂದ ಕೋಡಿಂಬಾಳಕ್ಕೆ ಪ್ರಯಾಣಿಸಿ  ಇಳಿದು ಮಧ್ಯಾಹ್ನ 01-45 ಗಂಟೆ  ಸಮಯಕ್ಕೆ  ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ  ಬೈಕ್‌ ಸವಾರನೊಬ್ಬ ಬೈಕ್‌ ನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಡಿಕ್ಕಿಹೊಡೆದಿರುವುದಾಗಿ ಹೇಳಲಾಗಿದೆ.

ಇದರಿಂದ ಮಹಿಳೆಯ ಎಡ ಕಾಲಿಗೆ ಸೊಂಟಕ್ಕೆ,  ಬೆನ್ನಿಗೆ ಬಲಗಡೆ ತಲೆಯ ಹಿಂಭಾಗ ಮತ್ತು ದೇಹದ ಇತರ ಭಾಗಗಳಿಗೆ ಗಾಯವಾಗಿದ್ದು ಅಲ್ಲಿ ಸೇರಿದವರು ಮತ್ತು ಬೈಕ್‌  ಸವಾರ  ಸೇರಿ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಹೆಚ್ಚಿನ  ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತೆಗೆ ಕರೆದಕೊಂಡು ಹೋಗಿರುತ್ತಾರೆ. ಅಲ್ಲಿ ಒಳ ರೋಗಿಯಾಗಿ ದಾಖಲಿಸಿ  ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ.

kadaba times
kadaba times

 ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ: 71/2025. ಕಲಂ: 281, 125 (a) BNS-2023. ಯಂತೆ ಪ್ರಕರಣ ದಾಖಲಾಗಿರುತ್ತದೆ.

Related Articles

Latest Articles