ಕೋಡಿಂಬಾಳದಲ್ಲಿ ಕೋಳಿಮೊಟ್ಟೆ ಲೈನ್ ಸೇಲ್ ಮಾಡುತ್ತಿದ್ದ ವ್ಯಕ್ತಿಗೆ ಗುದ್ದಿದ ಬೈಕ್

kadaba times

ಕಡಬ: ಇಲ್ಲಿನ ಠಾಣಾ ವ್ಯಾಪ್ತಿಯ ಕೋಡಿಂಬಾಳದಲ್ಲಿ ನಿಲ್ಲಿಸಿದ್ದ   ಕೋಳಿಮೊಟ್ಟೆ ಲೈನ್ ಸೇಲ್  ಮಾಡುತ್ತಿದ್ದ ವಾಹನಕ್ಕೆ ಬೈಕ್ ಡಿಕ್ಕಿಯಾದ ಘಟನೆ ನಡೆದಿದ್ದು  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಅ.11 ರಂದು ಕೋಡಿಂಬಾಳದ  ಅಂಗಡಿಯೊಂದರ  ರಸ್ತೆ ಬದಿಯಲ್ಲಿ ಲೈನ್ ಸೇಲ್ ಗಾಡಿ ಪಾರ್ಕಿಂಗ್ ಮಾಡಿ  ಸ್ಟೋರ್ ಗೆ  ಲೈನ್ ಸೇಲ್ ಸಹಾಯಕ   ಕೋಳಿ ಮೊಟ್ಟೆ ಕೊಟ್ಟು ವಾಪಾಸು ಬಳಿ ರಸ್ತೆಯ ಬದಿಯಲ್ಲಿ ಪಾದಾಚಾರಿಯಾಗಿ ನಡೆದುಕೊಂಡು ಬರುತ್ತಿದ್ದರು.

ಈ ಸಂದರ್ಭ  ಎದುರುಗಡೆಯಿಂದ  ಓರ್ವ ಬೈಕ್ ಸವಾರ ತನ್ನ  ವಾಹನವನ್ನು ಅಜಾಗರೂಕತೆ  ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಗೆ ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ  ಸಹಾಯಕ  ಮಹಮ್ಮದ್ ಇರ್ಫಾನ್  ಗೆ  ಡಿಕ್ಕಿ ಹೊಡೆದಿದೆ.  ಈ ವೇಳೆ  ರಸ್ತೆ ಬದಿ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಕಾಲಿನ ಎಡಭಾಗಕ್ಕೆ ಗುದ್ದಿದ ಗಾಯ ಹಾಗೂ ಬಲಕೈ ಭಾಗಗಗಳಿಗೆ ತರಚಿದ ರಕ್ತ ಗಾಯವಾಗಿದೆ.

kadaba times
kadaba times

ಬೈಕ್ ಸವಾರ ಹಾಗೂ ಗಾಯಾಳುವನ್ನು ಸಾರ್ವಜನಿಕರು  ಉಪಚರಿಸಿ  ಚಿಕಿತ್ಸೆಯ ಬಗ್ಗೆ ಕಡಬದ ಖಾಸಗಿ   ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಬಗ್ಗೆ ಸುಳ್ಯದ ಖಾಸಗಿ ಆಸ್ಪತ್ರೆಗೆ  ಆಂಬುಲೆನ್ಸ್ ನಲ್ಲಿ ಕರೆತಂದು ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.

ಬೈಕ್ ಸವಾರ ದೊಡ್ಡ ಕೊಪ್ಪದ  ಮಹೇಶ್ ಎಂಬಾತ ಚಲಾಯಿಸುತ್ತಿದ್ದ ಬೈಕ್ ಇದಾಗಿದೆ. ಬೈಕ್ ಸವಾರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ.   ಈ ಬಗ್ಗೆ ಲೈನ್ ಸೇಲ್ ಡ್ರೈವರ್ ಅಬ್ದುಲ್ ನಿಜಾರ್ ಎಂಬವರು ನೀಡಿದ ದೂರಿನಂತೆ   ಕಡಬ ಪೊಲೀಸ್ ಠಾಣಾ ಅ.ಕ್ರ: 66/2025. ಕಲಂ: 281, 125 (a) BNS-2023. ಯಂತೆ ಪ್ರಕರಣ ದಾಖಲಾಗಿದೆ.

Related Articles

Latest Articles