14 ವರ್ಷದ ಅಪ್ರಾಪ್ತೆ ಐದು ತಿಂಗಳ ಗರ್ಭಿಣಿ: ಯುವಕನನ್ನು ವಶಕ್ಕೆ ಪಡೆದ ಪೊಲೀಸರು

kadaba times

ಸುಳ್ಯ: ಅಪ್ರಾಪ್ತೆ ಯುವತಿಯೊಬ್ಬಳು ಐದು ತಿಂಗಳ‌ ಗರ್ಭಿಣಿಯಾಗಿದ್ದು ದೂರಿನ ಮೇರೆಗೆ ಯುವಕನನ್ನು ಸುಳ್ಯ ಪೋಲೀಸರು‌ ಬಂಧಿಸಿರುವುದಾಗಿ ತಿಳಿದು ಬಂದಿದೆ.

kadaba times
uniq

ಸುಳ್ಯದ ಮಂಡೆಕೋಲು ಗ್ರಾಮದ ದಿ*ವಾಕರ  ಬಂಧಿತ ಯುವಕ.

ಯುವಕ ಮತ್ತು 14 ವರ್ಷದ ಅಪ್ರಾಪ್ತೆ ಸಲುಗೆಯಿಂದಿದ್ದರೆಂದೂ,  ಯುವಕ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ  ಎಂದು ಆರೋಪಿಸಲಾಗಿದೆ.

kadaba times
kadaba times

ಕಳೆದ ವಾರ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಮನೆಯವರು ಸುಳ್ಯ ಆಸ್ಪತ್ರೆಗೆ ‌ಕರೆದುಕೊಂಡು ಬಂದಿದ್ದು ವೈದ್ಯರು ಪರೀಕ್ಷಿಸಿದಾಗ ಐದು ತಿಂಗಳ‌ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ.

ಮನೆಯವರು ಸುಳ್ಯ ಪೋಲೀಸರಿಗೆ ದೂರು ನೀಡಿದ ಹಿನ್ನಲೆ ಪೊಲೀಸರು ವಿಚಾರಣೆ ನಡೆಸಿ ಯುವಕನ್ನು ವಶಕ್ಕೆ ಪಡೆದರೆಂದು ತಿಳಿದು‌ಬಂದಿದೆ. ಸುಳ್ಯ ಠಾಣೆಯಲ್ಲಿ ಪೋಕ್ಸೊ ಪ್ರಕರಣದಡಿ ಕೇಸು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Related Articles

Latest Articles