Income Tax Returns: ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಂದು (ಸೆ.16) ಕೊನೆಯ ದಿನಾಂಕ

kadaba times

2025-26ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ನಿಗದಿಪಡಿಸಿದ್ದ ಗಡುವನ್ನು ತೆರಿಗೆ ಇಲಾಖೆ ಒಂದು ದಿನದ ಮಟ್ಟಿಗೆ ವಿಸ್ತರಿಸಿದೆ. ಆರಂಭಿಕ ಗಡುವು ಜುಲೈ 31 ಆಗಿತ್ತು. ಆದರೆ ಆ ಬಳಿಕ ಸೆಪ್ಟೆಂಬರ್ 15ರವರೆಗೆ ಇದನ್ನು ವಿಸ್ತರಿಸಲಾಗಿತ್ತು. ಕೊನೆಕ್ಷಣದಲ್ಲಿ ಒಂದು ದಿನದ ಮಟ್ಟಿಗೆ ವಿಸ್ತರಿಸಿ ಸೆಪ್ಟೆಂಬರ್ 16ರ ಸಂಜೆಯವರೆಗೂ ಐಟಿ ರಿಟರ್ನ್ಸ್ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

kadaba times
uniq

 

ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಸೋಮವಾರ ಇಲಾಖೆಯ ವೆಬ್ಸೈಟ್ incometax.gov.in ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬಗ್ಗೆ ಹಲವು ಮಂದಿ ತೆರಿಗೆ ಪಾವತಿದಾರರು ದೂರು ನೀಡಿದ ಹಿನ್ನೆಲೆಯಲ್ಲಿ ಒಂದು ದಿನದ ಮಟ್ಟಿಗೆ ವಿಸ್ತರಿಸಿರುವುದರಿಂದ ತೆರಿಗೆ ಪಾವತಿದಾರರು ನಿರಾಳವಾಗಿದ್ದಾರೆ. ಡುವು ಮುಕ್ತಾಯಕ್ಕೆ ಕೆಲವೇ ಕ್ಷಣಗಳಿರುವಾಗ ಒಂದು ದಿನದ ಮಟ್ಟಿಗೆ ಗಡುವು ವಿಸ್ತರಿಸಿರುವುದನ್ನು ಇಲಾಖೆ ಪ್ರಕಟಿಸಿದೆ. “ತೆರಿಗೆಪಾವತಿದಾರರ ಗಮನಕ್ಕೆ! 2025-26ನೇ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಮೂಲ ದಿನಾಂಕ 31ನೇ ಜುಲೈ 2025 ಆಗಿತ್ತು. ಇದನ್ನು 2025ರ ಸೆಪ್ಟೆಂಬರ್ 15ರವರೆಗೆ ವಿಸ್ತರಿಸಲಾಗಿತ್ತು. 2025-26ನೇ ಮೌಲ್ಯಮಾಪನ ವರ್ಷಕ್ಕೆ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಕೊನೆಯ ದಿನವನ್ನು 16ನೇ ಸೆಪ್ಟೆಂಬರ್ 2025ಕ್ಕೆ ವಿಸ್ತರಿಸಲು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ನಿರ್ಧರಿಸಿದೆ” ಎಂದು ಎಕ್ಸ್ ಪೋಸ್ಟ್ ನಲ್ಲಿ ಇಲಾಖೆ ಪ್ರಕಟಿಸಿದೆ.

kadaba times
kadaba times

 

“ಈ ಬಳಕೆ ಸೌಲಭ್ಯವನ್ನು ಸಶಕ್ತಗೊಳಿಸುವ ಉದ್ದೇಶದಿಂದ ಇ-ಸಲ್ಲಿಕೆ ಪೋರ್ಟೆಲ್ ಸೆಪ್ಟೆಂಬರ್ 16ರಂದು ಮಧ್ಯರಾತ್ರಿ 12.00 ಗಂಟೆಯಿಂದ ಮುಂಜಾನೆ 2.30ರವರೆಗೆ ನಿರ್ವಹಣೆ ಮೋಡ್ ನಲ್ಲಿ ಇತ್ತು” ಎಂದು ಇಲಾಖೆ ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 15ರ ಗಡುವು ಸಮೀಪಿಸುತ್ತಿದ್ದಂತೆ ಸೋಮವಾರ ಸಂಜೆ 7 ಕೋಟಿ ಮಂದಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದಾರೆ. ಆದಾಗ್ಯೂ ಕೆಲ ಮಂದಿ ಆದಾಯ ತೆರಿಗೆ ಇಲಾಖೆಯ ಇ-ಸಲ್ಲಿಕೆ ಪೋರ್ಟೆಲ್ ಮತ್ತು ಮುಂಗಡ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷದ ಬಗ್ಗೆ ದೂರು ನೀಡಿದ್ದರು ಎಂದು ಇಲಾಖೆ ಹೇಳಿದೆ.

Related Articles

Latest Articles