ನೆಲ್ಯಾಡಿ ಪೇಟೆಯ ವಿದ್ಯುತ್ ಕಂಬದಲ್ಲೇ ಹೊಸ ಬಟ್ಟೆಗಳು ನೇತಾಡುತ್ತಿವೆ!

kadaba times

ನೆಲ್ಯಾಡಿ: ನೆಲ್ಯಾಡಿ ಮುಖ್ಯ ಪೇಟೆಯ  ಪಾದಚಾರಿ ಮಾರ್ಗದ ಬದಿಯಲ್ಲಿ ಅಳವಡಿಸಿರುವ ಹೈಟೆನ್ಶನ್ ವಿದ್ಯುತ್ ಕಂಬವನ್ನೇ ಬಟ್ಟೆ ಅಂಗಡಿಯ ಹ್ಯಾಂಗರ್ ಆಗಿ  ಬಳಸಿರುವುದು ಕಂಡು ಬಂದಿದೆ.

kadaba times
uniq

ಬಟ್ಟೆ ಅಂಗಡಿ ವ್ಯಾಪಾರಿಯೊಬ್ಬರು  ಜನರ ಗಮನ ಸೆಳೆಯಲು ತನ್ನ ಮಳಿಗೆಯ ಬಟ್ಟೆಗಳನ್ನು ನೇರವಾಗಿ ವಿದ್ಯುತ್ ಕಂಬಕ್ಕೆ  ನೇತುಹಾಕಿರುವುದಾಗಿದೆ.

ವಿದ್ಯುತ್ ಕಂಬಗಳಲ್ಲಿ ಯಾವುದೇ ವಸ್ತುಗಳನ್ನು ನೇತು ಹಾಕುವುದು ಕಾನೂನುಬಾಹಿರ. ಆದರೆ ನಿರ್ಲಕ್ಷ್ಯದಿಂದ ಕಂಬವನ್ನೇ ಮಳಿಗೆಯ ಪ್ರದರ್ಶನ ಸ್ಥಳವನ್ನಾಗಿ ಮಾರ್ಪಡಿಸಿರುವ ಈ ನಡೆಯನ್ನು ಸಾರ್ವಜನಿಕರು    ಖಂಡಿಸಿದ್ದಾರೆ.

kadaba times
kadaba times

ಏನಾದರೂ ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಬಟ್ಟೆಗಳು ಕಂಬಕ್ಕೆ ತಾಗಿದರೆ ಹೊತ್ತಿ ಉರಿಯುವ ಅಪಾಯವಿದ್ದು, ದಾರಿಹೋಕರ ಜೀವಕ್ಕೂ ಗಂಭೀರ ಅಪಾಯ ಎದುರಾಗುವ ಸಾಧ್ಯತೆ ಇದೆ. ಸ್ಥಳೀಯ ಆಡಳಿತ ಹಾಗೂ  ಮೆಸ್ಕಾಂ ಇಲಾಖೆಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related Articles

Latest Articles