ವಳಕಡಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರ ಉದ್ಘಾಟನೆ

ನನಗೂ ರಾಷ್ಟ್ರಪ್ರೇಮ ಮತ್ತು ನಾಯಕತ್ವದ ಗುಣಗಳನ್ನು ತಿಳಿಸಿ ಕೊಟ್ಟಿದೆ-ಮಾಜಿ ಶಾಸಕ ಸಂಜೀವ ಮಠಂದೂರು

kadaba times

ಕಡಬ/ಅಲಂಕಾರು:  ಸರ್ಕಾರಿ ಪದವಿಪೂರ್ವ ಕಾಲೇಜಿನ  ರಾಷ್ಟ್ರೀಯ ಸೇವಾ ಯೋಜನೆ ಘಟಕದ ಈ ಸಾಲಿನ ವಾರ್ಷಿಕ  ಶಿಬಿರವು ಸೆ.18 ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆ ವಳಕಡಮದ ವಠಾರದಲ್ಲಿ ಉದ್ಘಾಟನೆಗೊಂಡಿತು.

kadaba times
uniq

ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಮಾತನಾಡಿ,  ರಾ. ಸೇ. ಯೋ ವಿದ್ಯಾರ್ಥಿ ಗಳಿಗೆ ದೇಶಪ್ರೇಮ, ನಾಯಕತ್ವ, ಮಾನವೀಯ ಸಂಬಂಧಗಳನ್ನು ತಿಳಿಸಿ ಕೊಡುವುದರ ಮೂಲಕ ಯುವಜನತೆಯನ್ನು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿ ಕೊಳ್ಳಲು ಅವಕಾಶವನ್ನು ನೀಡುತ್ತದೆ.  ನಾನೂ ಕೂಡ ವಿದ್ಯಾರ್ಥಿ ದೆಸೆಯಲ್ಲಿ ರಾ ಸೇ ಯೋಜನೆಯ ಸ್ವಯಂಸೇವಕನಗಿದ್ದೆ,  ಈ ಶಿಬಿರ ನನಗೂ ರಾಷ್ಟ್ರಪ್ರೇಮ ಮತ್ತು ನಾಯಕತ್ವದ ಗುಣಗಳನ್ನು ತಿಳಿಸಿ ಕೊಟ್ಟಿದೆ ಎಂದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ರಘು ಬೆಳ್ಳಿಪಾಡಿ ಸಹಿತ ಹಲವು ಪ್ರಮುಖರು ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಂಶುಪಾಲ ಹಾಗೂ ಶಿಬಿರದ ನಿರ್ದೇಶಕ ಡಿ ದೇವರಾಜು,  ಸಹಾಯಕ ಶಿಬಿರ ನಿರ್ದೇಶಕ ವಾಸುದೇವ ಗೌಡ ಕೋಲ್ಪೆ ಪ್ರಸ್ತಾವಿಕವಾಗಿ ಮಾತನಾಡಿದರು.

kadaba times
kadaba times

ಕಾರ್ಯಕ್ರಮಾಧಿಕಾರಿ ಸಲೀನ್ ಕೆ.ಪಿ., ಸಹಾಯಕ ಕಾರ್ಯಕ್ರಮಾಧಿಕಾರಿ ಶ್ರೀಮತಿ ಲಾವಣ್ಯ ಹೇಮಂತ್,  ನವೀನ್ ಎಸ್.ಎಸ್,  ಶಿಬಿರಾಧಿಕಾರಿಗಳಾದ ಕಬೀರ್ ಟಿ.,  ಕುಮಾರಿ ಮಲ್ಲಿಕಾ,  ಕುಮಾರಿ ಶ್ರುತಿ ,ಘಟಕದ  ನಾಯಕರ  ಅರ್ಪಿತ್, ಕು| ದೀಪಿಕಾ , ವಿದ್ಯಾರ್ಥಿ ನಾಯಕ  ಜೋಶ್ವ ಸೇರಿದಂತೆ ಕಾಲೇಜಿನ ಉಪನ್ಯಾಸಕ ವೃಂದ, ಶಿಬಿರಾರ್ಥಿಗಳು , ಊರಿನ ಪ್ರಮುಖರು ಜೊತೆಯಾದರು.

ಈ ಶಾಲಾ ವಠಾರದಲ್ಲಿ ಶಿಬಿರದ ಭಾಗವಾಗಿ ಶ್ರಮದಾನ, ಶೈಕ್ಷಣಿಕ ಉಪನ್ಯಾಸ, ಮಾಹಿತಿ ಶಿಬಿರ, ವಿವಿಧ ಸಾಂಸ್ಕೃತಿಕ  ಕಾರ್ಯಕ್ರಮಗಳು ಜರುಗಲಿದೆ.

Related Articles

Latest Articles