35 ವರ್ಷಗಳ ಬಳಿಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಯಕ್ಷಗಾನ ಮೇಳ ಮತ್ತೆ ಆರಂಭ

‘ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಮಹಾತ್ಮೆ ಮತ್ತು’ ‘ಸರ್ಪ ಸಂಪತ್ತ್’ ಎಂಬ ಎರಡು ಹೊಸ ಪ್ರಸಂಗಗಳೊಂದಿಗೆ ಪ್ರದರ್ಶನಕ್ಕೆ ಸಜ್ಜಾದ ಕಲಾವಿದರು

kadaba times

ಕಡಬ ಟೈಮ್ಸ್,ಕುಕ್ಕೆ ಸುಬ್ರಹ್ಮಣ್ಯ: ಬರೋಬ್ಬರಿ  35 ವರ್ಷಗಳ ಬಳಿಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಯಕ್ಷಗಾನ ಮೇಳ ಮತ್ತೆ ಪ್ರಾರಂಭವಾಗಲಿದೆ. ಆದಿಸುಬ್ರಹ್ಮಣ್ಯ  ಕೃ‍ಪಾಪೋಷಿತ ಯಕ್ಷಗಾನ ನಾಟಕಸಭಾ ಸುಬ್ರಹ್ಮಣ್ಯ ಎಂಬ ಹೆಸರಿನ ಬಯಲಾಟ ಮೇಳವು 1990ರವರೆಗೆ ತಿರುಗಾಟ ನಡೆಸಿತ್ತು.

kadaba times
uniq

ಪುತ್ತೂರು ಬನ್ನೂರಿನ ಶೀನಪ್ಪ ಭಂಡಾರಿ ಇದನ್ನು ಮುನ್ನಡೆಸುತ್ತಿದ್ದರು. ಅವರಿಗೆ ವಯಸ್ಸಾದ ನಂತರ ಮೇಳದ ತಿರುಗಾಟ ನಿಂತಿತ್ತು. ಇದೀಗ ಮತ್ತೆ   ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಹೆಸರಿನಲ್ಲಿ ತಿರುಗಾಟ ಪ್ರಾರಂಭಿಸಲಿರುವ ಮೇಳವು, ಸ್ಥಳ ಪುರಾಣದ ಕಥಾಹಂದರ ಹೊಂದಿರುವ ‘ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಮಹಾತ್ಮೆ’ ಹಾಗೂ  ಸಿ. ರಾಘವೇಂದ್ರ ಕುಂಬ್ಳೆ ವಿರಚಿತ ‘ಸರ್ಪ ಸಂಪತ್ತ್’ ಎಂಬ ಎರಡು ಹೊಸ ಪ್ರಸಂಗಗಳೊಂದಿಗೆ ಪ್ರಸಂಗ ಪ್ರದರ್ಶನಕ್ಕೆ ಸಜ್ಜಾಗಿದೆ.

ಮಾಹಿತಿಯ ಪ್ರಕಾರ   ಹಿಮ್ಮೇಳ –  ಮುಮ್ಮೇಳ ಸೇರಿ ಸುಮಾರು 32 ಕಲಾವಿದರು ಈ ಮೇಳದಲ್ಲಿದ್ದಾರೆ.  ಬಪ್ಪನಾಡು ಮೇಳ, ಬೆಂಕಿನಾಥೇಶ್ವರ ಮೇಳ ಸೇರಿದಂತೆ ವಿವಿಧ    ತಿರುಗಾಟ ಮೇಳಗಳಲ್ಲಿದ್ದ ಕಲಾವಿದರು ಈ ಮೇಳಕ್ಕೆ ಸೇರ್ಪಡೆಗೊಂಡಿದ್ದಾರೆ.

kadaba times
kadaba times

ಡಿಸೆಂಬರ್ 5 ರಂದು ಕುಕ್ಕೆ ಕ್ಷೇತ್ರದಲ್ಲಿ ಮೊದಲ ಯಕ್ಷಗಾನ ಪ್ರದರ್ಶನ ನೀಡಿ, ನಂತರ ಮೇಳವು ತಿರುಗಾಟಕ್ಕೆ ಮುನ್ನುಡಿ ಬರೆಯಲಿದೆ. ಈಗಾಗಲೇ ಭಕ್ತರು 50ಕ್ಕೂ ಹೆಚ್ಚು ಆಟಗಳು ಮುಂಗಡ ಕಾಯ್ದಿರಿಸಿದ್ದಾರೆ.

 

Related Articles

Latest Articles