ಕಡಬ ಮುಖ್ಯ ಪೇಟೆಯಲ್ಲಿಯೇ ದಿನ ನಿತ್ಯ ಸುತ್ತಾಡುವ ಸಾಕುಪ್ರಾಣಿಗಳು

kadaba times

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಅತೀ ಹೆಚ್ಚು ಜನ ಸಂಚಾರವನ್ನು 
ಹೊಂದಿ  ವ್ಯಾಪಾರ ವಹಿವಾಟು ಬಿರುಸಾಗಿ ನಡೆಯುವ ಕಡಬ ಪೇಟೆಯಲ್ಲಿ ಸಾಕು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ.    ಪ್ರಮುಖ  ವಾಣಿಜ್ಯ
ಸಂಕೀರ್ಣಗಳ  ಎದುರಿನ
ರಸ್ತೆಗಳಲ್ಲಿ ದನ, ಆಡುಗಳ  ಕಾಟ
ನಿರಂತರ ಮುಂದು ವರೆದಿದ್ದು ಮುಖ್ಯ   ರಸ್ತೆಯಲ್ಲಿ
ಸಾಗಲು ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆಯಾಗುತ್ತಿದೆ.

kadaba times
uniq


ಗುಂಪು ಗುಂಪಾಗಿ ರಸ್ತೆ ಮಧ್ಯೆಯೇ ದನಗಳು ಮತ್ತು ಆಡುಗಳು ನಿಲ್ಲುವುದರಿಂದ ವಾಹನ ಸವಾರರು ಭಯದ ನಡುವೆಯೇ ವಾಹನ ಚಲಾಯಿಸಬೇಕಿದೆ. ಈ ಹಿಂದೆ  ದನ ಅಡ್ಡ
ಬಂದ ಕಾರಣ ದ್ವಿಚಕ್ರ ಸವಾರನೊಬ್ಬ ನಡು ರಸ್ತೆಗೆ ಎಸೆಲ್ಪಟ್ಟು ಅಪಾಯದಿಂದ ಪಾರಾಗಿದ್ದರು  .ಸಾಕು ಪ್ರಾಣಿಗಳ ಉಪಟಳದ ಜೊತೆಗೆ  ಅಗಾಗ 
ಆಡು ಮತ್ತು ಬೀದಿನಾಯಿಗಳ ನಡುವೆ ಕಾಳಗವೂ ನಡೆಯುತ್ತಿದೆ.


ಆಡು ದನಗಳು  ಎಲ್ಲಿ
ತಮ್ಮ ಮೇಲೆ ದಾಳಿ ಮಾಡುತ್ತವೋ ಎಂಬ ಆತಂಕದಲ್ಲಿ ಪಾದ ಚಾರಿಗಳು ಸಾಗುವಂತಾಗಿದೆ .ಪಟ್ಟಣ ವ್ಯಾಪ್ತಿಯಲ್ಲಿನ ಕೆಲವರು ಹಗಲು ವೇಳೆಯಲ್ಲಿ ದನ ಮತ್ತು ಆಡು
ಗಳನ್ನು ಹೊರಗೆ ಬಿಟ್ಟುಬಿಡುವುದರಿಂದ ಅವು ಎಲ್ಲೆಂದರಲ್ಲಿ ಆಹಾರ ಹರಸುತ್ತಾ ಓಡಾಡುವುದು ಸಾಮಾನ್ಯವಾಗಿದೆ. ಆಹಾರ ಸಿಗದಿದ್ದಾಗ ರಸ್ತೆಬದಿಯಲ್ಲಿನ ತರಕಾರಿ ತ್ಯಾಜ್ಯದ ಕಡೆಗೆ ತೆರಳುವ ದನಗಳು, ಅಲ್ಲಿಯೇ ತಿಂದು, ಮಲಗುವ ಪ್ರವೃತ್ತಿ ಬೆಳೆಸಿಕೊಂಡಿವೆ.

kadaba times
kadaba times


ಕಡಬ ಗ್ರಾ.ಪಂ ಅಸ್ತಿತ್ವದಲ್ಲಿ ಇದ್ದ
ಸಂದರ್ಭದಲ್ಲಿ ಗ್ರಾಮ ಸಭೆಗಳಲ್ಲಿ ಈ ಬಗ್ಗೆ ಚರ್ಚೆಯೂ
ಆಗಿತ್ತು. ಪಟ್ಟಣ ಪಂಚಾಯತ್ ಆಗಿ ಬದಲಾದ ಬಳಿಕವೂ ಸಾರ್ವಜನಿಕರ
ತೀವ್ರ ಒತ್ತಾಯದ ಬಳಿಕ ಆಡುಗಳನ್ನು ಸೆರೆ ಹಿಡಿದು ದಂಡ ವಿಧಿಸಿ ಎಚ್ಚರಿಸಲಾಗಿತ್ತು.  ಸ್ಥಳೀಯಾಡಳಿತ ಎಚ್ಚರಿಕೆ ನೀಡಿದರೂ
ಸಾಕು ಪ್ರಾಣಿಗಳ ಮಾಲೀಕರು ತಮಗೆ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿರುವುದು ಕಂಡು ಬರುತ್ತದೆ.  


ಪ.ಪಂ
ಆಡಳಿತಾಧಿಕಾರಿಗಳು  ಸಾಕು
ಪ್ರಾಣಿಗಳ    ಮಾಲೀಕರಿಗೆ
ಮತ್ತೊಮ್ಮೆ  ಎಚ್ಚರಿಕೆ ನೀಡಿ, ರಸ್ತೆಗಳಿಗೆ ಅವುಗಳನ್ನು ಬಿಡ ದಂತೆ ಸೂಚಿಸಬೇಕು ಇಲ್ಲವೇ  ಅಲ್ಲದೆ
ದಂಡ ವಿಧಿಸಬೇಕೆಂದು  ಸಾರ್ವ
ಜನಿಕರು ಆಗ್ರಹಿಸಿದ್ದಾರೆ. ಪ.ಪಂ, ತಾಲೂಕು ಆಡಳಿತ,
ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.

Related Articles

Latest Articles