
ಕಡಬ ಟೈಮ್ಸ್, ನೆಟ್ಟಣ: ಬಸ್ಸೊಂದು ವೇಗವಾಗಿ ಸಂಚರಿಸುವ ಭರದಲ್ಲಿ ರಸ್ತೆ ಬದಿಯಲ್ಲಿದ್ದ ಕೆಸರು ನೀರು ಸ್ಕೂಟಿ ಸವಾರನ ಮೇಲೆ ಬಿದ್ದಿದ್ದು ಆಕ್ರೋಶ ವ್ಯಕ್ತ ಪಡಿಸಿದ ಘಟನೆ ಸೆ.30 ರ ಸಂಜೆ ಕಡಬದ ನೆಟ್ಟಣ ಬಳಿ ನಡೆದಿದೆ.


ಸುಬ್ರಹ್ಮಣ್ಯದತ್ತ ತೆರಳುತ್ತಿದ್ದ ಸರ್ಕಾರಿ ಬಸ್ ವಾಹನವೊಂದನ್ನು ಹಿಂಬಾಲಿಸುವ ಭರದಲ್ಲಿ ನೆಟ್ಟಣ ಸೇತುವೆ ಬಳಿ ರಸ್ತೆ ಬದಿಯಲ್ಲಿ ಸಂಚರಿಸಿದೆ. ಈ ವೇಳೆ ಸ್ಕೂಟಿ ಸವಾರ ಎದುರಾಗಿದ್ದು ರಸ್ತೆ ಬದಿ ಸಂಗ್ರಹವಾಗಿದ್ದ ಕೆಸರು ನೀರು ಸಂಪೂರ್ಣ ಸ್ಕೂಟಿ ಸವಾರನ ಮೇಲೆ ಬಿದ್ದಿದೆ.
ಇದರಿಂದ ಆಕ್ರೋಶಗೊಂಡ ಸ್ಕೂಟಿ ಸವಾರ ಬಸ್ ನಿರ್ವಾಹಕ ಮತ್ತು ಚಾಲಕನನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭ ಕೆಲ ಹೊತ್ತು ವಾಗ್ವಾದ ನಡೆಯಿತು. ಈ ಬೆಳವಣಿಗೆಯನ್ನು ಬಸ್ ಪ್ರಯಾಣಿಕರು ಮೂಕ ಪ್ರೇಕ್ಷಕರಾಗಿ ಗಮನಿಸುತ್ತಿದ್ದರು.


ಕೆಲ ಸಮಯದ ಬಳಿಕ ರಸ್ತೆ ಪಕ್ಕದಲ್ಲೇ ಇದ್ದ ತೋಡಿನಿಂದ ಬಕೆಟ್ ನಲ್ಲಿ ನೀರು ತಂದು ಬಸ್ ಚಾಲಕ ನಿರ್ವಾಹಕರು ಸ್ಕೂಟಿಯನ್ನು ತೊಳೆದಿದ್ದಾರೆ ಎಂದು ತಿಳಿದು ಬಂದಿದೆ. ಕೆಸರು ನೀರು ನಿಂತಿರುವ ಜಾಗವನ್ನು ಕೂಡಲೇ ಸ್ಥಳೀಯಾಡಳಿತ ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
