ಕಡಬ: ಪಾಲ್ತಾಡಿ ಗ್ರಾಮದ ತೋಡೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

kadaba times

 ಕಡಬ:  ಸವಣೂರು ಸಮೀಪದ ಪಾಲ್ತಾಡಿ ಗ್ರಾಮದ ಪಾರ್ಲ– ಕಲ್ಲಗಂಡಿ ಎಂಬಲ್ಲಿ ವ್ಯಕ್ತಿಯೋರ್ವರ ಶವ ತೋಡಿನಲ್ಲಿ 
ಪತ್ತೆಯಾದ ಬಗ್ಗೆ ಸೆ.3ರಂದು ವರದಿಯಾಗಿದೆ.

kadaba times
uniq


ಕೊಳ್ತಿಗೆ ಗ್ರಾಮದ ಬಾಯಂಬಾಡಿ ನಿವಾಸಿ ದಿ.ಕೃಷ್ಣ ಮಣಿಯಾಣಿ
ಎಂಬವರ ಪುತ್ರ ಶಿವರಾಮ ಮಣಿಯಾಣಿ (38ವ.) ಮೃತ ಪಟ್ಟ ವ್ಯಕ್ತಿ.


kadaba times
kadaba times

ಬಾಯಂಬಾಡಿಯಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು,ವಿಪರೀತ ಮಳೆ ಸುರಿದ ಪರಿಣಾಮ ನೀರಿನ ಪ್ರಮಾಣ ಹೆಚ್ಚಳವಾಗಿದ್ದರಿಂದ ನೀರಿನಲ್ಲಿ ಕೊಚ್ಚಿಕೊಂಡು ಕಲ್ಲಂಗಡಿಗೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.


ಸ್ಥಳಕ್ಕೆ ಬೆಳ್ಳಾರೆ ಠಾಣಾ ಎಸೈ ಡಿ.ಎನ್.ಈರಯ್ಯ
ಹಾಗೂ ಸಿಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಬೆಳ್ಳಾರೆ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ.

Related Articles

Latest Articles