ಪೆರಿಯಶಾಂತಿ ಬಳಿ ಹೆದ್ದಾರಿ ಬದಿಯ ಹೊಳೆಗೆ ಕೆಮಿಕಲ್ ಮಿಶ್ರಿತ ಸಿಮೆಂಟ್ ಸುರಿದ ದುರುಳರು

kadaba times

ಹೆದ್ದಾರಿ ಬದಿಯ ಸಣ್ಣ ಹೊಳೆಗೆ ಯಾರೋ ಕಿಡಿಗೇಡಿಗಳು ರಾಸಾಯನಿಕ ಮಿಶ್ರಿತ, ಸಿಮೆಂಟ್ ಕಾಂಕ್ರಿಟ್ ಮಿಕ್ಸಿಂಗ್ ಮಾಡಲಾಗಿದ್ದ ಸಿಮೆಂಟ್ ಸುರಿದು ಹೋಗಿರುವ ಘಟನೆ ನೆಲ್ಯಾಡಿ ಸಮೀಪದ  ಪೆರಿಯಶಾಂತಿಯಲ್ಲಿ ನಡೆದಿದೆ.

kadaba times
uniq

ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಪ್ರದೇಶದಲ್ಲಿ  ಹೊಳೆಯ ನೀರಿನಲ್ಲಿ ರಾಸಾಯನಿಕ ಮಿಶ್ರಣಗೊಂಡಿದ್ದರಿಂದ ಹೊಳೆ ನೀರಿನಲ್ಲಿದ್ದ ಅನೇಕ ಮೀನುಗಳು ಸತ್ತು ಮೇಲಕ್ಕೆ ತೇಲುತ್ತಿರುವುದು ಕಂಡುಬಂದಿದೆ.  ಈ ಹೊಳೆಯಲ್ಲಿನ ನೀರು ಪಕ್ಕದ ಕೃಷಿ ತೋಟಗಳಿಗೂ ಹರಿದು ಹೋಗುತ್ತಿದ್ದು  ಇದರಿಂದ ಕೃಷಿಕರಲ್ಲಿ ಆತಂಕ ಉಂಟಾಗಿದೆ.

ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪದ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವೇಳೆ ಉಳಿಕೆಯಾದ ರಾಸಾಯನಿಕ ಮಿಶ್ರಿತ ಕಾಂಕ್ರೀಟ್ ಅನ್ನು ತೋಡಿಗೆ ಸುರಿದಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

kadaba times
kadaba times

ಘಟನೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಸ್ಥಳೀಯರು ಸಂಬಂಧಪಟ್ಟ ಇಲಾಖೆಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ, ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Related Articles

Latest Articles