ಕಡಬ ಟೈಮ್, ನೆಲ್ಯಾಡಿ: ಕಡಬ ತಾಲೂಕಿನ ಅರಣ್ಯ ಪ್ರದೇಶದಲ್ಲಿರುವ ಕೃಷಿ ತೋಟಗಳಿಗೆ ಕಾಡಾನೆಗಳು ಆಗಾಗ ಬಂದು ಕೃಷಿಗೆ ಹಾನಿಯುಂಟು
ಮಾಡುತ್ತಿದೆ. ಇದೀಗ ಶಿರಾಡಿ ಗ್ರಾಮದ ಕೃಷಿಕರೊಬ್ಬರ ತೋಟಕ್ಕೆ ನುಗ್ಗಿ ಹಲವು ಅಡಕೆ ಮರಗಳನ್ನು ಹಾನಿ
ಗೊಳಿಸಿದ ಬಗ್ಗೆ ವರದಿಯಾಗಿದೆ.




ಆ.20
ರ ಮಧ್ಯರಾತ್ರಿ ಶಿರಾಡಿಯ ತೆಕ್ಕನಾಟ್ ಮನೆಯ ಟಿ.ಎ
ತೋಮಸ್ ಎಂಬವರಿಗೆ ಸೇರಿದ ತೋಟಕ್ಕೆ ನುಗ್ಗಿದ ಕಾಡಾನೆಯು
ಬೆಳೆಯುತ್ತಿದ್ದ ಸುಮಾರು 150 ಅಡಿಕೆ ಮರಗಳನ್ನು
ನಾಶಪಡಿಸಿದೆ.
ಕಾಡಾನೆ
ದಾಳಿಯಿಂದ ಈ ಭಾಗದ ರೈತರಲ್ಲಿ ಆತಂಕ ಹೆಚ್ಚಾಗಿದೆ . ಜೀವನ ನಿರ್ವಹಣೆಗಾಗಿ ಕೃಷಿಯನ್ನೇ ಅಲಂಭಿಸಿರುವ
ಈ ಭಾಗದ ಜನರಿಗೆ ಸಂಕಷ್ಟ ಎದುರಾಗಿದೆ.
ಕೃಷಿಕರಿಗೆ
ತೊಂದರೆಯಾಗದಂತೆ ಅರಣ್ಯ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಲ್ಲಿನ ಜನರು ಆಗ್ರಹಿಸಿದ್ದಾರೆ.


Wild boars are frequently coming to the agricultural plantations in the forest area of the taluk and causing damage to the agriculture.
Now it has been reported that a farmer of Shiradi village has entered the garden and damaged many groundnut trees. At the midnight of August 20, a wildfire entered the garden belonging to TA Thomas of Thekkanat house in Shirdi and destroyed around 150 areca nut trees.
Farmers in this area are worried due to forest attacks. The people of this part who have taken up agriculture for their livelihood are facing difficulties.
The people there have demanded that the forest department take appropriate action immediately so that the farmers are not disturbed.

