ಕುಕ್ಕೆ ಸುಬ್ರಹ್ಮಣ್ಯ ದೇವಳದ ವಿದ್ಯಾಸಂಸ್ಥೆಯಲ್ಲಿರುವ ಉಪನ್ಯಾಸಕರಿಗೆ 6 ತಿಂಗಳಿಂದ ವೇತನ ಇಲ್ಲ, ಪೂಜೆಗೆ ತೆಂಗಿನಕಾಯಿ ಸರಬರಾಜು ಆಗುತ್ತಿಲ್ಲ!

kadaba times

ಕಡಬ ಟೈಮ್ಸ್,ಪ್ರಮುಖ ಸುದ್ದಿ:  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ  ಹಲವಾರು ಕಡತಗಳು ಸರಿಯಾದ ಸಮಯಕ್ಕೆ ವಿಲೇವಾರಿ ಆಗದೇ ತೊಂದರೆಯಾಗುತ್ತಿದ್ದು  ಬಗ್ಗೆ ತುರ್ತು ಕ್ರಮ ವಹಿಸುವಂತೆ  ಕಡಬ ತಾಲೂಕು ಕೆಡಿಪಿ ಸದಸ್ಯ ಶಿವರಾಮ ರೈ ಆವರು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

kadaba times
uniq

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ತೆಂಗಿನಕಾಯಿ ಟೆಂಡರ್ ಆಗಿ ಕೆಲವು ತಿಂಗಳು ಕಳೆದರೂ ಅದೇಶ ಪತ್ರ ಕೊಡದ ಹಿನ್ನೆಲೆ ತೆಂಗಿನಕಾಯಿ ಸರಬರಾಜು ಆಗುತ್ತಿಲ್ಲ. ಇದರಿಂದ ಈಗ ಮಂಗಳೂರಿನ ಜನತಾ ಬಜಾರಿನಿಂದ  ತಾತ್ಕಾಲಿಕವಾಗಿ ಮೊತ್ತಕ್ಕೆ ಖರೀದಿ ನಡೆಯುತ್ತಿದೆ. ಇದರಿಂದ ಮುಂದೆ ತೆಂಗಿನಕಾಯಿ ಇಲ್ಲದೆ ಪೂಜೆಗಳು ನಿಲುಗಡೆಯಾಗಿ ಧಾರ್ಮಿಕ ನಂಬಿಕೆಗೆ ದಕ್ಕೆಯಾಗುವುದು. ದೇವಳದ ವಿದ್ಯಾಸಂಸ್ಥೆಯಲ್ಲಿರುವ  ಹಲವು ಉಪನ್ಯಾಸಕರಿಗೆ 6 ತಿಂಗಳಿಂದ ವೇತನ ಪಾವತಿಯಾಗಿರುವುದಿಲ್ಲ ಹಾಗು ದೇವಳದ ವಾರ್ಷಿಕ ಬಜೆಟ್‌ನ ಹಲವಾರು ಕಡತ ಬೆಂಗಳೂರಿನ ಆಯುಕ್ತರ ಕಛೇರಿಯಲ್ಲಿ ಇದ್ದು ಮಂಜೂರಾತಿಗೊಂಡಿರುವುದಿಲ್ಲ.

kadaba times
kadaba times

ಒಂದು ವರ್ಷದ ಬಜೆಟ್ ಮಂಜೂರಾತಿ ಮಾಡಿಕೊಂಡು ಖರ್ಚು ಮಾಡಬೇಕಾಗಿದ್ದರೂ ಈ ಕಾನೂನು ಪಾಲನೆಯಾಗುತ್ತಿಲ್ಲ .ಇದರಿಂದ ದೇವಳಕ್ಕೆ ಲಕ್ಷಾನುಗಟ್ಟಲೆ ನಷ್ಟ ಹಾಗೂ ಇತರ ತೊಂದರೆಗಳು ಆಗುತ್ತಿದೆ .  ಆದುದರಿಂದ ತಾವು ಸಮಗ್ರ ಪರಿಶೀಲನೆ ನಡೆಸಿ ಸಂಬಂದಿಸಿದ ಗುಮಾಸ್ತರು ಹಾಗೂ ಅಧಿಕಾರಿಗಳಿಗೆ ತಕ್ಷಣ ಕ್ರಮ ವಹಿಸಲು ಸೂಚನೆ ನೀಡುವಂತೆ ಅವರು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Related Articles

Latest Articles