ಸೌಜನ್ಯ ಕೇಸ್ ಮರುತನಿಖೆ: SIT ನೂತನ ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಥೋಡ್ ನೇಮಕ

kadaba times

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ದಳದ (SIT) ಮುಖ್ಯಸ್ಥರಾಗಿದ್ದ ಐಜಿಪಿ ಎನ್. ಶಶಿಕುಮಾರ್ ನಿರ್ಗಮನದ ಬೆನ್ನಲ್ಲೇ, ರಾಜ್ಯ ಸರ್ಕಾರವು ಎಸ್‌ಐಟಿ ತಂಡಕ್ಕೆ ಮಹತ್ವದ ತಿದ್ದುಪಡಿ ಆದೇಶವನ್ನು ಹೊರಡಿಸಿದೆ. ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ ಅವರನ್ನು ಎಸ್‌ಐಟಿಯ ನೂತನ ಮುಖ್ಯಸ್ಥರನ್ನಾಗಿ ಹಾಗೂ ಹಾಸನ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ASP) ಶ್ರೀನಿಧಿ ಅವರನ್ನು ತನಿಖಾ ತಂಡದ ಸದಸ್ಯರನ್ನಾಗಿ ನೇಮಕ ಮಾಡಿ ಒಳಾಡಳಿತ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

kadaba times

ಬೆಂಗಳೂರು: ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ವಿಶೇಷ ತನಿಖಾ ದಳಕ್ಕೆ (SIT) ನೂತನ ಸಾರಥಿಯನ್ನು ಅಧಿಕೃತವಾಗಿ ನೇಮಕ ಮಾಡಿದೆ. ಎಸ್‌ಐಟಿ ಮುಖ್ಯಸ್ಥರಾಗಿದ್ದ ಐಜಿಪಿ ಎನ್. ಶಶಿಕುಮಾರ್ ಅವರು ವೈಯಕ್ತಿಕ ಕಾರಣಗಳಿಂದ ಹೊರಗುಳಿದ ಹಿನ್ನೆಲೆಯಲ್ಲಿ, ಸಿಐಡಿ ಐಜಿಪಿ  ಚೇತನ್ ಸಿಂಗ್ ರಾಥೋಡ್ (ಐಪಿಎಸ್) ಅವರನ್ನು ಎಸ್‌ಐಟಿ ನೂತನ ಮುಖ್ಯಸ್ಥರನ್ನಾಗಿ ನೇಮಿಸಿ ರಾಜ್ಯ ಒಳಾಡಳಿತ ಇಲಾಖೆ ತಿದ್ದುಪಡಿ ಆದೇಶ ಹೊರಡಿಸಿದೆ.

ಇದೇ ವೇಳೆ, ತನಿಖಾ ತಂಡದ ಸದಸ್ಯರಾಗಿದ್ದ ಎಎಸ್‌ಪಿ ವೆಂಕಟೇಶ್ ಪ್ರಸನ್ನ ಅವರ ಸ್ಥಾನಕ್ಕೆ ಹಾಸನ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ASP)  ಶ್ರೀನಿಧಿ ಅವರನ್ನು ನೂತನ ಸದಸ್ಯರನ್ನಾಗಿ ನಿಯೋಜಿಸಲಾಗಿದೆ.

 ಕರ್ನಾಟಕ ಸರ್ಕಾರದ ಒಳಾಡಳಿತ ಇಲಾಖೆಯ (ಅಪರಾಧಗಳು) ಅಧೀನ ಕಾರ್ಯದರ್ಶಿ ಎಸ್. ಅಂಬಿಕಾ ಅವರು ದಿನಾಂಕ 30/10/2026 ರಂದು ರಾಜ್ಯಪಾಲರ ಆದೇಶಾನುಸಾರ ಈ ತಿದ್ದುಪಡಿ ಆದೇಶ (ಸಂಖ್ಯೆ: HD 228 COD 2026) ಹೊರಡಿಸಿದ್ದಾರೆ. ಉಳಿದಂತೆ ಎಸ್‌ಐಟಿ ರಚನೆಯ ಮೂಲ ಆದೇಶದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

kadaba times
uniq

ತನಿಖಾ ತಂಡದಲ್ಲಿರುವ ಇತರ ಪ್ರಮುಖ ಅಧಿಕಾರಿಗಳು: ಈ ತಿದ್ದುಪಡಿಯ ಬಳಿಕ ಎಸ್‌ಐಟಿಯಲ್ಲಿ ನೂತನ ಮುಖ್ಯಸ್ಥರಾದ ಚೇತನ್ ಸಿಂಗ್ ರಾಥೋಡ್ ಹಾಗೂ ನೂತನ ಸದಸ್ಯ ಶ್ರೀನಿಧಿ ಅವರ ಜೊತೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಹೆಚ್. ಸುಧೀರ್ ಕುಮಾರ್ ರೆಡ್ಡಿ (ಐಪಿಎಸ್), ರಾಜ್ಯ ಗುಪ್ತ ವಾರ್ತೆಯ ಪೊಲೀಸ್ ಅಧೀಕ್ಷಕಿ (SP) ನಿಶಾ ಜೇಮ್ಸ್ (ಐಪಿಎಸ್) ಹಾಗೂ ಸಿಐಡಿ ಪೊಲೀಸ್ ಅಧೀಕ್ಷಕ (SP) ಲೋಕೇಶ್ ಜಗಲಸಾರ್ (ಐಪಿಎಸ್) ಅವರು ತಂಡದಲ್ಲಿ ಮುಂದುವರಿಯಲಿದ್ದಾರೆ.

ಮುಖ್ಯಸ್ಥರ ಸ್ಥಾನದಿಂದ ಹೊರಬಂದಿರುವ ಐಜಿಪಿ ಎನ್. ಶಶಿಕುಮಾರ್ ಅವರು ಪ್ರಸ್ತುತ ಸ್ಥಳ ನಿರೀಕ್ಷಣೆಯಲ್ಲಿದ್ದು (Waiting for Posting), ಎಎಸ್‌ಪಿ ವೆಂಕಟೇಶ್ ಪ್ರಸನ್ನ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ದಕ್ಷ ಹಾಗೂ ಕಟ್ಟುನಿಟ್ಟಿನ ಅಧಿಕಾರಿಯೆಂದೇ ಗುರುತಿಸಿಕೊಂಡಿರುವ ಐಜಿಪಿ ಚೇತನ್ ಸಿಂಗ್ ರಾಥೋಡ್ ಅವರ ನೇತೃತ್ವದಲ್ಲಿ ಇನ್ಮುಂದೆ ಸೌಜನ್ಯ ಪ್ರಕರಣದ ಮರುತನಿಖೆ ಮುಂದುವರಿಯಲಿದೆ

Related Articles

Latest Articles