ಕಡಬ ಪ.ಪಂ ವ್ಯಾಪ್ತಿ: ಸಾರ್ವಜನಿಕ ರಸ್ತೆಗೆ ಬೇಲಿ ಹಾಕಿ ತೆಂಗಿನ ಸಸಿ ನೆಟ್ಟು ಒತ್ತುವರಿ ಆರೋಪ

kadaba times

ಕಡಬ / ಕೋಡಿಂಬಾಳ: ಕೋಡಿಂಬಾಳ ಗ್ರಾಮದ ಪ್ರಮುಖ ರಸ್ತೆಯಾಗಿರುವ ಮಜ್ಜಾರು–ದೇಂತಾರು ಮಾರ್ಗದಲ್ಲಿ ಸಾರ್ವಜನಿಕ ರಸ್ತೆಯ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, ತಂತಿ ಬೇಲಿ ನಿರ್ಮಿಸಿ ತೆಂಗಿನ ಗಿಡಗಳನ್ನು ನೆಡಲಾಗಿದೆ ಎಂದು ಆರೋಪಿಸಿ ಕೋಡಿಂಬಾಳ ಮತ್ತು ಕೇನ್ಯ ಗ್ರಾಮಸ್ಥರು ಪ.ಪಂ ತಾಲೂಕು ಆಡಳಿತಕ್ಕೆ  ದೂರು ಸಲ್ಲಿಸಿದ್ದಾರೆ.

kadaba times
uniq

ಕೋಡಿಂಬಾಳ ಗ್ರಾಮದ ದೇಂತಾರು ಎಂಬಲ್ಲಿ ವ್ಯಕ್ತಿಯೊಬ್ಬರು  ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿ ಬೇಲಿ ನಿರ್ಮಿಸಿ ತೆಂಗಿನ ಗಿಡಗಳನ್ನು ನೆಟ್ಟಿದ್ದಾರೆ ಎಂಬ ಆರೋಪವನ್ನು ಗ್ರಾಮಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನಲ್ಲಿ ತಿಳಿಸಲಾಗಿರುವಂತೆ, ಈ ರಸ್ತೆಯು ಮಜ್ಜಾರು ಶ್ರೀ ಮಹಾವಿಷ್ಣು ದೇವಸ್ಥಾನ ಹಾಗೂ ಕೇನ್ಯ, ಆದರ್ಶ ಗ್ರಾಮ, ಕೊಲ್ಲಮೊಗ್ರು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ದಿನನಿತ್ಯ ಸಾರ್ವಜನಿಕರು, ಪಾದಚಾರಿಗಳು ಹಾಗೂ ಶಾಲಾ ಮಕ್ಕಳು ಈ ಮಾರ್ಗವಾಗಿ ಸಂಚರಿಸುತ್ತಾರೆ.

ರಸ್ತೆಯನ್ನು ಒತ್ತುವರಿ ಮಾಡಿ ಕಿರಿದುಗೊಳಿಸಿರುವುದರಿಂದ ಶಾಲಾ ವಾಹನಗಳು ಹಾಗೂ ಇತರ ವಾಹನಗಳು ಸಂಚರಿಸಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಸಂದರ್ಭದಲ್ಲಿ ವಾಹನಗಳು ಮುಖಾಮುಖಿಯಾದರೆ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

kadaba times
kadaba times

 ಪ್ರತಿಭಟನೆಯ ಎಚ್ಚರಿಕೆ: ಕಂದಾಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿ ಬೇಲಿ ಹಾಕಿ ನೆಟ್ಟಿರುವ ತೆಂಗಿನ ಸಸಿಗಳನ್ನು ತೆರವುಗೊಳಿಸಿ, ಸಾರ್ವಜನಿಕರಿಗೂ ವಾಹನ ಸಂಚಾರಕ್ಕೂ ಯಾವುದೇ ರೀತಿಯ ತೊಂದರೆಯಾಗದಂತೆ ರಸ್ತೆಯನ್ನು ಮೊದಲಿನಂತೆ ಅಗಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 ಒತ್ತುವರಿಯನ್ನು ತೆರವುಗೊಳಿಸಲು ನಿರ್ಲಕ್ಷ್ಯ ವಹಿಸಿದರೆ, ಈ ರಸ್ತೆಯನ್ನೇ ಅವಲಂಬಿಸಿರುವ ಕೋಡಿಂಬಾಳ ಹಾಗೂ ಕೇನ್ಯ ಭಾಗದ ಗ್ರಾಮಸ್ಥರು ಕಡಬ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ದೂರಿನಲ್ಲಿ ಎಚ್ಚರಿಕೆ ನೀಡಲಾಗಿದೆ. ರಸ್ತೆ ಹಾದುಹೋಗುವ ಸರ್ವೆ ನಂಬರ್‌‌ಗಳಾದ 129/5, 128/1A1, 134/11B4, 121/1 ಹಾಗೂ 116/1B1CB ಗಳನ್ನು ಉಲ್ಲೇಖಿಸಲಾಗಿದ್ದು, ಗ್ರಾಮಸ್ಥರ ಪರವಾಗಿ ಪ್ರಮುಖರು ಸಹಿ ಹಾಕಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

Related Articles

Latest Articles