ಬಲ್ಯ ಕ್ರಾಸ್ ನಲ್ಲಿ ಸ್ಕೂಟರ್ – ಬೈಕ್ ನಡುವೆ ಅಪಘಾತ: ಚಿಕಿತ್ಸಾ ವೆಚ್ಚ ನೀಡಲು ನಿರಾಕರಿಸಿದ ಬೈಕ್ ಸವಾರನ ವಿರುದ್ದ ಕೇಸ್

kadaba times

ಕಡಬ–ಉಪ್ಪಿನಂಗಡಿ ರಸ್ತೆಯ ಬಲ್ಯ ಗ್ರಾಮದ ಬಲ್ಯ–ನೆಲ್ಯಾಡಿ ಕ್ರಾಸ್ ಸಮೀಪ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ನೆಲ್ಯಾಡಿ ನಿವಾಸಿ ಮಹಮ್ಮದ್ ಶರೀಫ್ (67) ಅವರಿಗೆ ಎದುರಿನಿಂದ ಅತಿವೇಗವಾಗಿ ಬಂದ ಬಜಾಜ್ ಡಿಸ್ಕವರಿ ಬೈಕ್ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಶರೀಫ್ ಅವರು ಮಂಗಳೂರಿನ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಾಗಿದೆ.

kadaba times
uniq

ಕಡಬ / ಬಲ್ಯ: ಬಲ್ಯ ಗ್ರಾಮದ ನೆಲ್ಯಾಡಿ ಕ್ರಾಸ್ ಸಮೀಪ ಕಡಬ–ಉಪ್ಪಿನಂಗಡಿ ಮುಖ್ಯ ರಸ್ತೆಯಲ್ಲಿ ಸ್ಕೂಟರ್ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಿರಿಯ ನಾಗರಿಕರೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ನೆಲ್ಯಾಡಿ ಗ್ರಾಮದ ನೆಲ್ಯಾಡಿ ಮನೆ ನಿವಾಸಿ ಮಹಮ್ಮದ್ ಶರೀಫ್ (67) ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ.

ಪೊಲೀಸ್ ಠಾಣೆಗೆ ನೀಡಲಾಗಿರುವ ಅಧಿಕೃತ ದೂರಿನ ಪ್ರಕಾರ: ಸೆಪ್ಟೆಂಬರ್ 29 ರಂದು ಮಹಮ್ಮದ್ ಶರೀಫ್ ಅವರು ತಮ್ಮ ಸ್ಕೂಟರ್‌ನಲ್ಲಿ (KA-21-Y-7617) ಕಡಬದ ಅಡ್ಡಗದ್ದೆಗೆ ತೆರಳಿ, ಬಳಿಕ ಸಂಜೆ ಮನೆಗೆ ಮರಳಲು ಕಡಬ–ಉಪ್ಪಿನಂಗಡಿ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಸಂಜೆ  ಬಲ್ಯ ಗ್ರಾಮದ ನೆಲ್ಯಾಡಿ ರಸ್ತೆ ಕಡೆಗೆ ತಿರುಗುವ ತಿರುವಿನ (ಕ್ರಾಸ್) ಬಳಿ ತಲುಪುತ್ತಿದ್ದಾಗ, ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆಗೆ ಬರುತ್ತಿದ್ದ ಬಜಾಜ್ ಡಿಸ್ಕವರಿ ಬೈಕ್  ಸವಾರನು ವಾಹನವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ಶರೀಫ್ ಅವರ ಸ್ಕೂಟರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದ್ದಾನೆ.

ರಸ್ತೆಗೆ ಬಿದ್ದು ಗಾಯ – ಮಂಗಳೂರು ಆಸ್ಪತ್ರೆಗೆ ದಾಖಲು: ಡಿಕ್ಕಿಯ ಹೊಡೆತಕ್ಕೆ ಮಹಮ್ಮದ್ ಶರೀಫ್ ಅವರು ಸ್ಕೂಟರ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಅವರ ಸಂಬಂಧಿ ಭಾಷಾ ಎಂಬವರು ಗಾಯಾಳುವನ್ನು ಉಪಚರಿಸಿ ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

kadaba times
kadaba times

ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ  ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪ್ರಸ್ತುತ ಅವರು ಒಳರೋಗಿಯಾಗಿ ತೀವ್ರ ನಿಗಾ ಘಟಕ ಹಾಗೂ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕಿತ್ಸಾ ವೆಚ್ಚ ನೀಡಲು ನಿರಾಕರಣೆ – ತಡವಾಗಿ ದೂರು ದಾಖಲು: ಅಪಘಾತವೆಸಗಿದ ಬೈಕ್ ಸವಾರನು ಆರಂಭದಲ್ಲಿ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿ, ನಂತರ ವೆಚ್ಚವನ್ನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅಕ್ಟೋಬರ್ 1 ರ ರಾತ್ರಿ ಕಡಬ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲಾಗಿದೆ ಎಂದು ಪಿರ್ಯಾದುದಾರರು ತಿಳಿಸಿದ್ದಾರೆ.

ದೂರಿನನ್ವಯ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 115/2026 ಕಾಯ್ದೆ ಮತ್ತು ಕಲಂಗಳು: ಕಲಂ 281, 125(a) ಭಾರತೀಯ ನ್ಯಾಯ ಸಂಹಿತೆ (BNS) 2023 ಆರೋಪಿ  ಡಿಸ್ಕವರಿ ಬೈಕ್‌ನ ಅಪರಿಚಿತ ಸವಾರನ ವಿರುದ್ದ  ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

Related Articles

Latest Articles