ರಾಮಕುಂಜ ಬಳಿ ಆಟೋ ರಿಕ್ಷಾಗೆ ಈಚರ್ ಲಾರಿ ಡಿಕ್ಕಿ: ಮೂವರಿಗೆ ಗಾಯ,ಕಡಬ ಠಾಣೆಯಲ್ಲಿ FIR ದಾಖಲು

kadaba times

ಕಡಬ–ಉಪ್ಪಿನಂಗಡಿ ರಸ್ತೆಯ ರಾಮಕುಂಜ ಗ್ರಾಮದ ಗೋಳಿತ್ತಡಿ ಎಂಬಲ್ಲಿ ರಸ್ತೆ ಬದಿಯಿಂದ ಮುಖ್ಯ ರಸ್ತೆಗೆ ಏಕಾಏಕಿ ಬಂದ ಈಚರ್ ಲಾರಿಯೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಚರ್ ಲಾರಿ ಚಾಲಕನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಕಡಬ / ರಾಮಕುಂಜ: ಕಡಬ ತಾಲೂಕಿನ ರಾಮಕುಂಜ ಗ್ರಾಮದ ಗೋಳಿತ್ತಡಿ ಎಂಬಲ್ಲಿ ಕಡಬ–ಉಪ್ಪಿನಂಗಡಿ ಮುಖ್ಯ ರಸ್ತೆಯಲ್ಲಿ ಅಜಾಗರೂಕತೆಯಿಂದ ಬಂದ ಈಚರ್ ಲಾರಿಯೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಜಖಂಗೊಂಡು ಮೂವರು ಗಾಯಗೊಂಡಿರುವ ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಆಟೋ ಚಾಲಕ ಜಿ.ಎಂ. ಸಂಶುದ್ದೀನ್ ಹಾಗೂ ಪ್ರಯಾಣಿಕರಾದ ಅಬೂಬಕ್ಕರ್ ಮತ್ತು ಮನ್ಸೂರ್ ಗಾಯಗೊಂಡಿದ್ದಾರೆ.

ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಘಟ್ಟಮನೆ ನಿವಾಸಿ, ಆಟೋ ಚಾಲಕ ಜಿ.ಎಂ. ಸಂಶುದ್ದೀನ್ (36) ಅವರು ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ ,ಸೆಪ್ಟೆಂಬರ್ 30 ರಂದು ಕುಂಬ್ರದಲ್ಲಿ ಆಟೋ ರಿಕ್ಷಾದಲ್ಲಿದ್ದಾಗ, ಪರಿಚಯದ ಕುಂಬ್ರ ನಿವಾಸಿ ಅಬೂಬಕ್ಕರ್ (58) ಮತ್ತು ಮನ್ಸೂರ್ (19) ಎಂಬವರು ಕೊಯಿಲ ಗ್ರಾಮದ ಆತೂರಿಗೆ ತೆರಳಲು ಬಾಡಿಗೆ ಮಾತನಾಡಿಕೊಂಡು ರಿಕ್ಷಾ ಏರಿದ್ದರು.

ಸಂಶುದ್ದೀನ್ ಅವರು ತಮ್ಮ ಆಟೋ ರಿಕ್ಷಾದಲ್ಲಿ ಕುಂಬ್ರದಿಂದ ಸವಣೂರು, ಆಲಂಕಾರು ಮಾರ್ಗವಾಗಿ ಆತೂರು ಕಡೆಗೆ ಕಡಬ–ಉಪ್ಪಿನಂಗಡಿ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಸಂಜೆ  ವೇಳೆಗೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಗೋಳಿತ್ತಡಿ ತಲುಪಿದಾಗ, ರಸ್ತೆಯ ಎಡಭಾಗದ ಮಣ್ಣು ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಈಚರ್ ವಾಹನವೊಂದನ್ನು ಅದರ ಚಾಲಕನು ಏಕಾಏಕಿ ಮುಖ್ಯ ಡಾಂಬರು ರಸ್ತೆಗೆ ಚಲಾಯಿಸಿಕೊಂಡು ಬಂದಿದ್ದಾನೆ.ಪರಿಣಾಮವಾಗಿ ಈಚರ್ ಲಾರಿಯು ಮುಂಭಾಗದಿಂದ ಚಲಿಸುತ್ತಿದ್ದ ಆಟೋ ರಿಕ್ಷಾಗೆ ಬಲವಾಗಿ ಡಿಕ್ಕಿ ಹೊಡೆದಿದೆ.

kadaba times
kadaba times

ರಿಕ್ಷಾ ಜಖಂ – ಮೂವರಿಗೆ ಗಾಯ: ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ನಜ್ಜುಗುಜ್ಜಾಗಿದ್ದು, ಚಾಲಕ ಸಂಶುದ್ದೀನ್ ಅವರ ತಲೆ ಮತ್ತು ಮುಖಕ್ಕೆ ತೀವ್ರ ರಕ್ತಗಾಯಗಳಾಗಿವೆ. ಸಹ ಪ್ರಯಾಣಿಕರಾದ ಅಬೂಬಕ್ಕರ್ ಅವರಿಗೆ ಎಡಕಿವಿಗೆ ಹಾಗೂ ಮನ್ಸೂರ್ ಅವರಿಗೆ ಹಣೆಯ ಭಾಗ ಮತ್ತು ಮೂಗಿನ ಬಲಭಾಗಕ್ಕೆ ಗಾಯಗಳಾಗಿವೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳದಲ್ಲಿದ್ದ ಸ್ಥಳೀಯರು ಧಾವಿಸಿ ಗಾಯಾಳುಗಳನ್ನು ಉಪಚರಿಸಿದ್ದಾರೆ. ಬಳಿಕ ಸಿದ್ದಿಕ್ ಆತೂರು ಎಂಬವರ ನೆರವಿನೊಂದಿಗೆ ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮೂವರೂ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಡಬ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲಕ ಸಂಶುದ್ದೀನ್ ನೀಡಿದ ಹೇಳಿಕೆಯ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪರಾಧ ಸಂಖ್ಯೆ: 114/2026 ಕಾಯ್ದೆ ಮತ್ತು ಕಲಂಗಳು: ಕಲಂ 281, 125(a) ಭಾರತೀಯ ನ್ಯಾಯ ಸಂಹಿತೆ (BNS) 2023  ಕಡಬ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಮುಂದುವರಿಸಿದ್ದಾರೆ.

Related Articles

Latest Articles