ಕೋರ್ಟ್‌ಗೆ ಹಾಜರಾಗದೆ ಓಡಾಡುತ್ತಿದ್ದ ವಾರೆಂಟ್ ಆರೋಪಿಯನ್ನು ಬಂಧಿಸಿದ ಸುಳ್ಯ ಪೊಲೀಸರು

kadaba times

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಹಾಗೂ ಆಕೆಯ ಪತಿಯ ಮೇಲೆ ಜೆಲ್ಲಿ ಕಲ್ಲಿನಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದ ಪ್ರಕರಣದಲ್ಲಿ, ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎರಡನೇ ಆರೋಪಿ (A2), ಕನಕಮಜಲು ನಿವಾಸಿ ಸುರೇಂದ್ರನನ್ನು ಸುಳ್ಯ ಪೊಲೀಸರು ಆಲೆಟ್ಟಿ ಎಂಬಲ್ಲಿ ಬಂಧಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

kadaba times
uniq

ಸುಳ್ಯ: ಮಹಿಳೆಯ ಮೇಲೆ ಅಸಭ್ಯವಾಗಿ ವರ್ತಿಸಿ ದೌರ್ಜನ್ಯ ಎಸಗಿದ್ದಲ್ಲದೆ, ಆಕೆಯ ಪತಿಗೆ ಕಲ್ಲಿನಿಂದ ಹೊಡೆದು ಕೊಲೆ ಬೆದರಿಕೆಯೊಡ್ಡಿದ್ದ ಗಂಭೀರ ಹಲ್ಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಸುಳ್ಯ ಠಾಣಾ ಪೊಲೀಸರು ಆಲೆಟ್ಟಿ ಬಳಿ ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ನಿವಾಸಿ ಸುರೇಂದ್ರ (ರಾಮ ಅವರ ಪುತ್ರ – A2) ಎಂದು ಗುರುತಿಸಲಾಗಿದೆ.

2021 ರ ಘಟನೆಯ ಹಿನ್ನೆಲೆ (ಅಜ್ಜಾವರ ಕಾಂತಮಂಗಲ ಪ್ರಕರಣ):ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ (ಅಪರಾಧ ಸಂಖ್ಯೆ: 33/2021) ಪ್ರಕಾರ:ದಿನಾಂಕ 13-05-2021 ರಂದು ಸಂಜೆ ವೇಳೆಗೆ ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಕಾಂತಮಂಗಲದ ಅಪ್ಪಾಜಿರಾವ್ ಕಾಂಪೌಂಡ್‌ನಲ್ಲಿರುವ ತಮ್ಮ ಮನೆಯ ಮುಂಭಾಗದ ಮೆಟ್ಟಿಲಿನಲ್ಲಿ ಕುಳಿತಿದ್ದ ರಾಜೇಶ್ ಎಂಬಾತನನ್ನು ಮಹಿಳೆಯು “ಯಾಕೆ ಇಲ್ಲಿ ಕುಳಿತಿದ್ದೀರಿ?” ಎಂದು ಪ್ರಶ್ನಿಸಿದ್ದರು.

ಈ ವೇಳೆ ಆರೋಪಿ ರಾಜೇಶ್ “ಅವಾಚ್ಯವಾಗಿ ಮಾತನಾಡಿ  ದೌರ್ಜನ್ಯ ಎಸಗಿದ್ದನು. ಇದನ್ನು ಕಂಡು ಆಕ್ಷೇಪಿಸಿದ ಜಯಲಕ್ಷ್ಮಿ ಅವರ ಪತಿ ವಿಜಯ ಪತಿಕಲ್ಲು ಎಂಬವರು ಆತನನ್ನು ಆಚೆ ಕಳುಹಿಸಲು ಮುಂದಾದಾಗ, ಆರೋಪಿ ಅಲ್ಲೇ ಇದ್ದ ಜೆಲ್ಲಿ ಕಲ್ಲಿನಿಂದ ವಿಜಯ ಅವರ ತಲೆಗೆ ಹೊಡೆದು ಗಾಯಗೊಳಿಸಿದ್ದನು.

kadaba times
kadaba times

ಈ ಸಂದರ್ಭದಲ್ಲಿ ಆರೋಪಿ  ಬೆಂಬಲಕ್ಕೆ ಧಾವಿಸಿದ ಆರೋಪಿಗಳಾದ ಸುರೇಂದ್ರ (A2) ಹಾಗೂ ಚಿದಾನಂದ (A3) ಎಂಬವರು ಜಯಲಕ್ಷ್ಮಿ ಅವರ ಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಗಳಿಂದ ಹಲ್ಲೆ ನಡೆಸಿ, “ಇನ್ನೊಮ್ಮೆ ನಮ್ಮ ಸುದ್ದಿಗೆ ಬಂದರೆ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ” ಎಂದು ಕೊಲೆ ಬೆದರಿಕೆ ಹಾಕಿದ್ದರು.

ಈ ಘಟನೆ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 323, 324, 504, 506, 354 ಜೊತೆಗೆ 34 ರ ಅಡಿಯಲ್ಲಿ ರಾಜೇಶ್, ಸುರೇಂದ್ರ ಹಾಗೂ ಚಿದಾನಂದ ವಿರುದ್ಧ ಪ್ರಕರಣ ದಾಖಲಾಗಿತ್ತು.

ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಸುರೇಂದ್ರ:ಪ್ರಕರಣವು ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ, ಆರೋಪಿ ಸುರೇಂದ್ರನು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನ ವಿರುದ್ಧ ಜಾಮೀನು ರಹಿತ ವಾರಂಟ್ (Warrant) ಹೊರಡಿಸಿತ್ತು.

:ವಾರೆಂಟ್ ಜಾರಿಯಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಸುಳ್ಯ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಹೆಡ್ ಕಾನ್‌ಸ್ಟೇಬಲ್ (HC 368): ರಾಜು ನಾಯ್ಕ ಡಿ.ಪೊಲೀಸ್ ಕಾನ್‌ಸ್ಟೇಬಲ್ (PC 1020): ಸೋಮಯ್ಯ ಹಿರೇಮಠ ಅವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಆಲೆಟ್ಟಿ ಎಂಬಲ್ಲಿ ತಲೆಮರೆಸಿಕೊಂಡಿದ್ದ ಸುರೇಂದ್ರನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

Related Articles

Latest Articles