ದಕ್ಷಿಣ ಕನ್ನಡ: ಗೂಂಡಾ ಕಾಯ್ದೆಯಡಿ ಬಂಧಿತ ಆರು ಮಂದಿಯ ಕ್ರಿಮಿನಲ್ ಇತಿಹಾಸ ಬಿಡುಗಡೆ

kadaba times

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಆರು ಮಂದಿ ಕುಖ್ಯಾತ ಆರೋಪಿಗಳ ವಿರುದ್ಧ ‘ಗೂಂಡಾ ಕಾಯ್ದೆ’ ಅಳವಡಿಸಲಾಗಿದ್ದು, ಅವರ ವಿರುದ್ಧ ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಉಪ್ಪಿನಂಗಡಿ, ಪುತ್ತೂರು ನಗರ ಹಾಗೂ ಬಜಪೆ ಠಾಣೆಗಳಲ್ಲಿ ದಾಖಲಾಗಿ ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಕೊಲೆ, ಕೊಲೆಯತ್ನ, ದಲಿತ ದೌರ್ಜನ್ಯ ಹಾಗೂ ಕೋಕೋಕಾ (KCOCA) ಪ್ರಕರಣಗಳ ಅಧಿಕೃತ ಪಟ್ಟಿಯನ್ನು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ

kadaba times
uniq

ಮಂಗಳೂರು / ಬಂಟ್ವಾಳ: ಕರಾವಳಿ ಜಿಲ್ಲೆಯಲ್ಲಿ ನಿರಂತರವಾಗಿ ಕೊಲೆ, ಕೊಲೆಯತ್ನ, ದಲಿತ ದೌರ್ಜನ್ಯ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ, ಕೋಮು ಪ್ರಚೋದನೆ ಹಾಗೂ ಸಂಘಟಿತ ಅಪರಾಧ (ಕೋಕೋಕಾ) ಕೃತ್ಯಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕ ಶಾಂತಿಗೆ ಕಂಟಕವಾಗಿದ್ದ ಆರು ಮಂದಿ ಆರೋಪಿಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಿದ್ದಾರೆ.

ಗೂಂಡಾ ಕಾಯ್ದೆ ಅಳವಡಿಸಲಾಗಿರುವ ಈ ಆರೋಪಿಗಳ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿ, ಸದ್ಯ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿರುವ ಗಂಭೀರ ಕ್ರಿಮಿನಲ್ ಪ್ರಕರಣಗಳ ಸಮಗ್ರ ವಿವರ ಇಲ್ಲಿದೆ:

ಆರೋಪಿಗಳ ವಿರುದ್ಧ ವಿಚಾರಣೆಯಲ್ಲಿರುವ ಪ್ರಕರಣಗಳ ವಿವರ:

1. ಭರತ್ ಕುಮ್ಡೇಲು (ಒಟ್ಟು 5 ಪ್ರಕರಣಗಳು):

  • ಬಂಟ್ವಾಳ ನಗರ ಪೊಲೀಸ್ ಠಾಣೆ (ಅ.ಕ್ರ. 169/2017): ಕೊಲೆ ಪ್ರಕರಣ – ಕಲಂ: 143, 147, 148, 447, 448, 302, 120(ಬಿ), 201 ಜೊತೆಗೆ 149 ಐ.ಪಿ.ಸಿ.

  • ಉಪ್ಪಿನಂಗಡಿ ಪೊಲೀಸ್ ಠಾಣೆ (ಅ.ಕ್ರ. 130/2023): ದಲಿತ ದೌರ್ಜನ್ಯ ಪ್ರಕರಣ – ಕಲಂ: 143, 147, 323 ಜೊತೆಗೆ 149 ಐಪಿಸಿ & 3(1)(r)(s) SC & ST (Prevention of Atrocities) Amendment Act 2015.

  • ಬಂಟ್ವಾಳ ನಗರ ಪೊಲೀಸ್ ಠಾಣೆ (ಅ.ಕ್ರ. 152/2024): ಸಾರ್ವಜನಿಕ ಆಸ್ತಿಗೆ ಹಾನಿ ಪ್ರಕರಣ – ಕಲಂ: 189(2), 191(2), 352, 351(2), 190 ಭಾರತೀಯ ನ್ಯಾಯ ಸಂಹಿತೆ (BNS)-2023.

  • ಪುತ್ತೂರು ನಗರ ಪೊಲೀಸ್ ಠಾಣೆ (ಅ.ಕ್ರ. 35/2025): ಕೋಮು ಪ್ರಚೋದನಾತ್ಮಕ ಭಾಷಣ – ಕಲಂ: 353(2) ಬಿ.ಎನ್.ಎಸ್-2023.

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ (ಅ.ಕ್ರ. 54/2025): ಕೊಲೆ ಹಾಗೂ ಸಂಘಟಿತ ಅಪರಾಧ ಪ್ರಕರಣ – ಕಲಂ: 103(1), 109(1), 118(1), 118(2), 61(2)(a), 238(a), 238(b), 249(a) ಜೊತೆಗೆ 3(5) ಬಿ.ಎನ್.ಎಸ್-2023, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959 ಕಲಂ 25(1)(A) ಮತ್ತು The Karnataka Control of Organized Crimes Act-2000 (KCOCA) ಕಲಂ 3(1)(i), (ii), 3(2), 3(3), 3(4).

2. ತೇಜಾಕ್ಷ (ಒಟ್ಟು 4 ಪ್ರಕರಣಗಳು):

  • ಬಜಪೆ ಪೊಲೀಸ್ ಠಾಣೆ (ಅ.ಕ್ರ. 179/2023): ಮಾದಕದ್ರವ್ಯ ಕಾಯ್ದೆ ಪ್ರಕರಣ – ಕಲಂ: 8(ಸಿ), 20(ಬಿ), (ii)A ಎನ್‌ಡಿಪಿಎಸ್ (NDPS) ಆಕ್ಟ್.

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ (ಅ.ಕ್ರ. 119/2024): ಸಾರ್ವಜನಿಕ ಆಸ್ತಿಗೆ ಹಾನಿ ಪ್ರಕರಣ – ಕಲಂ: 126(2), 352, 115(2), 351(2) ಜೊತೆಗೆ 3(5) ಬಿಎನ್‌ಎಸ್ ಆಕ್ಟ್.

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ (ಅ.ಕ್ರ. 54/2025): ಕೊಲೆ ಹಾಗೂ ಸಂಘಟಿತ ಅಪರಾಧ ಪ್ರಕರಣ – ಕಲಂ: 103(1), 109(1), 118(1), 118(2), 61(2)(a), 238(a), 238(b), 249(a) ಜೊತೆಗೆ 3(5) ಬಿ.ಎನ್.ಎಸ್-2023, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959 ಕಲಂ 25(1)(A) ಮತ್ತು ಕೋಕೋಕಾ (KCOCA-2000).

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ (ಅ.ಕ್ರ. 58/2025): ಅಪರಾಧಿಕ ಮಾನವ ಹತ್ಯೆಗೆ ಯತ್ನ – ಕಲಂ: 110 ಬಿಎನ್‌ಎಸ್ ಕಾಯ್ದೆ.

3. ಪ್ರದೀಪ್ (ಒಟ್ಟು 3 ಪ್ರಕರಣಗಳು):

kadaba times
kadaba times
  • ಬಂಟ್ವಾಳ ನಗರ ಪೊಲೀಸ್ ಠಾಣೆ (ಅ.ಕ್ರ. 169/2017): ಕೊಲೆ ಪ್ರಕರಣ – ಕಲಂ: 143, 147, 148, 447, 448, 302, 120(ಬಿ), 201 ಜೊತೆಗೆ 149 ಐ.ಪಿ.ಸಿ.

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ (ಅ.ಕ್ರ. 124/2021): ಕೊಲೆ ಯತ್ನ ಪ್ರಕರಣ – ಕಲಂ: 448, 504, 323, 324, 307, 506 ಜೊತೆಗೆ 34 ಐಪಿಸಿ.

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ (ಅ.ಕ್ರ. 54/2025): ಕೊಲೆ ಹಾಗೂ ಸಂಘಟಿತ ಅಪರಾಧ ಪ್ರಕರಣ – ಕಲಂ 103(1) ಬಿಎನ್‌ಎಸ್, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕೋಕೋಕಾ (KCOCA-2000).

4. ರಂಜಿತ್ (ಒಟ್ಟು 2 ಪ್ರಕರಣಗಳು):

  • ಬಂಟ್ವಾಳ ನಗರ ಪೊಲೀಸ್ ಠಾಣೆ (ಅ.ಕ್ರ. 169/2017): ಕೊಲೆ ಪ್ರಕರಣ – ಕಲಂ: 143, 147, 148, 447, 448, 302, 120(ಬಿ), 201 ಜೊತೆಗೆ 149 ಐ.ಪಿ.ಸಿ.

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ (ಅ.ಕ್ರ. 54/2025): ಕೊಲೆ ಹಾಗೂ ಸಂಘಟಿತ ಅಪರಾಧ ಪ್ರಕರಣ – ಬಿಎನ್‌ಎಸ್ ಕಲಂಗಳು, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕೋಕೋಕಾ (KCOCA-2000).

5. ಅಭಿನ್ ರೈ (ಒಟ್ಟು 2 ಪ್ರಕರಣಗಳು):

  • ಬಂಟ್ವಾಳ ನಗರ ಪೊಲೀಸ್ ಠಾಣೆ (ಅ.ಕ್ರ. 169/2017): ಕೊಲೆ ಪ್ರಕರಣ – ಕಲಂ: 143, 147, 148, 302, 120(ಬಿ), 201 ಜೊತೆಗೆ 149 ಐ.ಪಿ.ಸಿ.

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ (ಅ.ಕ್ರ. 54/2025): ಕೊಲೆ ಹಾಗೂ ಸಂಘಟಿತ ಅಪರಾಧ ಪ್ರಕರಣ – ಕಲಂ: 103(1), 109(1), 118(1), 118(2), 61(2)(a), 238(a), 238(b), 249(a) ಜೊತೆಗೆ 3(5) ಬಿ.ಎನ್.ಎಸ್-2023, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕೋಕೋಕಾ (KCOCA-2000).

6. ಶಿವಪ್ರಸಾದ್ (ಒಟ್ಟು 2 ಪ್ರಕರಣಗಳು):

  • ಬಂಟ್ವಾಳ ನಗರ ಪೊಲೀಸ್ ಠಾಣೆ (ಅ.ಕ್ರ. 169/2017): ಕೊಲೆ ಪ್ರಕರಣ – ಕಲಂ: 143, 147, 148, 447, 448, 302, 120(ಬಿ), 201 ಜೊತೆಗೆ 149 ಐ.ಪಿ.ಸಿ.

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ (ಅ.ಕ್ರ. 54/2025): ಕೊಲೆ ಹಾಗೂ ಸಂಘಟಿತ ಅಪರಾಧ ಪ್ರಕರಣ – ಬಿಎನ್‌ಎಸ್ ಕಲಂಗಳು, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕೋಕೋಕಾ (KCOCA-2000).

:ಈ ಎಲ್ಲಾ ಆರೋಪಿಗಳು ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿ ಸಾರ್ವಜನಿಕರ ಜೀವ ಮತ್ತು ಶಾಂತಿಗೆ ಅಪಾಯಕಾರಿಯಾಗಿದ್ದ ಹಿನ್ನೆಲೆಯಲ್ಲಿ, ಇವರ ವಿರುದ್ಧ ಗೂಂಡಾ ಕಾಯ್ದೆಯ ಅಸ್ತ್ರ ಪ್ರಯೋಗಿಸಲಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಮಾಜವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.y

Related Articles

Latest Articles