ಸುಬ್ರಹ್ಮಣ್ಯ: ಭಾರಿ ಮಳೆಗೆ ಏನೆಕಲ್ಲಿನಲ್ಲಿ ರಸ್ತೆ ಮೋರಿ ಏಕಾಏಕಿ ಕುಸಿತ; ರಸ್ತೆ ಸಂಪರ್ಕ ಕಡಿತ

kadaba times

​ಸುಬ್ರಹ್ಮಣ್ಯ / ಕಡಬ: ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಗ್ರಾಮ ಪರಿಸರದಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಯ ಅಬ್ಬರಕ್ಕೆ ಮಧುವನ–ಕಲ್ಲಾಜೆ ಗ್ರಾಮಗಳನ್ನು ಸಂಪರ್ಕಿಸುವ ಮುಖ್ಯ ಸೇತುವೆಯಲ್ಲಿ ಮೋರಿಯೊಂದು ಏಕಾಏಕಿ ಕುಸಿದು ಬಿದ್ದಿದ್ದು, ರಸ್ತೆ ಸಂಪರ್ಕ  ಕಡಿತಗೊಂಡಿದೆ.

kadaba times
uniq

ನಿರಂತರ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿ ಸೇತುವೆಯ ತಳಪಾಯ ಕುಸಿದು ಬಿದ್ದಿದ್ದು, ಈ ಮಾರ್ಗದಲ್ಲಿ ವಾಹನ ಹಾಗೂ ಸಾರ್ವಜನಿಕರ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಮತ್ತು ರೈತರು ಪರದಾಡುವಂತಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸದಸ್ಯ ಮೋಹನ ಕೋಟಿ ಗೌಡ ಹಾಗೂ ಸ್ಥಳೀಯ ಪ್ರಮುಖರರು  ಸ್ಥಳಕ್ಕೆ ಭೇಟಿ ನೀಡಿದ್ದಾರೆ.

kadaba times
kadaba times

​  ತಾಲೂಕು ಆಡಳಿತದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ತಕ್ಷಣವೇ  ತಾತ್ಕಾಲಿಕ ವ್ಯವಸ್ಥೆಗೆ  ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Related Articles

Latest Articles