
ಕಡಬ:ಕಡಬ ಪೇಟೆಯ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರಿಗೆ ಆಮಿಷವೊಡ್ಡಿ ನಿಷೇಧಿತ ಹಣ ಪರಿಚಲನಾ ಯೋಜನೆ (ಮನಿ ಸರ್ಕ್ಯುಲೇಷನ್ ಸ್ಕೀಮ್) ನಡೆಸುತ್ತಿದ್ದ ಜಾಲವನ್ನು ಕಡಬ ಪೊಲೀಸರು ಭೇದಿಸಿದ್ದು, ಸಂಸ್ಥೆಯ ಮಾಲೀಕರು ಹಾಗೂ ಸ್ಥಳೀಯ ಏಜೆಂಟರು ಸೇರಿದಂತೆ 8 ಮಂದಿ ವಿರುದ್ಧ ಪ್ರೈಜ್ ಚಿಟ್ಸ್ ಮತ್ತು ಮನಿ ಸರ್ಕ್ಯುಲೇಷನ್ ಸ್ಕೀಮ್ಸ್ ನಿಷೇಧ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದಾರೆ.


ಗುಪ್ತಚರ ಮಾಹಿತಿ ಮೇರೆಗೆ ಪೊಲೀಸ್ ಕಾರ್ಯಾಚರಣೆ: ದಿನಾಂಕ 23.08.2026 ರಂದು ಬೆಳಿಗ್ಗೆ ಕಡಬ ಪೊಲೀಸ್ ಠಾಣೆಯ ಗುಪ್ತವಾರ್ತೆ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ, ಕಡಬ ಪೇಟೆಯ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರನ್ನು ಸೇರಿಸಿ ಅಕ್ರಮ ಹಣಗಳಿಕೆಯ ಜಾಲದ ಸಭೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಹಾವೇರಿ ಮೂಲದ ಕಿಂಗ್ಸ್ ಬಜಾರ್ (KINGS Bazaar) ಎಂಬ ಕಂಪನಿಯ ಹೆಸರಿನಲ್ಲಿ ಸಾರ್ವಜನಿಕರಿಗೆ ಬಲೆ ಬೀಸುತ್ತಿರುವುದು ಬಯಲಾಗಿದೆ.
“ಕಂಪನಿಗೆ ಸದಸ್ಯರಾಗಿ ಹಣ ತೊಡಗಿಸಿದರೆ ಶೀಘ್ರವಾಗಿ ಭಾರಿ ಲಾಭ ಗಳಿಸಬಹುದು, ಬೆಲೆಯುಳ್ಳ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದು ಹಾಗೂ ಇತರರನ್ನು ಸದಸ್ಯರನ್ನಾಗಿ ಸೇರಿಸಿದರೆ ಪ್ರತಿದಿನ ಕಮಿಷನ್ ಸಿಗುತ್ತದೆ” ಎಂದು ಸಾರ್ವಜನಿಕರನ್ನು ನಂಬಿಸಿ, ಹಣ ವಸೂಲಿ ಮಾಡುವ ದಂಧೆ ನಡೆಸುತ್ತಿದ್ದರು.
ಎಫ್ಐಆರ್ನಲ್ಲಿರುವ ಆರೋಪಿಗಳ ವಿವರ:
|
A1 |
ಮಾಲೀಕರು / ಸಂಸ್ಥೆ, ಕಿಂಗ್ಸ್ ಬಜಾರ್ |
ಹಾವೇರಿ |
|
A2 |
ಸುಬ್ರಹ್ಮಣ್ಯ ಶಾಗ್ರಿತ್ತಾಯ (50) |
ತೋಟದ ಮೂಲೆ, ಕೊಕ್ಕಡ, ಬೆಳ್ತಂಗಡಿ |
|
A3 |
ಗುರುಮೂರ್ತಿ (54) |
ಹಳ್ಳಿಂಗೇರಿ, ಕೊಕ್ಕಡ, ಬೆಳ್ತಂಗಡಿ |
|
A4 |
ಸುರೇಶ್ ಆರ್ (55) |
ಪರ್ಲ ಮನೆ, ಬಿಳಿನೆಲೆ, ಕಡಬ ![]() ![]() |
|
A5 |
ಬಾಲಕೃಷ್ಣ ಪಿ ಹೆಚ್ (42) |
ಅಲಂಪಾಡಿ ಮನೆ, ಕೌಕ್ರಾಡಿ, ಕಡಬ |
|
A6 |
ಕಿರಣ್ ಕುಮಾರ್ (21) |
ನೆಟ್ಟಣ, ಬಿಳಿನೆಲೆ, ಕಡಬ |
|
A7 |
ಶ್ರೀನಾಥ್ (48) |
ನೆಟ್ಟಣ, ಬಿಳಿನೆಲೆ, ಕಡಬ |
|
A8 |
ಸಂದೇಶ್ |
ಪುತ್ತೂರು |
ಕಾನೂನು ಕ್ರಮ:
ಸಾರ್ವಜನಿಕರಲ್ಲಿ ದುರಾಶೆ ಹುಟ್ಟಿಸಿ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 100/2026 ಕಾಯ್ದೆ ಮತ್ತು ಕಲಂಗಳು: Prize Chits and Money Circulation Schemes (Banning) Act 1978 (U/S 4, 5, 6) ಅಡಿಯಲ್ಲಿ ಸ್ವಯಂಪ್ರೇರಿತ (Suo Moto) ಎಫ್ಐಆರ್ ದಾಖಲಾಗಿದ್ದು, ಠಾಣಾಧಿಕಾರಿ ಜಂಬುರಾಜ್ ಮಹಾಜನ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.


