ರಾಮಕುಂಜ: ಮನೆಯ ಮೇಲೆ ವಾಲಿ ನಿಂತಿದ್ದ ಅಪಾಯಕಾರಿ ಮರದ ಗೆಲ್ಲುಗಳ ತೆರವು

kadaba times

ರಾಮಕುಂಜ / ಕಡಬ:ರಾಮಕುಂಜ ಗ್ರಾಮದ ಮಹಿಳೆಯೊಬ್ಬರ  ಮನೆಯ ಮೇಲೆ ವಾಲಿ ನಿಂತು, ವಿದ್ಯುತ್ ಸಂಪರ್ಕ ಹಾಗೂ ಜೀವಕ್ಕೆ ಅಪಾಯ ತಂದೊಡ್ಡಿದ್ದ ಪಕ್ಕದ ಜಮೀನಿನ ಮರದ ಗೆಲ್ಲುಗಳನ್ನು ಕೊನೆಗೂ  ತೆರವುಗೊಳಿಸಲಾಗಿದೆ.ಈ ಮೂಲಕ  ಕಳೆದ ಹಲವು ದಿನಗಳಿಂದ ಭಯದ ನೆರಳಲ್ಲೇ ದಿನ ದೂಡುತ್ತಿದ್ದ ಕುಟುಂಬವು ನಿಟ್ಟುಸಿರು ಬಿಟ್ಟಿದೆ.

kadaba times
uniq

ಶಾರದಾ ನಗರ ನಿವಾಸಿ ಕಮಲ ಅವರ ಸಣ್ಣ ಮನೆಯ ಮೇಲೆ ಪಕ್ಕದ ಜಾಗದ ರಬ್ಬರ್ ಹಾಗೂ ಇತರ ಮರಗಳ ಗೆಲ್ಲುಗಳು ಬಾಗಿ ನಿಂತಿದ್ದವು. ಮಳೆಗಾಲದಲ್ಲಿ ಮರದ ಗೆಲ್ಲುಗಳು ಮನೆಯ ಮೇಲ್ಛಾವಣಿಗೆ ಬಿದ್ದು ಶೀಟ್ ಹಾನಿಯಾಗಿತ್ತು.ಇದರಿಂದ ಮಳೆನೀರು ಬಿದ್ದು  ವಿದ್ಯುತ್ ಸ್ವಿಚ್ ಬೋರ್ಡ್ ಮತ್ತು ಗೋಡೆಗಳಿಗೆ ವಿದ್ಯುತ್ ಪ್ರವಹಿಸುವ (ಕರೆಂಟ್ ಶಾಕ್) ಭೀತಿ ಎದುರಾಗಿತ್ತು.

ಮನೆಯಲ್ಲಿ ಸಣ್ಣ ಮಕ್ಕಳಿದ್ದು, ಮಳೆಯ ದಿನಗಳಲ್ಲಿ ಮನೆಯೊಳಗೆ ಆತಂಕದಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಗ್ರಾಮ ಪಂಚಾಯತ್, ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಲಿಖಿತ ಮನವಿ ಸಲ್ಲಿಸಿದ್ದರೂ ತಕ್ಷಣದ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ.

kadaba times
kadaba times

ಬಳಿಕ ಈ ವಿಚಾರವನ್ನು ಸಾಮಾಜಿಕ ಮುಂದಾಳು ರಾಘವ ಕಳಾರ ಅವರ ಗಮನಕ್ಕೆ ತರಲಾಗಿದ್ದು ಪಿಡಿಒ ಜೊತೆ ಮಾತುಕತೆ ನಡೆಸಿ  ಮನೆಗೆ ಅಪಾಯ ತಂದೊಡ್ಡುತ್ತಿದ್ದ ಮರದ ಕೊಂಬೆಗಳನ್ನು ತ್ವರಿತವಾಗಿ ಕಡಿಸಿ ತೆರವುಗೊಳಿಸುವಂತೆ ಮಾಡಿದ್ದಾರೆ.

Related Articles

Latest Articles