ಪಂಜ ದೇವಸ್ಥಾನ: ಆಡಳಿತ ಮಂಡಳಿ ಸದಸ್ಯತ್ವಕ್ಕೆ ರಾಜೀನಾಮೆ

kadaba times

ಐತಿಹಾಸಿಕ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಅವ್ಯವಹಾರ ಮತ್ತು ಕಾರ್ಯವೈಖರಿಯ ಲೋಪದೋಷಗಳ ಆರೋಪ ಕೇಳಿಬಂದಿರುವ ನಡುವೆಯೇ, ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಶ್ರೀಮತಿ ಪವಿತ್ರ ಮಲ್ಲೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಭಕ್ತರ ಒತ್ತಾಯದ ಮೇರೆಗೆ ನಡೆದ ಮ್ಯಾರಥಾನ್ ಸಭೆಯ ಬೆನ್ನಲ್ಲೇ ನಡೆದಿರುವ ಈ ಬೆಳವಣಿಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ

kadaba times
uniq

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಬಿರುಗಾಳಿ ಎದ್ದಿದ್ದು, ವ್ಯವಸ್ಥಾಪನಾ ಸಮಿತಿಯ ಸದಸ್ಯತ್ವಕ್ಕೆ ಶ್ರೀಮತಿ ಪವಿತ್ರ ಮಲ್ಲೆಟ್ಟಿ ಅವರು ರಾಜೀನಾಮೆ ನೀಡಿದ್ದಾರೆ.

ಆಗಸ್ಟ್ 10 ರಂದೇ ತಮ್ಮ ರಾಜೀನಾಮೆ ಪತ್ರವನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಿಗೆ ಸಲ್ಲಿಸಿರುವ ಅವರು, ವೈಯಕ್ತಿಕ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ, ಆಡಳಿತ ಮಂಡಳಿಯ ನಡವಳಿಕೆಗಳಿಂದ ಭಕ್ತರ ನಿರೀಕ್ಷೆ ಹಾಗೂ ಪಾರದರ್ಶಕತೆಗೆ ಧಕ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಡಳಿತ ಮಂಡಳಿ ವಿರುದ್ಧ ಅವ್ಯವಹಾರಗಳ ಆರೋಪ – ಭಕ್ತರ ಆಕ್ರೋಶ: ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯವೈಖರಿ, ಆರ್ಥಿಕ ವ್ಯವಹಾರಗಳಲ್ಲಿನ ಗೊಂದಲಗಳು, ಸಿಬ್ಬಂದಿಗಳ ಅಸಹಜ ವಜಾ ಹಾಗೂ ದೇವಸ್ಥಾನದ ತೋಟದ ಗುತ್ತಿಗೆ ನೀಡುವ ಪ್ರಕ್ರಿಯೆಯಲ್ಲಿ ಭಾರೀ ಲೋಪದೋಷಗಳು ನಡೆದಿವೆ ಎಂದು ಭಕ್ತರು ಹಾಗೂ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

kadaba times
kadaba times

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪಟ್ಟು ಹಿಡಿದು ಆಡಳಿತ ಮಂಡಳಿಯ ತುರ್ತು ಸಭೆಗೆ ಒತ್ತಾಯಿಸಿದ್ದರು. ಅದರಂತೆ ಆಗಸ್ಟ್ 15 ರಂದು ಮಧ್ಯಾಹ್ನ 2:00 ಗಂಟೆಗೆ ಆರಂಭವಾದ ಸಭೆಯು ಸತತ 8 ಗಂಟೆಗಳ ಕಾಲ ನಡೆದು ತಡರಾತ್ರಿ 10:00 ಗಂಟೆಯವರೆಗೂ ಮುಂದುವರಿದಿತ್ತು. ಕ್ಷೇತ್ರದ ಇತಿಹಾಸದಲ್ಲೇ ಭಕ್ತರು ಪಟ್ಟುಬಿಡದೆ ನಡೆಸಿದ ಮೊಟ್ಟಮೊದಲ ಬೃಹತ್ ವಿಚಾರಣಾ ಸಭೆ ಇದಾಗಿತ್ತು.

ಮತ್ತಷ್ಟು ರಾಜೀನಾಮೆ ಸಾಧ್ಯತೆ? ಕಾವೇರಿದ ಚರ್ಚೆ: ದೇವಸ್ಥಾನದ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಮಟ್ಟದ ಅಸಮಾಧಾನ ಮತ್ತು ಸಾರ್ವಜನಿಕ ಜಟಾಪಟಿ ನಡೆದ ಬೆನ್ನಲ್ಲೇ ಸದಸ್ಯೆ ಪವಿತ್ರ ಮಲ್ಲೆಟ್ಟಿ ಅವರ ರಾಜೀನಾಮೆ ಹೊರಬಿದ್ದಿರುವುದು ತೀವ್ರ ಸಂಚಲನ ಮೂಡಿಸಿದೆ. ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಯ ಇತರ ಸದಸ್ಯರೂ ರಾಜೀನಾಮೆ ನೀಡಲಿದ್ದಾರೆಯೇ ಅಥವಾ ಆಡಳಿತದಲ್ಲಿ ಮಹತ್ತರ ಬದಲಾವಣೆಗಳು ನಡೆಯಲಿದೆಯೇ ಎಂಬ ಕುತೂಹಲ ಸಾರ್ವಜನಿಕ ವಲಯದಲ್ಲಿ ಮನೆಮಾಡಿದೆ.

Related Articles

Latest Articles