
ಕಡಬ: ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪನ್ಯ ವಾರ್ಡ್ನ ಬಾಜಿನಡಿ ರಸ್ತೆಯು 15ನೇ ಹಣಕಾಸು ಆಯೋಗದ ಯೋಜನೆಯಡಿ ನೂತನವಾಗಿ ಕಾಂಕ್ರೀಟೀಕರಣಗೊಂಡಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಉದ್ಘಾಟನೆಗೊಂಡಿತು.


ಪನ್ಯ ವಾರ್ಡ್ನ ಸದಸ್ಯ ಮಹಮ್ಮದ್ ಫೈಝಲ್ ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು, ಊರಿನ ಹಿರಿಯರಾದ ಹಮೀದ್ ಸಿ.ಟಿ.ಎಂ ಮತ್ತು ಉಮರ್ ಮುಸ್ಲಿಯಾರ್ ಅವರು ಜಂಟಿಯಾಗಿ ರಿಬ್ಬನ್ ಕತ್ತರಿಸುವ ಮೂಲಕ ರಸ್ತೆಯನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.


ಈ ಸರಳ ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಭಿಲಾಷ್ ಪಿ. ಕೆ. ( ಅಧ್ಯಕ್ಷರು, ಕಡಬ ಬ್ಲಾಕ್ ಕಾಂಗ್ರೆಸ್), ಪಿ. ಪಿ. ವರ್ಗೀಸ್ – (ಮಾಜಿ ಸದಸ್ಯರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್), ಹನೀಫ್ ಕೆ. ಎಂ. – (ಅಧ್ಯಕ್ಷರು, ಕಡಬ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ), ಕೃಷ್ಣಪ್ಪ ಪೂಜಾರಿ – (ಸದಸ್ಯರು, ಕಡಬ ಪಟ್ಟಣ ಪಂಚಾಯತ್), ಮೋಹನ್ ದಾಸ್ –( ಸದಸ್ಯರು, ಕಡಬ ಪಟ್ಟಣ ಪಂಚಾಯತ್), ಮನೋಜ್ ನೆಲ್ಯಾಡಿ –( ಅಧ್ಯಕ್ಷರು, ಕಡಬ ಬ್ಲಾಕ್ ಕಾರ್ಮಿಕರ ಘಟಕ) ಸೇರಿದಂತೆ ಪ್ರಮುಖ ಜನಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.
