ದೊಡ್ಡಕೊಪ್ಪ ಯೂತ್ ಕ್ಲಬ್‌ನಿಂದ ಆ.16ರಂದು ‘ಆಟಿಡೊಂಜಿ ಕೂಟ

kadaba times

ಕಡಬ ತಾಲೂಕಿನ ಕೋಡಿಂಬಾಳ ವ್ಯಾಪ್ತಿಯ ಯೂತ್ ಕ್ಲಬ್ ದೊಡ್ಡಕೊಪ್ಪ (ಕುಂಬಾರ ಯುವ ವೇದಿಕೆ) ವತಿಯಿಂದ 9ನೇ ವರ್ಷದ ‘ಆಟಿಡೊಂಜಿ ಕೂಟ’ ಹಾಗೂ ಗ್ರಾಮೀಣ ಆಟೋಟ ಸ್ಪರ್ಧೆಗಳು ಆಗಸ್ಟ್ 16ರ ಭಾನುವಾರ ಕುತ್ಯಾಡಿ ವಠಾರದಲ್ಲಿ ವಿಜೃಂಭಣೆಯಿಂದ ಜರುಗಲಿವೆ. ಕಾರ್ಯಕ್ರಮದ ಸಭಾ ಸಮಾರಂಭ, ಸನ್ಮಾನ ಹಾಗೂ ವಿವಿಧ ಧಾರ್ಮಿಕ-ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ.

kadaba times
uniq

ಕಡಬ:ತುಳುನಾಡಿನ ಸಾಂಪ್ರದಾಯಿಕ ಸಂಸ್ಕೃತಿ ಹಾಗೂ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಕಡಬ ತಾಲೂಕಿನ ಯೂತ್ ಕ್ಲಬ್ ದೊಡ್ಡಕೊಪ್ಪ ಕೋಡಿಂಬಾಳ (ಕುಂಬಾರ ಯುವ ವೇದಿಕೆ) ವತಿಯಿಂದ 9ನೇ ವರ್ಷದ ‘ಆಟಿಡೊಂಜಿ ಕೂಟ’ ಹಾಗೂ ಆಟೋಟ ಸ್ಪರ್ಧೆಗಳು ಆಗಸ್ಟ್ 16, 2026ರ ಭಾನುವಾರದಂದು ಕುತ್ಯಾಡಿ ವಠಾರದಲ್ಲಿ ಆಯೋಜನೆಗೊಂಡಿದೆ.

ಆಗಸ್ಟ್ 16ರ ಬೆಳಿಗ್ಗೆ 8:00 ಗಂಟೆಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸ್ಥಳ ದಾನಿಗಳಾದ  ಬಾಲಕೃಷ್ಣ ನಾಯಕ್ ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಬದಿಗುಂಡ ಮಾಡ ದೊಡ್ಡಕೊಪ್ಪ ಆಡಳಿತ ಮೋಕ್ತೆಸರರಾದ  ತಮ್ಮಯ್ಯ ಕುಂಬಾರ, ಪ್ರಧಾನ ಅರ್ಚಕ  ಚಿನ್ನಪ್ಪ ಕುಂಬಾರ ಪೂಜಾರಿ ಮನೆ ಹಾಗೂ ಸಿದ್ಧಿವಿನಾಯಕ ಭಜನಾ ಮಂದಿರದ ಅರ್ಚಕ ಐತ್ತಪ್ಪ ಕುಂಬಾರ ಜಾಣಮನೆ ಭಾಗವಹಿಸಲಿದ್ದಾರೆ.

kadaba times
kadaba times

ಸಂಜೆ 4:00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೂತ್ ಕ್ಲಬ್ ದೊಡ್ಡಕೊಪ್ಪ ಕಡಬ ಇದರ ಅಧ್ಯಕ್ಷ ಮಹೇಶ ಜಿ. ವಹಿಸಲಿದ್ದಾರೆ.ಇದೇ ವೇಳೆ  ಸಮಾಜಮುಖಿ ಸೇವೆ ಸಲ್ಲಿಸಿದ ಮೆಸ್ಕಾಂ ಸಿಬ್ಬಂದಿ  ಸಿದ್ಧರಾಮಯ್ಯ ಹಾಗೂ ಸ್ಥಳ ದಾನಿ  ಬಾಲಕೃಷ್ಣ ನಾಯಕ್  ಅವರಿಗೆ ಸನ್ಮಾನ ನಡೆಯಲಿದೆ.

ಗ್ರಾಮೀಣ ಆಟೋಟ ಸ್ಪರ್ಧೆಗಳ ವೈಭವ:

ದಿನವಿಡೀ ಕುತ್ಯಾಡಿ  ವಠಾರದಲ್ಲಿ ಸಾರ್ವಜನಿಕರಿಗಾಗಿ ನಾನಾ ರೀತಿಯ ಸಾಂಪ್ರದಾಯಿಕ  ಆಟೋಟ ಸ್ಪರ್ಧೆಗಳು, ಕೆಸರು ಗದ್ದೆ ಕ್ರೀಡೆಗಳು ಜರುಗಲಿದ್ದು, ಕಡಬ ಹಾಗೂ ಸುತ್ತಮುತ್ತಲಿನ ಭಾಗದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಯೂತ್ ಕ್ಲಬ್ ದೊಡ್ಡಕೊಪ್ಪದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಕೋರಿದ್ದಾರೆ.

Related Articles

Latest Articles