
80 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕಡಬದಲ್ಲಿ ಬಿಜೆಪಿ ಮಹಾಶಕ್ತಿ ವತಿಯಿಂದ ‘ತಿರಂಗ ಯಾತ್ರೆ’ಯನ್ನು ಆಯೋಜಿಸಲಾಗಿತ್ತು.ಕಡಬದ ಮಿನಿ ವಿಧಾನ ಸೌಧದ ಬಳಿ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಯಾತ್ರೆಗೆ ಚಾಲನೆ ನೀಡಿದರು.


ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಕಡಬದಲ್ಲಿ ಆಯೋಜಿಸಲಾಗಿದ್ದ ‘ತಿರಂಗ ಯಾತ್ರೆ’ ಆಯೋಜಿಸಿಲಾಗಿತ್ತು.
ಕಡಬದ ಮಿನಿ ವಿಧಾನ ಸೌಧದ ಆವರಣದ ಬಳಿ ಆರಂಭಗೊಂಡ ಈ ಸುಂದರ ಮೆರವಣಿಗೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು.


ಬಳಿಕ ಕಡಬದ ಪ್ರಮುಖ ಬೀದಿಗಳ ಮೂಲಕ, ಕಡಬ ಮುಖ್ಯ ಪೇಟೆಯನ್ನು ಹಾದು ಪಂಜ ರಸ್ತೆಯ ವರೆಗೆ ತಿರಂಗ ಯಾತ್ರೆ ಸಾಗಿತು.ಯಾತ್ರೆಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಹಾಗೂ ಪಕ್ಷದ ಪ್ರಮುಖರು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು, ‘ಭಾರತ್ ಮಾತಾ ಕೀ ಜೈ’ ಹಾಗೂ ರಾಷ್ಟ್ರಭಕ್ತಿಯ ಜಯಘೋಷಗಳನ್ನು ಕೂಗುತ್ತಾ ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ವಿವಿಧ ಘಟಕಗಳ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.
