ಕಡಬ ಪೇಟೆಯಲ್ಲಿ ಹಾಲೆ ಮರದ ಕಷಾಯ ಜೊತೆ ನನ್ನೆರಿ ಸವಿದ ಸಾರ್ವಜನಿಕರು

kadaba times

ಆಟಿ ಅಮವಾಸ್ಯೆಯ ಶುಭ ಸಂದರ್ಭದಲ್ಲಿ ವಿಶ್ವ ತುಳುವೆರ್ ಮಂಗಳೂರು ಹಾಗೂ ವಿಶ್ವ ತುಳುವೆರ್ ಕಡಬ ಘಟಕದ ವತಿಯಿಂದ ಕಡಬದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸಾರ್ವಜನಿಕರಿಗೆ ‘ಹಾಲೆ ಮರದ ಕೆತ್ತೆಯ ಕಷಾಯ’ (ಪಾಲೆದ ಕೆತ್ತೆದ ಕಷಾಯ) ಹಾಗೂ ‘ಆಟಿ ಅವಲಕ್ಕಿ’ ವಿತರಿಸುವ ಕಾರ್ಯಕ್ರಮ ಬುಧವಾರ ಬೆಳಿಗ್ಗೆ ಕಡಬ ಮಧ್ಯ ಪೇಟೆಯಲ್ಲಿ ನಡೆಯಿತು.

kadaba times
uniq

ಕಡಬ: ತುಳುನಾಡಿನ ಆಚರಣೆ ಹಾಗೂ ಸಂಸ್ಕೃತಿಯ ಸದ್ಭಾವನೆಯ ಸಂಕೇತವಾದ ಆಟಿ ಅಮವಾಸ್ಯೆಯ ಶುಭ ಸಂದರ್ಭದಲ್ಲಿ ವಿಶ್ವ ತುಳುವೆರ್ ಮಂಗಳೂರು ಹಾಗೂ ವಿಶ್ವ ತುಳುವೆರ್ ಕಡಬ ಘಟಕದ ವತಿಯಿಂದ ಕಡಬ  ಪೇಟೆಯಲ್ಲಿ ಬುಧವಾರ ಬೆಳಿಗ್ಗೆ ಹಾಲೆ ಮರದ ಕೆತ್ತೆಯ ಕಷಾಯ (ಪಾಲೆದ ಕೆತ್ತೆದ ಕಷಾಯ) ಹಾಗೂ ಆಟಿ ಅವಲಕ್ಕಿ ವಿತರಣಾ ಕಾರ್ಯಕ್ರಮ ನಡೆಯಿತು.

ಆಟಿ ಅಮವಾಸ್ಯೆಯ ದಿನದಂದು ನೂರಾರು ರೋಗನಿವಾರಕ ಗುಣಗಳನ್ನು ಹೊಂದಿರುವ ‘ಪಾಲೆದ ಕೆತ್ತೆ’ಯ ಕಷಾಯವನ್ನು ಸೇವಿಸುವುದು ತುಳುನಾಡಿನ ಪವಿತ್ರ ಸಂಪ್ರದಾಯವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಕಡಬ ಮಧ್ಯ ಪೇಟೆಯಲ್ಲಿ ಆಯೋಜಿಸಲಾಗಿದ್ದ ಈ ಉಚಿತ ವಿತರಣಾ ಶಿಬಿರದಲ್ಲಿ ನೂರಾರು ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಉದ್ಯೋಗಿಗಳು ಉತ್ಸಾಹದಿಂದ ಭಾಗವಹಿಸಿ, ಔಷಧೀಯ ಗುಣವುಳ್ಳ ಹಾಲೆ ಮರದ ಕಷಾಯ ಹಾಗೂ ರುಚಿಕರವಾದ ಆಟಿ ಅವಲಕ್ಕಿಯನ್ನು ಸ್ವೀಕರಿಸಿ ಸಂಭ್ರಮಿಸಿದರು.

kadaba times
kadaba times

ಈ ಸಂದರ್ಭದಲ್ಲಿ ವಿಶ್ವ ತುಳುವೆರ್ ಕಡಬ ಘಟಕದ ಅಧ್ಯಕ್ಷ ತಿರುಮಲೇಶ್ವರ ಸಾಕೋಟೆ, ಕಾರ್ಯದರ್ಶಿ ದಯಾನಂದ ಕಲ್ನಾರ್, ಸದಸ್ಯ ಸುಶಾನ್ ತಲೆಕ್ಕಿ, ಹಾಗೂ ಪ್ರಮುಖರಾದ ಉಮೇಶ್ ಸಾಕೋಟೆಜಾಲು, ಪ್ರೇಮಚಂದ್ ಅಜ್ಜರಮೂಲೆ, ರಾಜೇಂದ್ರ ನಂದಗುರಿ, ಸುರೇಶ್ ಕಲ್ಲೆಂಬಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದು, ಕಷಾಯ ವಿತರಿಸಿ ಯಶಸ್ವಿಯಾಗಿ ಸಹಕರಿಸಿದರು.

Related Articles

Latest Articles