ಕುಂಡಡ್ಕ ಪಾಲ್ಸ್ ಬಳಿ ವಿದ್ಯಾರ್ಥಿಗಳಿಗೆ ಹಲ್ಲೆ,ಬೆದರಿಕೆ: ಐವರ ವಿರುದ್ಧ ಕೇಸ್

kadaba times

ಕಡಬದ ಕುಂಡಡ್ಕ ಪಾಲ್ಸ್‌ಗೆ ಆಟವಾಡಲು ತೆರಳಿದ್ದ  ಅಪ್ರಾಪ್ತ ಬಾಲಕ ಹಾಗೂ ಆತನ ಸಹಪಾಠಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಆರೋಪದ ಮೇಲೆ  ಐವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಹಾಗೂ ಬಿಎನ್‌ಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ.

kadaba times
uniq

ಕಡಬ:  ಮರ್ಧಾಳ ಸಮೀಪದ ಕುಂಡಡ್ಕ ಪಾಲ್ಸ್‌ನಲ್ಲಿ ಆಟವಾಡುತ್ತಿದ್ದ ಅಪ್ರಾಪ್ತ ಶಾಲಾ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಗಂಭೀರ ಘಟನೆಗೆ ಸಂಬಂಧಿಸಿದಂತೆ, ಐವರು ಆರೋಪಿಗಳ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ‘ಅಟ್ರಾಸಿಟಿ’ (SC/ST Atrocities Act) ಹಾಗೂ ಬಿಎನ್‌ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

​ಪ್ರಕರಣದಲ್ಲಿ ದೂರುದಾರ ಬಾಲಕ ಹಾಗೂ ಸಹಪಾಠಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮರ್ದಾಳದ   ರೋಹಿತ್, ​ದೇವಿಪ್ರಸಾದ್ ,ಚಂದನ್ ,​ಉಮೇಶ್ ಹಾಗೂ  ವಿದ್ಯಾರ್ಥಿನಿಯ ತಂದೆಯ ವಿರುದ್ದ ಪ್ರಕರಣ ದಾಖಲಾಗಿದೆ

​ಪರಿಶಿಷ್ಟ ಪಂಗಡಕ್ಕೆ  ಸೇರಿದ ದೂರುದಾರ ಅಪ್ರಾಪ್ತ ಬಾಲಕನು ತನ್ನ ನಾಲ್ವರು ಸಹಪಾಠಿಗಳೊಂದಿಗೆ (ವಿದ್ಯಾರ್ಥಿನಿ ಸೇರಿದಂತೆ) ಆಗಸ್ಟ್ 3ರಂದು ಬೆಳಿಗ್ಗೆ ಕಡಬದ ಕುಂಡಡ್ಕ ಪಾಲ್ಸ್‌ಗೆ ಆಟವಾಡಲು ತೆರಳಿದ್ದನು. ಈ ವೇಳೆ ಸ್ಥಳಕ್ಕೆ ಬಂದ ಆರೋಪಿಗಳು  ದೂರುದಾರ ಬಾಲಕನಿಗೆ  ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

kadaba times
kadaba times

​ಅಷ್ಟಕ್ಕೇ ನಿಲ್ಲದೆ, ದೂರುದಾರ ಬಾಲಕ ಹಾಗೂ ಆತನ ಜೊತೆಯಲ್ಲಿದ್ದ ಇಬ್ಬರು ಸಹಪಾಠಿ ಬಾಲಕರ ಮೇಲೆ ಕೈಯಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ.

​ಘಟನೆಯಿಂದ ತೀವ್ರ ಭಯಭೀತರಾಗಿದ್ದ ಬಾಲಕರು ಪ್ರಾರಂಭದಲ್ಲಿ ವಿಷಯ ತಿಳಿಸಿರಲಿಲ್ಲ, ಆದರೆ ಆಗಸ್ಟ್ 11ರಂದು ನೀಡಿದ ದೂರಿನ ಆಧಾರದ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 97/2026, ಕಲಂ 189(2), 190, 351(3), 352, 115(2) BNS 2023, ಹಾಗೂ SC/ST (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ 2015 ರ ಕಲಂ 3(1)(r), 3(1)(s), 3(2)(va) ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

​ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

KADABA TIMES NEWS
KADABA TIMES NEWShttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಮಾಧ್ಯಮವಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ದ.ಕ ಜಿಲ್ಲೆಯ ಪ್ರಮುಖ ಸುದ್ದಿಗಳು, ರಾಜ್ಯ,ದೇಶದ ಮಹತ್ವದ ಘಟನಾವಳಿಗಳನ್ನು ಸ್ಥಳೀಯರಿಗೆ ತಲುಪಿಸುತ್ತದೆ. ನಮ್ಮನ್ನು ಬೆಂಬಲಿಸಿ ಮತ್ತು ಪ್ರೋತ್ಸಾಹಿಸಿ. ನಿಮ್ಮೂರಿನ ಸುದ್ದಿ ಮಾಹಿತಿಗಳನ್ನು +91 93804 74819 ಗೆ ವಾಟ್ಸಪ್ ಮಾಡಿ.

Related Articles

Latest Articles