ನೀರಿನ ಪೈಪ್ ಸರಿಪಡಿಸಲು ಹೋದ ವೇಳೆ ತಲೆಗೆ ಕಚ್ಚಿದ ಹಾವು

kadaba times

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ದೇರಾಜೆ ಗುಡ್ಲಾದಲ್ಲಿ ಮನೆಗೆ ಬರುವ ನೀರಿನ ಪೈಪ್ ಸರಿಪಡಿಸಲು ತೆರಳಿದ್ದ ಆಟೋ ಮೆಕ್ಯಾನಿಕ್ ಮನೋಹರ ಅವರಿಗೆ ಮರದಲ್ಲಿದ್ದ ಹಾವೊಂದು ತಲೆಯ ಭಾಗಕ್ಕೆ ಕಚ್ಚಿದೆ. ಕೂಡಲೇ ಸಮಯಪ್ರಜ್ಞೆ ಮೆರೆದು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಅವರಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದು, ಇದೀಗ ಅವರು ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಂಡಿದ್ದಾರೆ.ಸುಳ್ಯ: ಮನೆಗೆ ಬರುವ ನೀರಿನ ಪೈಪ್ ಬ್ಲಾಕ್ ಆಗಿದೆಯೆಂದು ಸರಿಪಡಿಸಲು ತೆರಳಿದ್ದ ವ್ಯಕ್ತಿಯೊಬ್ಬರ ತಲೆಯ ಭಾಗಕ್ಕೆ ಮರದಲ್ಲಿದ್ದ ಹಾವೊಂದು ಕಚ್ಚಿ ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ದೇರಾಜೆ ಗುಡ್ಲಾದಲ್ಲಿ ಆಗಸ್ಟ್ 10ರ ರಾತ್ರಿ ನಡೆದಿದೆ.

kadaba times
uniq

ದೇರಾಜೆ ಗುಡ್ಲಾ ನಿವಾಸಿ ಮನೋಹರ ಹಾವು ಕಡಿತಕ್ಕೊಳಗಾದ ದುರ್ದೈವಿಯಾಗಿದ್ದಾರೆ.

ಮರದಲ್ಲಿದ್ದ ಹಾವು ತಲೆಗೆ ಕಚ್ಚಿದ್ದು ಹೇಗೆ?

ಮನೋಹರ ಅವರ ಮನೆಗೆ ಗುಡ್ಡೆಯಿಂದ ಬರುತ್ತಿದ್ದ ನೀರಿನ ಪೈಪ್‌ನಲ್ಲಿ ನೀರು ಸರಿಯಾಗಿ ಪೂರೈಕೆಯಾಗುತ್ತಿರಲಿಲ್ಲ. ಪೈಪ್ ಬ್ಲಾಕ್ ಆಗಿರಬಹುದು ಎಂದು ಭಾವಿಸಿದ ಅವರು, ಅದನ್ನು ಸರಿಪಡಿಸಲು ಗುಡ್ಡೆಯ ಭಾಗಕ್ಕೆ ತೆರಳಿದ್ದಾರೆ. ಈ ವೇಳೆ ಅಲ್ಲೇ ಪಕ್ಕದಲ್ಲಿದ್ದ ಮರದಲ್ಲಿದ್ದ ಹಾವೊಂದು ಏಕಾಏಕಿ ಅವರ ತಲೆಯ ಭಾಗಕ್ಕೆ ಕಚ್ಚಿದೆ.

ತಮ್ಮ ತಲೆಗೆ ಹಾವು ಕಚ್ಚಿರುವುದನ್ನು ಖಚಿತಪಡಿಸಿಕೊಂಡ ಮನೋಹರ ಅವರು ಧೈರ್ಯಗೆಡದೆ ತಕ್ಷಣವೇ ಮನೆಗೆ ಹಿಂತಿರುಗಿದ್ದಾರೆ. ಬಳಿಕ ಸ್ಥಳೀಯರೊಬ್ಬರಿಗೆ ಕರೆ ಮಾಡಿ, ಅವರ ಜೀಪಿನಲ್ಲಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದಾರೆ.

kadaba times
kadaba times

ಕೂಡಲೇ ಸ್ಪಂದಿಸಿದ ಸುಳ್ಯ ಸರ್ಕಾರಿ ಆಸ್ಪತ್ರೆಯ ವೈದ್ಯರು ತುರ್ತು ಪರೀಕ್ಷೆ ನಡೆಸಿ ಅಗತ್ಯ ವಿಷನಿರೋಧಕ ಚಿಕಿತ್ಸೆ ನೀಡಿದ್ದಾರೆ. ವೈದ್ಯರ ತರಿತ ಹಾಗೂ ಸೂಕ್ತ ಚಿಕಿತ್ಸೆಯ ಪರಿಣಾಮವಾಗಿ ಮನೋಹರ ಅವರು ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಮನೋಹರ ಅವರು ಸುಳ್ಯದ ಜಟ್ಟಿಪಳ್ಳದಲ್ಲಿರುವ  ಆಟೋ ವರ್ಕ್ಸ್’ವೊಂದರಲ್ಲಿ   ಮೆಕ್ಯಾನಿಕ್ ಆಗಿ ವೃತ್ತಿ ಸೇವೆ ಸಲ್ಲಿಸುತ್ತಿದ್ದಾರೆ.

Related Articles

Latest Articles