ಸುಳ್ಯದಲ್ಲಿ ಪೊಲೀಸರನ್ನು ಕಂಡು ಕಾಡು ದಾರಿಯಲ್ಲಿ ಎಸ್ಕೇಪ್ :ಇಬ್ಬರನ್ನು ಪತ್ತೆ ಹಚ್ಚಿದ ಸ್ಥಳೀಯರು

kadaba times

ಸುಳ್ಯ:  ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಆರೋಪಿಗಳು ಸುಳ್ಯದ ಕಲ್ಲುಗುಂಡಿ ಸಮೀಪ ಪೊಲೀಸರನ್ನು ಕಂಡು ವಾಹನ ನಿಲ್ಲಿಸಿ ಕಾಡು ದಾರಿಯಲ್ಲಿ  ಪರಾರಿಯಾದ ಘಟನೆ ನಡೆದಿತ್ತು.

kadaba times
uniq

ಇದೀಗ ಆರೋಪಿಗಳು ದೇವರಕೊಲ್ಲಿ ಸಮೀಪ ರಬ್ಬರ್ ತೋಟದ ಮನೆಯೊಂದರಲ್ಲಿ ಸಿಕ್ಕಿ ಬಿದ್ದಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಓರ್ವ ಯುವಕ ಮತ್ತು ಯುವತಿ  ಸಿಕ್ಕಿ ಬಿದ್ದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪಾಲಕ್ಕಾಡ್ ಮೂಲದ ಕೊಲೆ ಆರೋಪಿ ಎನ್ನಲಾಗಿದ್ದು  ತಪ್ಪಿಸಿಕ್ಕೊಂಡು ರಾತ್ರಿ ವೇಳೆ ರಬ್ಬರ್ ತೋಟದ ಮನೆಯ ಬಳಿ ಬಂದು ಆಶ್ರಯ ಪಡೆದು ನಿಂತಿದ್ದರು.

kadaba times
kadaba times

ಮನೆಯವರಿಗೆ ಸಂಶಯ ಮೂಡಿ ಸ್ಥಳೀಯರಿಗೆ ತಿಳಿಸಿದ್ದಾರೆ ಎನ್ನ ಲಾಗಿದೆ. ಸ್ಥಳೀಯರು  ಅವರನ್ನು ಹಿಡಿದು ಮಡಿಕೇರಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ. ಈ ಮೂಲಕ  ಆತಂಕದಲ್ಲಿದ್ದ ಗ್ರಾಮದ ಜನರು ಈಗ ನಿರಾಳರಾಗಿದ್ದಾರೆ.

Related Articles

Latest Articles