
ಕುಕ್ಕೆ ಸುಬ್ರಹ್ಮಣ್ಯ: ಇಲ್ಲಿನ ಕೆ.ಎಸ್. ಎಸ್ ಕಾಲೇಜು ಸಾಂಸ್ಕೃತಿಕ ತಂಡವು ವಿಶ್ವ ಪ್ರಸಿದ್ಧ ಮೈಸೂರು ದಸರಾದ ಅಂಗವಾಗಿ ನಡೆಯುವ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಸೆ.14 ರಂದು ಸಾಂಸ್ಕೃತಿಕ ಪ್ರದರ್ಶನ ನೀಡಿದೆ.


ಪ್ರಾಂಶುಪಾಲರಾದ ಡಾ. ದಿನೇಶ ಪಿ ಟಿ ಇವರ ಮಾರ್ಗದರ್ಶನದಲ್ಲಿ ಸುಮಾರು 34 ವಿದ್ಯಾರ್ಥಿಗಳು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಸಾಂಸ್ಕೃತಿಕ ತಂಡದ ಸಂಯೋಜಕರಾದ ಡಾ. ವಿನ್ಯಾಸ್ ಹೊಸೊಳಿಕೆ, ಮತ್ತು ಸದಸ್ಯರಾದ ನಮಿತಾ ಮೆಲ್ನಾಡ್ ಮತ್ತು ಭರತ್ ಎಂ ಎಲ್ ಇವರ ನೇತೃತ್ವದಲ್ಲಿ, ತಂಡ ಪ್ರದರ್ಶನ ನೀಡಿದ್ತ್ತೆ.


ನೃತ್ಯ ಸಂಯೋಜನೆಯನ್ನು ಪ್ರಮೋದ್ ರೈ ಬೆಳ್ಳಾರೆ ಮತ್ತು ಅಶೋಕ್ ಬೆಳ್ಳಾರೆ ಇವರು ಮಾಡಿದ್ದರು. ಚಿತ್ರ ಕಲಾವಿದ ಸತೀಶ್ ಪಂಜ ಇವರು ಮುಖವರ್ಣಿಕೆಯಲ್ಲಿ ಸಹಕರಿಸಿದ್ದರು. ತಂಡದ ಪ್ರದರ್ಶನ ವೀಕ್ಷಕರ ಮೆಚ್ಚುಗೆ ಗಳಿಸಿದೆ.
