ಕಡಬ ಪ.ಪಂ ಟೆಂಡರ್ ಪ್ರಕಟಣೆ ಬೆನ್ನಲ್ಲೇ ಹಸಿ ಮೀನು ಮಾರುಕಟ್ಟೆ ಅವ್ಯವಸ್ಥೆ ಬಗ್ಗೆ ಚರ್ಚೆ

kadaba times

ಕಡಬ: ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 2026-27ನೇ ಸಾಲಿನ ಹಸಿಮೀನು ಮಾರಾಟದ ಹಕ್ಕು ಹಾಗೂ ಸಂತೆ ವರಮಾನ ಮತ್ತು ಬೀದಿ ಬದಿ ವ್ಯಾಪಾರಿಗಳ ತೆರಿಗೆ ವಸೂಲಿಗಾಗಿ ಟೆಂಡರ್ ಮತ್ತು ಬಹಿರಂಗ ಹರಾಜು ಪ್ರಕ್ರಿಯೆಗೆ ಪ್ರಕಟಣೆ ಹೊರಡಿಸಲಾಗಿದೆ. ಆದರೆ, ಈ ಪ್ರಕಟಣೆ ಹೊರಬಿದ್ದ ಬೆನ್ನಲ್ಲೇ ಮೀನು ಮಾರುಕಟ್ಟೆಯಲ್ಲಿ   ಅವ್ಯವಸ್ಥೆ ಹಾಗೂ ನೈರ್ಮಲ್ಯದ ಅಭಾವದ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ.

kadaba times
uniq
ಸಾಂಕ್ರಾಮಿಕ ರೋಗದ ಭೀತಿ; ಶುಚಿತ್ವವೇ ಇಲ್ಲದ ಪರಿಸರ

ಕಡಬದ ಹಸಿಮೀನು ಮಾರುಕಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಮಳೆ ನೀರು ಹಾಗೂ ಮೀನು ತೊಳೆಯುವ ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ನೀರು ಒಂದೆಡೆ ನಿಲ್ಲುತ್ತಿದೆ. ಅಸಮರ್ಪಕ ಚರಂಡಿ ವ್ಯವಸ್ಥೆ, ಸುತ್ತಲೂ ಬೆಳೆದಿರುವ ಗಿಡಗಂಟಿಗಳಿಂದಾಗಿ ದುರ್ನಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಸ್ವಚ್ಛತಾ ಜಾಥಾ ಮಾಡಿದ ಪಟ್ಟಣ ಪಂಚಾಯತ್‌ಗೆ ಹತ್ತಿರದ ದುರವಸ್ಥೆ ಕಾಣಲ್ವೇ?

ಇತ್ತೀಚೆಗಷ್ಟೇ ಕಡಬ ಪಟ್ಟಣ ಪಂಚಾಯತ್ ವತಿಯಿಂದ ಮುಖ್ಯ ರಸ್ತೆಯಲ್ಲಿ ವಿಜೃಂಭಣೆಯಿಂದ ಸ್ವಚ್ಛತಾ ಜಾಥಾ ನಡೆಸಲಾಗಿತ್ತು. ಆದರೆ, ನಿತ್ಯ ನೂರಾರು ಜನ ಬಂದು ಹೋಗುವ ಮೀನು ಮಾರುಕಟ್ಟೆಯ ದುರವಸ್ಥೆಯತ್ತ ಪಟ್ಟಣ ಪಂಚಾಯತ್ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

kadaba times
kadaba times
ಬಿಡ್ಡುದಾರರು ಲಕ್ಷಾಂತರ ರೂ. ಬಿಡ್ ಹಾಕುತ್ತಾರೆಯೇ?

ಕಳೆದ ಬಾರಿ ಅವ್ಯವಸ್ಥೆಯಿಂದ ಕೂಡಿದ್ದ ವಾರದ ಸಂತೆಯ ಬಿಡ್‌ಗೆ ಸಾರ್ವಜನಿಕರು ಹಾಗೂ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆಯೇ ನಡದಿರಲಿಲ್ಲ.ಆದರೆ ಮೀನು ಮಾರುಕಟ್ಟೆ ಏಲಂ ಮಾತ್ರ ನಡೆದಿತ್ತು.

ಇದೀಗ ಮತ್ತೆ ಹಸಿಮೀನು ಮಾರುಕಟ್ಟೆ ಹಾಗೂ ಸಂತೆ ತೆರಿಗೆ ವಸೂಲಿಗೆ ಲಕ್ಷಾಂತರ ರೂಪಾಯಿಗಳ ಬಿಡ್ ಆಹ್ವಾನಿಸಲಾಗಿದೆ. ಮೂಲಸೌಕರ್ಯ ಹಾಗೂ ಕನಿಷ್ಠ ನೈರ್ಮಲ್ಯವೂ ಇಲ್ಲದ ಈ ವಾತಾವರಣದಲ್ಲಿ ಬಿಡ್ಡುದಾರರು ಅಧಿಕ ಲಾಭದ ಆಸೆಗೆ ಬಿದ್ದು ಬಿಡ್ ಸಲ್ಲಿಸುತ್ತಾರಾ? ಅಥವಾ ಈ ಹಿಂದಿನಂತೆ ಅವ್ಯವಸ್ಥೆಯನ್ನು ವಿರೋಧಿಸಿ ಹಿಂಜರಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Related Articles

Latest Articles