ಕಡಬ ಕಾಲೇಜು ರಸ್ತೆಯಲ್ಲಿ ಮಿಡ್ ನೈಟ್ ಗಲಾಟೆ:ಹಲವರ ವಿರುದ್ದ ಕೇಸ್

kadaba times

ಕಡಬ: ಕಡಬ ಗ್ರಾಮದ ಕಾಲೇಜು ರಸ್ತೆಯ ಜಂಕ್ಷನ್ ಬಳಿ ಹುಡುಗಿಯೊಬ್ಬಳ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದ ನಡೆದು, ಪರಸ್ಪರ ಹಲ್ಲೆ ಹಾಗೂ ಜೀವಬೆದರಿಕೆ ಹಾಕಿರುವ ಘಟನೆ ಜುಲೈ 10ರ ಶುಕ್ರವಾರ ರಾತ್ರಿ ಸಂಭವಿಸಿದೆ.

kadaba times
uniq

ಈ ಗಲಾಟೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಇರಡೂ ಕಡೆಯವರಿಂದ ದೂರು ಹಾಗೂ ಪ್ರತಿದೂರು (Case and Counter Case) ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

​ಮೊದಲ ದೂರು: ಮೋನಿಷ್ ಮೇಲಿನ ಹಲ್ಲೆ
​ಘಟನೆಗೆ ಸಂಬಂಧಿಸಿ ಕಡಬ ನಿವಾಸಿ ಮೋನಿಷ್‌ (21 ವರ್ಷ) ಎಂಬವರು ಕಡಬ ಪೊಲೀಸ್ ಠಾಣೆಗೆ ಮೊದಲ ದೂರು ನೀಡಿದ್ದಾರೆ. ಜುಲೈ 10ರಂದು ರಾತ್ರಿ ಮೋನಿಷ್ ಅವರು ತಮ್ಮ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ, ಕಡಬ ಗ್ರಾಮದ ಕಾಲೇಜು ರಸ್ತೆಯ ಜಂಕ್ಷನ್‌ ಬಳಿಯಲ್ಲಿ ಶರತ್‌, ದೀಪಕ್‌ ಮತ್ತು ವಿಶ್ವನಾಥ ಎಂಬವರುಗಳು ಅಡ್ಡಗಟ್ಟಿದ್ದಾರೆ. ಹುಡುಗಿಯೊಬ್ಬಳ ಮದುವೆ ವಿಚಾರವನ್ನು ಮುಂದಿಟ್ಟುಕೊಂಡು ಮೋನಿಷ್ ಅವರನ್ನು ತಡೆದು ನಿಲ್ಲಿಸಿದ ಈ ಮೂವರು, ಅವಾಚ್ಯ ಶಬ್ದಗಳಿಂದ ಬೈದು, ದೈಹಿಕವಾಗಿ ಹಲ್ಲೆ ನಡೆಸಿದ್ದಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

​ಮೋನಿಷ್ ನೀಡಿದ ಈ ದೂರಿನ ಅನ್ವಯ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 84/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಯ ಕಲಂ: 126(2), 118(1), 115(2), 352, 351(2) ಜೊತೆಗೆ 3(5) BNS ಅಡಿಯಲ್ಲಿ ಶರತ್, ದೀಪಕ್ ಹಾಗೂ ವಿಶ್ವನಾಥ ವಿರುದ್ಧ ಪ್ರಕರಣ ದಾಖಲಾಗಿದೆ.

kadaba times
kadaba times

​ಪ್ರತಿದೂರು: ದೀಪಕ್‌ನಿಂದ ಕೌಂಟರ್ ಕೇಸ್
​ಈ ಪ್ರಕರಣ ಮುಂದುವರಿದ ಭಾಗವಾಗಿ, ಹಲ್ಲೆಯ ಆರೋಪ ಎದುರಿಸುತ್ತಿರುವ ಕುಟ್ರುಪ್ಪಾಡಿ ನಿವಾಸಿ ದೀಪಕ್ (33 ವರ್ಷ) ಎಂಬವರು ಮೋನಿಷ್ ವಿರುದ್ಧ ಪ್ರತಿದೂರೊಂದನ್ನು ದಾಖಲಿಸಿದ್ದಾರೆ. ಮೋನಿಷ್ ಅವರು ತಮ್ಮನ್ನು ತಡೆದು ನಿಲ್ಲಿಸಿ, ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುತ್ತಾರೆ ಎಂದು ದೀಪಕ್ ತಮ್ಮ ಪ್ರತಿದೂರಿನಲ್ಲಿ ಆರೋಪಿಸಿದ್ದಾರೆ.
​ದೀಪಕ್ ನೀಡಿದ ಈ ಕೌಂಟರ್ ದೂರಿನ ಮೇರೆಗೂ ಸಹ ಕಡಬ ಪೊಲೀಸರು ಅಪರಾಧ ಕ್ರಮಾಂಕ: 85/2026 ರಂತೆ ಬಿಎನ್‌ಎಸ್ ಕಾಯ್ದೆಯ ಕಲಂ: 126(2), 118(1), 115(2), 352, 351(2) BNS ಅಡಿಯಲ್ಲಿ ಮೋನಿಷ್ ವಿರುದ್ಧ ಮತ್ತೊಂದು ಪ್ರತ್ಯೇಕ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

​ ಒಂದೇ ಘಟನೆಗೆ ಸಂಬಂಧಿಸಿದಂತೆ ಸದ್ಯ ಕಡಬ ಠಾಣೆಯಲ್ಲಿ ಎರಡು ಎಫ್‌ಐಆರ್ (FIR) ದಾಖಲಾಗಿದ್ದು, ಕಡಬ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ಎರಡೂ ಪ್ರಕರಣಗಳ ಕುರಿತು ಕೂಲಂಕುಶ ತನಿಖೆ ಕೈಗೊಂಡಿದ್ದಾರೆ. ಗಲಾಟೆಗೆ ನಿಖರ ಕಾರಣವೇನು ಮತ್ತು ಮೊದಲು ಗಲಾಟೆ ಆರಂಭಿಸಿದ್ದು ಯಾರು ಎಂಬ ಬಗ್ಗೆ ಸಾಕ್ಷ್ಯಧಾರಗಳನ್ನು ಕಲೆಹಾಕಲಾಗುತ್ತಿದ್ದು, ತನಿಖೆಯ ನಿಜಾಂಶ ತಿಳಿದು ಬರಲಿದೆ.

Related Articles

Latest Articles