
ಸ್ಥಳೀಯ ಗ್ರಾಮೀಣ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ವಿನೂತನ ಅಧ್ಯಾಯವೊಂದು ಸೃಷ್ಟಿಯಾಗಲು ವೇದಿಕೆ ಸಿದ್ಧಗೊಂಡಿದೆ. ‘Everest Legend League – Kollamogaru 2026’ ಅಡಿಯಲ್ಲಿ, ಕ್ರಿಕೆಟ್ ಜಗತ್ತಿನಲ್ಲೇ ಪ್ರಪ್ರಥಮ ಬಾರಿಗೆ LPF (Level Play Format) ಮಾದರಿಯ ಕ್ರಿಕೆಟ್ ಪಂದ್ಯಾಟವು ಇದೇ ಜೂನ್ 7 ಭಾನುವಾರದಂದು ಬೆಟ್ಟುಮಕ್ಕಿ–ಬಾಳುಗೋಡು ಮೈದಾನದಲ್ಲಿ ಜರುಗಲಿದೆ.


ಸಾಮಾನ್ಯವಾಗಿ ಯಾವುದೇ ಕ್ರಿಕೆಟ್ ಪಂದ್ಯಾವಳಿಗಳನ್ನು ಗಮನಿಸಿದರೆ ಅಲ್ಲಿ ಕೆಲವೇ ಕೆಲವು ಪ್ರತಿಭಾವಂತ ಅಥವಾ ಸ್ಟಾರ್ ಆಟಗಾರರಿಗೆ ಮಾತ್ರ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಇದರಿಂದಾಗಿ ತಂಡದಲ್ಲಿರುವ ಇತರೆ ಆಟಗಾರರು ಕೇವಲ ಫೀಲ್ಡಿಂಗ್ಗಷ್ಟೇ ಸೀಮಿತವಾಗಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಮಾನ ಅವಕಾಶ ಸಿಗದೆ ವಂಚಿತರಾಗುತ್ತಾರೆ. ಈ ಸಾರ್ವತ್ರಿಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹುಟ್ಟಿಕೊಂಡಿದ್ದೇ ಈ ‘LPF’ ತಂತ್ರಜ್ಞಾನ ಆಧಾರಿತ ಹೊಸ ಪರಿಕಲ್ಪನೆ.
ಏನಿದು LPF (Level Play Format) ಮಾದರಿ?: ಈ ವಿನೂತನ ಮಾದರಿಯಲ್ಲಿ ಪಂದ್ಯಾಟದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಟಗಾರನಿಗೂ ಕಡ್ಡಾಯವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಅವಕಾಶ ಸಿಗುವಂತೆ ವಿಶೇಷ ನಿಯಮಾವಳಿಗಳನ್ನು ರೂಪಿಸಲಾಗಿದೆ.
-
ಆಟಗಾರರ ವರ್ಗೀಕರಣ: ತಂಡದಲ್ಲಿರುವ ಆಟಗಾರರನ್ನು ಅವರ ಕೌಶಲ್ಯದ ಆಧಾರದ ಮೇಲೆ ‘A Level’ ಮತ್ತು ‘B Level’ ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ.


-
ಸಮಾನ ಅವಕಾಶ: ನಾಲ್ಕು ಲೀಗ್ ಪಂದ್ಯಗಳಲ್ಲಿ ಎರಡೂ ವಿಭಾಗದ ಆಟಗಾರರಿಗೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಅವಕಾಶಗಳು ಸಮನಾಗಿ ಹಂಚಿಕೆಯಾಗುವಂತೆ ಕಟ್ಟುನಿಟ್ಟಿನ ನಿಯಮ ರೂಪಿಸಲಾಗಿದೆ.
-
LPF ಮ್ಯಾನಿಟರಿಂಗ್ ಸಿಸ್ಟಮ್: ಈ ನಿಯಮಗಳು ಪಂದ್ಯದ ವೇಳೆ ಸರಿಯಾಗಿ ಅನುಷ್ಠಾನಗೊಳ್ಳುತ್ತಿವೆಯೇ ಮತ್ತು ಯಾವುದೇ ಆಟಗಾರನಿಗೆ ಅನ್ಯಾಯವಾಗುತ್ತಿಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರತ್ಯೇಕವಾಗಿ ಡಿಜಿಟಲ್ ನಿಗಾ ವ್ಯವಸ್ಥೆಯನ್ನು (Monitoring System) ಅಳವಡಿಸಲಾಗಿದೆ.
“Every Player Gets A Chance”
ಈ ಕ್ರಾಂತಿಕಾರಿ ಪರಿಕಲ್ಪನೆಯ ಹಿಂದೆ ಇರುವ ಮಾಸ್ಟರ್ ಮೈಂಡ್ ಸ್ಥಳೀಯರಾದ ಲೋಕೇಶ್ ಪೀರನಮನೆ. ಅವರ ಕನಸಿನ ಕೂಸಾದ “Every Player Gets A Chance” (ಪ್ರತಿಯೊಬ್ಬ ಆಟಗಾರನಿಗೂ ಸಿಗಲಿ ಅವಕಾಶ) ಎಂಬ ಆಶಯವೇ ಈ ಇಡೀ LPF ಮಾದರಿಯ ಮೂಲ ತತ್ವ ಮತ್ತು ಧ್ಯೇಯವಾಕ್ಯವಾಗಿದೆ. ಗ್ರಾಮೀಣ ಭಾಗದ ಮೂಲೆ ಮೂಲೆಯಲ್ಲಿರುವ ಅಪ್ರತಿಮ ಪ್ರತಿಭೆಗಳನ್ನು ಗುರುತಿಸಿ, ಅವರಿಗೊಂದು ಸೂಕ್ತ ವೇದಿಕೆ ಕಲ್ಪಿಸಿಕೊಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಗ್ರಾಮೀಣ ಕ್ರಿಕೆಟ್ಗೆ ಹೊಸ ದಿಕ್ಸೂಚಿ: “ಈ ಎಲ್ಪಿಎಫ್ ಮಾದರಿಯು ಕೇವಲ ಒಂದು ಪಂದ್ಯಾವಳಿಗೆ ಸೀಮಿತವಾಗದೆ, ಮುಂಬರುವ ದಿನಗಳಲ್ಲಿ ಇಡೀ ದೇಶದ ಗ್ರಾಮೀಣ ಕ್ರಿಕೆಟ್ಗೆ ಹೊಸ ದಿಕ್ಸೂಚಿಯಾಗಲಿದೆ. ಇತರೆ ಪ್ರಮುಖ ಟೂರ್ನಿಗಳಿಗೂ ಇದು ಮಾದರಿಯಾಗಲಿದೆ” ಎಂದು Everest Legend League ಆಯೋಜಕರು ಅತ್ಯಂತ ವಿಶ್ವಾಸದಿಂದ ವ್ಯಕ್ತಪಡಿಸಿದ್ದಾರೆ.
