ಸುಳ್ಯದ ದೇವರಕೊಳ್ಳಿ ಬಳಿ ವಾಹನ ನಿಲ್ಲಿಸಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಕೊಲೆ ಆರೋಪಿಗಳು

ಸುಳ್ಯದ ಸಂಪಾಜೆ ಬಳಿ ನಡೆದ ಸಿನಿಮೀಯ ಮಾದರಿಯ ಘಟನೆ

kadaba times

ಕಡಬ ಟೈಮ್ಸ್, ಸುಳ್ಯ: ಕೇರಳ ಪಾಲಕ್ಕಾಡ್ ನಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾದ  ಆರೋಪಿಗಳು ಸುಳ್ಯದ ಸಂಪಾಜೆ ಬಳಿ ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ ಸಿನಿಮೀಯ ಮಾದರಿಯಲ್ಲಿ ತಪ್ಪಿಸಿಕೊಂಡು ಪರಾರಿಯಾದ ಘಟನೆ  ಕಲ್ಲುಗುಂಡಿಯಿಂದ ಸೆ.17 ರ  ಸಂಜೆ ನಡೆದಿರುವುದಾಗಿ ವರದಿಯಾಗಿದೆ.

kadaba times
uniq

ಆರೋಪಿಗಳು ತಮ್ಮ ವಾಹನದ ಮೂಲಕ ಮಡಿಕೇರಿ ಕಡೆಯಿಂದ ಸುಳ್ಯಕಡೆಗೆ ಪ್ರಯಾಣಿಸುವ ಮಾಹಿತಿ ತಿಳಿದ ಕೇರಳ ಪೊಲೀಸರು ಅವರನ್ನು ಹಿಡಿಯುವುದಕ್ಕಾಗಿ ಕಲ್ಲುಗುಂಡಿ ಹೊರ ಠಾಣಾ ಬಳಿ ಕಾದು ಕುಳಿತಿದ್ದರು.

ಪೊಲೀಸರು ಇರುವ ವಿಷಯ ತಿಳಿದ ಆರೋಪಿ ಗಳು ಕಲ್ಲುಗುಂಡಿ ಪೆಟ್ರೋಲ್ ಪಂಪ್ ಬಳಿಯಿಂದ ಸಿನಿಮೀಯ ಮಾದರಿಯಲ್ಲಿ ತಪ್ಪಿಸಿಕೊಂಡು ಮಡಿಕೇರಿ ಕಡೆಗೆ ವೇಗವಾಗಿ ಹೋಗಿದ್ದು ಈ ವಿವರ ತಿಳಿದ ಸಾರ್ವಜನಿಕರು ದೇವರಕೊಲ್ಲಿ ಬಳಿ ಸೇತುವೆ ಯಲ್ಲಿ ಸೇರಿದ್ದರು.

kadaba times
kadaba times

ಇದನ್ನು ಕೂಡ ಅರಿತ ಆರೋಪಿಗಳು ದೇವರ ಕೊಲ್ಲಿ ಬಳಿ ಥಾರ್ ವಾಹನವನ್ನು ಬಿಟ್ಟು ಕಾಡಿನ ರಸ್ತೆಯಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related Articles

Latest Articles