ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಗಲಾಟೆ, ವ್ಯಕ್ತಿಯ ಮೇಲೆ ಹಲ್ಲೆ: ಇಬ್ಬರ ವಿರುದ್ಧ ಕಡಬ ಠಾಣೆಯಲ್ಲಿ FIR ದಾಖಲು

kadaba times

ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಉಳಿಪಿನಲ್ಲಿ ಮನೆ ಹೆಂಚು ತೆಗೆಯುವ ದ್ವೇಷದ ಹಿನ್ನೆಲೆಯಲ್ಲಿ ಜಗಳ ನಡೆದಿದ್ದು, ಶೇಖರ ಗೌಡ ಎಂಬವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಇಬ್ಬರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಕಡಬ: ಮನೆ ಹೆಂಚು ತೆಗೆಯುವ ವಿಚಾರ ಹಾಗೂ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಉಳಿಪು ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟ್ರುಪ್ಪಾಡಿ ಗ್ರಾಮದ ಉಳಿಪು ನಿವಾಸಿ, ವೃತ್ತಿಯಲ್ಲಿ ಕೃಷಿಕರಾಗಿರುವ ಶೇಖರ ಗೌಡ (45) ಎಂಬವರೇ ಹಲ್ಲೆಗೊಳಗಾದವರು. ಘಟನೆಯಲ್ಲಿ ಗಾಯಗೊಂಡಿರುವ ಅವರು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿಪು ನಿವಾಸಿಗಳಾದ ಸುನೀಲ್ (A1) ಮತ್ತು ಬೇಬಿ (A2) ಎಂಬವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಪೊಲೀಸ್ ದೂರಿನ ಪ್ರಕಾರ, ಮೇ 14ರಂದು ಶೇಖರ ಗೌಡ ಅವರ ಮನೆಯಲ್ಲಿ ಬೆಳಿಗ್ಗೆ ಗಣಹೋಮ ಕಾರ್ಯಕ್ರಮ ಇತ್ತು. ಪೂಜೆ ಮುಗಿದ ಬಳಿಕ ಅವರ ಪತ್ನಿ ಮತ್ತು ಮಗಳು ಮದುವೆ ಕಾರ್ಯಕ್ರಮ ನಿಮಿತ್ತ ಧರ್ಮಸ್ಥಳಕ್ಕೆ ತೆರಳಿದ್ದರು. ಮಧ್ಯಾಹ್ನ  ಶೇಖರ ಗೌಡ ಅವರು ಮನೆಯಲ್ಲಿದ್ದಾಗ, ಅವರ ಮತ್ತೊಬ್ಬ ಮಗಳು ಓಡಿ ಬಂದು, “ಮನೆಯ ಹಿಂಭಾಗದ ಹೆಂಚುಗಳನ್ನು ಬೇಬಿ ಮತ್ತು ಸುನೀಲ್ ಸೇರಿ ತೆಗೆಯುತ್ತಿದ್ದಾರೆ” ಎಂದು ತಿಳಿಸಿದ್ದಾಳೆ.

kadaba times
kadaba times

ಇದನ್ನು ಕೇಳಿ ಶೇಖರ ಗೌಡ ಅವರು ತಕ್ಷಣ ಮನೆಯ ಹಿಂಭಾಗಕ್ಕೆ ಹೋದಾಗ, ಆರೋಪಿ ಸುನೀಲ್ ಅವರನ್ನು ತಡೆದು ನಿಲ್ಲಿಸಿ, “ಇದು ನನ್ನ ಮನೆ, ಇಲ್ಲಿಂದ ನೀನು ಹೋಗಬೇಕು” ಎಂದು ಗದರಿಸಿದ್ದಾನೆ. ಈ ವೇಳೆ ಇವರ ನಡುವೆ ಉರುಡಾಟ (ಜಗಳ) ನಡೆದಿದ್ದು, ಶೇಖರ ಗೌಡ ಅವರು ಕೆಳಗೆ ಬಿದ್ದಿದ್ದಾರೆ. ಅಲ್ಲದೆ ಶೇಖರ ಗೌಡರ ಕೆಳತುಟಿಯ ಒಳಭಾಗಕ್ಕೆ ಹಾಗೂ ಬೆನ್ನಿನ ಭಾಗಕ್ಕೆ ಗುದ್ದಿದ ರೀತಿಯ ಗಾಯಗಳಾಗಿವೆ. ಇದೇ ವೇಳೆ ಆರೋಪಿಗಳು ಶೇಖರ ಗೌಡ ಅವರಿಗೆ ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ ಎನ್ನಲಾಗಿದೆ.

ಹಳೇ ದ್ವೇಷವೇ ಕಾರಣ!

ಶೇಖರ ಗೌಡರು ವಾಸವಿರುವ ಮನೆ ತಮಗೆ ಸೇರಿದ್ದೆಂದು ಆರೋಪಿ ಸುನೀಲ್ ಈ ಹಿಂದೆ ತಕರಾರು ಮಾಡುತ್ತಿದ್ದ ಎನ್ನಲಾಗಿದೆ. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ (U/s-126(2), 352, 351(3), 115(2), r/w 3(5)) ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ

Related Articles

Latest Articles