ಸಾಲದ ಬಾಧೆಗೆ ಮನನೊಂದು ಶಿರಾಡಿಯ ಅಟೋ ರಿಕ್ಷಾ ಚಾಲಕ ಆತ್ಮಹತ್ಯೆ

kadaba times

ಶಿರಾಡಿ ಗ್ರಾಮದ ಅಟೋ ರಿಕ್ಷಾ ಚಾಲಕ ಹರಿದಾಸನ್ (63) ಸಾಲ ತೀರಿಸಲಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

kadaba times
uniq

ಕಡಬ: ಆರ್ಥಿಕ ಸಂಕಷ್ಟ ಹಾಗೂ ಸಾಲದ ಹೊರೆ ತಾಳಲಾರದೆ ಅಟೋ ರಿಕ್ಷಾ ಚಾಲಕರೊಬ್ಬರು ತಮ್ಮ ಮನೆಯ ಸಮೀಪವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ನಡೆದಿದೆ.

ಶಿರಾಡಿ ಗ್ರಾಮದ ನಿವಾಸಿ ಹರಿದಾಸನ್ (63) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ವೃತ್ತಿಯಲ್ಲಿ ಅಟೋ ರಿಕ್ಷಾ ಚಾಲಕರಾಗಿದ್ದರು. ಕಳೆದ ಕೆಲವು ಸಮಯದಿಂದ ಇವರು ಪಡೆದಿದ್ದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ತೀವ್ರ ಮಾನಸಿಕ ಚಿಂತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.

kadaba times
kadaba times

ಭಾನುವಾರ ರಾತ್ರಿ ಎಂದಿನಂತೆ ಊಟ ಮುಗಿಸಿ 10 ಗಂಟೆಗೆ ಮಲಗಿದ್ದ ಹರಿದಾಸನ್ ಅವರು, ಮರುದಿನ ಸೋಮವಾರ (ಮೇ 4) ಮುಂಜಾನೆ ಮನೆಯಲ್ಲಿ ಇರಲಿಲ್ಲ. ಪತ್ನಿ ಬೆಳಿಗ್ಗೆ 6:30ಕ್ಕೆ ಎದ್ದು ನೋಡಿದಾಗ ರಿಕ್ಷಾ ಮನೆಯ ಅಂಗಳದಲ್ಲೇ ಇತ್ತು, ಆದರೆ ಪತಿ ನಾಪತ್ತೆಯಾಗಿದ್ದರು. ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತ ಹುಡುಕಾಡಿದಾಗ, ಮನೆಯ ಸಮೀಪದ ತಗ್ಗು ಪ್ರದೇಶದಲ್ಲಿದ್ದ ಮರವೊಂದಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಹರಿದಾಸನ್ ಅವರ ಶವ ಪತ್ತೆಯಾಗಿದೆ.

ಮೃತರ ಪತ್ನಿ ಸಿಂಧೂ (55) ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬ್ರ: 15/2026, ಕಲಂ: 194 BNSS 2023 ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Latest Articles