ಮಾನವೀಯತೆ ಮೆರೆದ ಸುಳ್ಯ ತಹಶೀಲ್ದಾರ್: ಅಪಘಾತಕ್ಕೀಡಾದ ಕುಟುಂಬವನ್ನು ಸ್ವತಃ ಆಸ್ಪತ್ರೆಗೆ ದಾಖಲಿಸಿದ್ರು

kadaba times

ಸುಳ್ಯದ ಅಡ್ಕಾರು ಬಳಿ ಸ್ಕೂಟಿ ಸ್ಕಿಡ್ ಆಗಿ ಬಿದ್ದ ದಂಪತಿ ಹಾಗೂ ಮಕ್ಕಳಿಗೆ ತಹಶೀಲ್ದಾರ್ ಮಂಜುಳಾ ರಕ್ಷಕರಾದರು. ಸ್ವತಃ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಸಂಪೂರ್ಣ ವರದಿ ಇಲ್ಲಿದೆ

kadaba times
uniq

ಸುಳ್ಯ: ಕರ್ತವ್ಯದ ಜೊತೆಗೆ ಮಾನವೀಯತೆಯೂ ಮುಖ್ಯ ಎಂಬುದನ್ನು ಸುಳ್ಯ ತಹಶೀಲ್ದಾರ್ ಮಂಜುಳಾ ಅವರು ಸಾಬೀತುಪಡಿಸಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಕುಟುಂಬವೊಂದನ್ನು ತಮ್ಮದೇ ಇಲಾಖಾ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಏಪ್ರಿಲ್ 13ರ ಸಂಜೆ ಸುಳ್ಯದ ಅಡ್ಕಾರು ದ್ವಾರದ ಬಳಿ ಈ ಘಟನೆ ನಡೆದಿದೆ. ಸುಳ್ಯದ ಜಯನಗರ ನಿವಾಸಿ ಯತೀಶ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸ್ಕೂಟಿಯಲ್ಲಿ ಪುತ್ತೂರಿಗೆ ಹೋಗಿ ಮರಳಿ ಬರುತ್ತಿದ್ದರು. ಮಗಳನ್ನು ನವೋದಯ ಶಾಲೆಗೆ ಸೇರಿಸುವ ಪ್ರಕ್ರಿಯೆ ಮುಗಿಸಿ ಹಿಂತಿರುಗುತ್ತಿದ್ದಾಗ, ಅಡ್ಕಾರು ಬಳಿ ಸ್ಕೂಟಿ ನಿಯಂತ್ರಣ ತಪ್ಪಿ ಸ್ಕಿಡ್ ಆಗಿದೆ. ಪರಿಣಾಮ ಸ್ಕೂಟಿಯಲ್ಲಿದ್ದ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ರಸ್ತೆಗೆ ಬಿದ್ದು ಗಾಯಗೊಂಡಿದ್ದರು.

ತಕ್ಷಣ ಸ್ಪಂದಿಸಿದ ತಹಶೀಲ್ದಾರ್:

ಅದೇ ಸಮಯದಲ್ಲಿ ತಮ್ಮ ಇಲಾಖಾ ವಾಹನದಲ್ಲಿ ಈ ಮಾರ್ಗವಾಗಿ ಬರುತ್ತಿದ್ದ ಸುಳ್ಯ ತಹಶೀಲ್ದಾರ್ ಮಂಜುಳಾ ಅವರು, ಅಪಘಾತಕ್ಕೀಡಾದವರನ್ನು ಕಂಡು ಕೂಡಲೇ ವಾಹನ ನಿಲ್ಲಿಸಿದ್ದಾರೆ. ಸಮಯ ಪ್ರಜ್ಞೆ ಮೆರೆದ ಅವರು, ಗಾಯಾಳುಗಳನ್ನು ರಸ್ತೆಯಲ್ಲೇ ಬಿಡದೆ ತಮ್ಮ ಇಲಾಖಾ ವಾಹನಕ್ಕೆ ಏರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸ್ವತಃ ಮಗುವನ್ನು ಎತ್ತಿಕೊಂಡು ಸಾಂತ್ವನ ಹೇಳುತ್ತಾ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

kadaba times
kadaba times

ಈ ಸಂದರ್ಭದಲ್ಲಿ ಅವರ ಜೊತೆಗಿದ್ದ ಕಂದಾಯ ನಿರೀಕ್ಷಕ ಅವಿನ್ ರಂಗತಮಲೆ ಹಾಗೂ ಜಾಲ್ಸೂರು ಗ್ರಾಮ ಸಹಾಯಕ ಶಾಹಿನ ಅವರು ಕೂಡ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಶ್ರಮಿಸಿ ಮಾನವೀಯತೆ ಮೆರೆದಿದ್ದಾರೆ.ಅದೃಷ್ಟವಶಾತ್ ಕುಟುಂಬದ ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮನೆಗೆ ಮರಳಿದ್ದಾರೆ. ತಹಶೀಲ್ದಾರ್ ಅವರ ಈ ತುರ್ತು ಸ್ಪಂದನೆಯಿಂದಾಗಿ ಗಾಯಾಳುಗಳಿಗೆ ಸಕಾಲದಲ್ಲಿ ವೈದ್ಯಕೀಯ ನೆರವು ದೊರೆತಂತಾಗಿದೆ.

[redirect url=’https://today.kadabatimes.in/news/maanviiyte-mered-sully-thshiildaar-apghaatkkiiddaad-kuttunbvnnu-svth-aasptrege-daakhlisidru’ sec=’5′]

Related Articles

Latest Articles