ಗಾರೆ ಕೆಲಸಕ್ಕೆ ತೆರಳಿದ್ದ ಶಿರಾಡಿ ನಿವಾಸಿ ನಾಪತ್ತೆ

kadaba times

ಶಿರಾಡಿ ಗ್ರಾಮದ ಸೋಣಂದೂರು ನಿವಾಸಿ ಜಗದೀಶ ಎಸ್.ಎಸ್ (44) ಎಂಬವರು ನಾಪತ್ತೆಯಾಗಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಮತ್ತು ಮೊಬೈಲ್ ಮನೆಯಲ್ಲೇ ಬಿಟ್ಟು ಜಗದೀಶ ನಾಪತ್ತೆಯಾಗಿದ್ದಾರೆ

kadaba times
uniq

ಗಾರೆ ಕೆಲಸಕ್ಕೆ ತೆರಳಿದ್ದ ಶಿರಾಡಿ ಗ್ರಾಮದ ನಿವಾಸಿಯೊಬ್ಬರು ಏಕಾಏಕಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದ್ದು, ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 ಶಿರಾಡಿ ನಿವಾಸಿ ಸೋಮಶೇಖರ ಎಸ್.ಕೆ. ಎಂಬವರ ಪುತ್ರ ಜಗದೀಶ ಎಸ್.ಎಸ್ (44) ನಾಪತ್ತೆಯಾದವರು. ವೃತ್ತಿಯಲ್ಲಿ ಗಾರೆ ಕೆಲಸಗಾರರಾಗಿದ್ದ ಜಗದೀಶ ಅವರು ಶಿರಾಡಿ ಗ್ರಾಮದ ಸೋಣಂದೂರು ಎಂಬಲ್ಲಿ ಪ್ರತ್ಯೇಕವಾಗಿ ವಾಸವಿದ್ದರು.

kadaba times
kadaba times

ಏಪ್ರಿಲ್ 6ರಂದು ಬೆಳಿಗ್ಗೆ 9 ಗಂಟೆಯವರೆಗೆ ಜಗದೀಶ ಅವರು ತಮ್ಮ ಮನೆಯಲ್ಲಿದ್ದರು. ಬಳಿಕ ಅವರು ಚಹಾ ಕುಡಿಯಲು ಬಾರದೇ ಇದ್ದಾಗ, ಮನೆಯವರು ಕರೆಯಲು ಹೋದ ಸಂದರ್ಭದಲ್ಲಿ ಜಗದೀಶ ಅವರು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಗಮನಾರ್ಹ ಸಂಗತಿಯೆಂದರೆ, ಜಗದೀಶ ಅವರು ತಮ್ಮ ಮೊಬೈಲ್ ಫೋನ್ ಮತ್ತು ಬೈಕ್ ಅನ್ನು ಮನೆಯಲ್ಲಿಯೇ ಬಿಟ್ಟು ತೆರಳಿದ್ದಾರೆ.

ಆರಂಭದಲ್ಲಿ ಜಗದೀಶ ಅವರು ಕೆಲಸಕ್ಕೆ ಹೋಗಿರಬಹುದು ಎಂದು ತಂದೆ ಸೋಮಶೇಖರ ಅವರು ಭಾವಿಸಿದ್ದರು. ಆದರೆ ಮರುದಿನವೂ ಮನೆಗೆ ಹಿಂತಿರುಗದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಸ್ನೇಹಿತರು ಹಾಗೂ ಸಂಬಂಧಿಕರ ಮನೆ ಸೇರಿದಂತೆ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸುಳಿವು ಸಿಗದ ಹಿನ್ನೆಲೆಯಲ್ಲಿ ಸೋಮಶೇಖರ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.ಸದ್ಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Latest Articles