ಕಡಬ: ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆ, ಜೀವಬೆದರಿಕೆ ಆರೋಪ: ಪತಿ ವಿರುದ್ಧ ಎಫ್‌ಐಆರ್ ದಾಖಲು

kadaba times

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಳಾರ ನಿವಾಸಿ ಮಿರ್ಷಾದ್ ವಿರುದ್ಧ ಆತನ ಪತ್ನಿಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

kadaba times
uniq

ಕಡಬ: ಕಳೆದ 19 ವರ್ಷಗಳಿಂದ ಪತ್ನಿ ಹಾಗೂ ಮಕ್ಕಳಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದಲ್ಲದೆ, ಕೊಲೆ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಘಟನೆಯ ವಿವರ: ಕಡಬ ತಾಲೂಕಿನ ಕಳಾರ ಹೌಸ್ ನಿವಾಸಿ ಮಿರ್ಷಾದ್ (38) ಆರೋಪಿತ ವ್ಯಕ್ತಿ. ಈತನ ಪತ್ನಿ  ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. 2007ರಲ್ಲಿ ಇವರ ವಿವಾಹವಾಗಿದ್ದು, ಕಳೆದ 19 ವರ್ಷಗಳಿಂದ ಸಂಸಾರ ನಡೆಸುತ್ತಿದ್ದರು.

ಕಳೆದ ಮೂರು ವರ್ಷಗಳಿಂದ ಮಿರ್ಷಾದ್ ತನ್ನ ಪತ್ನಿ ಮತ್ತು ನಾಲ್ವರು ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ.  ಮದುವೆಯ ಸಂದರ್ಭದಲ್ಲಿ ನೀಡಿದ್ದ 15 ಪವನ್ ಚಿನ್ನ ಮತ್ತು 1.5 ಲಕ್ಷ ರೂಪಾಯಿ ಹಣವನ್ನು ಆರೋಪಿ ಸಂಪೂರ್ಣವಾಗಿ ಖರ್ಚು ಮಾಡಿದ್ದಾನೆ. ಅಷ್ಟೇ ಅಲ್ಲದೆ, ಪತ್ನಿಯ ಹೆಸರಿನಲ್ಲಿದ್ದ ಮನೆಯನ್ನು ಆಕೆಗೆ ವಿದ್ಯಾಭ್ಯಾಸದ ಕೊರತೆ ಇರುವುದನ್ನು ಬಳಸಿಕೊಂಡು ಸುಳ್ಳು ಹೇಳಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪತ್ನಿಯ ತಾಯಿ ಮನೆಯಿಂದ ಜೀವನಕ್ಕಾಗಿ ನೀಡುತ್ತಿದ್ದ ಹಣವನ್ನು ಕಿತ್ತುಕೊಂಡು ಹೋಗಿ ಆರೋಪಿಯು ಅಮಲು ಪದಾರ್ಥಗಳಿಗೆ ವ್ಯಯಿಸುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈ ಕೃತ್ಯಗಳನ್ನು ಪ್ರಶ್ನಿಸಿದರೆ ಪತ್ನಿ ಮತ್ತು ಮಕ್ಕಳನ್ನು ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಒಡ್ಡುತ್ತಿದ್ದನು.

kadaba times
kadaba times

ದಿನಾಂಕ 05-04-2026 ರಂದು ರಾತ್ರಿ 7:00 ಗಂಟೆಯ ಸುಮಾರಿಗೆ ಆರೋಪಿಯು ಪತ್ನಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಇದರಿಂದ  ಪ್ರಜ್ಞೆ ತಪ್ಪಿ ಬಿದ್ದಾಗ, ಘಟನೆ ಪಕ್ಕದ ಮನೆಯವರಿಗೆ ತಿಳಿಯಬಾರದೆಂಬ ಉದ್ದೇಶದಿಂದ ಅವರನ್ನು ಸಂತ್ರಸ್ತೆಯ ತಂಗಿಯ ಮನೆಗೆ ಬಿಟ್ಟು ಬಂದಿದ್ದನು. ಈ ಭಯದ ಕಾರಣದಿಂದ ದೂರು ನೀಡಲು ವಿಳಂಬವಾಗಿದ್ದು, ತದನಂತರ ತಾಯಿ ಮನೆಯವರೊಂದಿಗೆ ಚರ್ಚಿಸಿ ಇದೀಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

 ದೂರಿನ ಅನ್ವಯ ಕಡಬ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 85, 115(2), 352 ಮತ್ತು 351(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

Related Articles

Latest Articles