ಕಡಬ: ನಿರ್ಲಕ್ಷ್ಯದ ಚಾಲನೆ; ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಓಮಿನಿ ಕಾರು, ದಂಪತಿಗೆ ಗಾಯ

kadaba times

ಕಡಬ ತಾಲೂಕಿನ ದೇರಾಜೆಯ ಕುದ್ರಡ್ಕ ಎಂಬಲ್ಲಿ ಓಮಿನಿ ಕಾರು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದ್ದು, ದಂಪತಿ ಗಾಯಗೊಂಡಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಕಡಬ: ನಿಯಂತ್ರಣ ತಪ್ಪಿದ ಮಾರುತಿ ಓಮಿನಿ ಕಾರೊಂದು ರಸ್ತೆ ಬದಿಯ ಚರಂಡಿಗೆ ಇಳಿದು ಧರೆಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಸ್ತೆಯ ದೇರಾಜೆಯ ಕುದ್ರಡ್ಕ ಎಂಬಲ್ಲಿ ನಡೆದಿದೆ.

 ಕೊಣಾಜೆ ಗ್ರಾಮದ ಕೋಡಿಯಡ್ಕ ನಿವಾಸಿ ದಯಾನಂದ ಕೆ.  ಅವರು ತಮ್ಮ ಕುಟುಂಬದೊಂದಿಗೆ ತಿರುಪತಿಗೆ ತೆರಳಿ ದೇವರ ದರ್ಶನ ಮುಗಿಸಿ ಮರಳಿದ್ದರು. ಮಾರ್ಚ್ 8 ರಂದು ತಿರುಪತಿಯ ಪ್ರಸಾದ ನೀಡಲು ಚಾರ್ವಾಕ ಗ್ರಾಮದ ಉದಲಡ್ಕದಲ್ಲಿರುವ ತಮ್ಮ ತಂಗಿಯ ಮನೆಗೆ ತೆರಳಿದ್ದರು. ಮಧ್ಯಾಹ್ನ ತಂಗಿಯ ಮನೆಯಲ್ಲಿ ಊಟ ಮುಗಿಸಿ ದಂಪತಿಗಳು ಮರಳುವಾಗ ಈ ಅಪಘಾತ ಸಂಭವಿಸಿದೆ.

ಪತ್ನಿಯ ಚಾಲನೆ ವೇಳೆ ಸಂಭವಿಸಿದ ಅಪಘಾತ: ಆರಂಭದಲ್ಲಿ ದಯಾನಂದ ಅವರೇ ಕಾರು ಚಲಾಯಿಸಿಕೊಂಡು ಬಂದಿದ್ದು, ಪದವು ಎಂಬಲ್ಲಿ ಅವರು ಕಾರನ್ನು ನಿಲ್ಲಿಸಿದ್ದರು. ಅಲ್ಲಿಂದ ಅವರ ಪತ್ನಿ ಚಿತ್ರಾವತಿ ಅವರು ಕಾರು ಚಾಲನೆಯನ್ನು ಮುಂದುವರಿಸಿದ್ದರು.  ದೇರಾಜೆಯ ಕುದ್ರಡ್ಕ ಎಂಬಲ್ಲಿಗೆ ತಲುಪುತ್ತಿದ್ದಂತೆ, ಚಾಲಕಿಯ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದಾಗಿ ಕಾರು ಏಕಾಏಕಿ ರಸ್ತೆಯ ಬಲಬದಿಗೆ ತಿರುಗಿ ಚರಂಡಿಗೆ ಇಳಿದು ಧರೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

kadaba times
kadaba times

ಗಾಯಾಳುಗಳ ಆಸ್ಪತ್ರೆಗೆ ದಾಖಲು: ಅಪಘಾತದ ತೀವ್ರತೆಗೆ ಕಾರಿನ ಎಡಬದಿಯಲ್ಲಿ ಕುಳಿತಿದ್ದ ದಯಾನಂದ ಅವರ ಎಡಗೈ ಮಣಿಗಂಟು ಹಾಗೂ ಬಲಗಣ್ಣಿನ ಬಳಿ ರಕ್ತಗಾಯಗಳಾಗಿವೆ. ಚಾಲನೆ ಮಾಡುತ್ತಿದ್ದ ಚಿತ್ರಾವತಿ ಅವರಿಗೂ ಬಲಗಾಲಿನ ತೊಡೆ, ಭುಜ ಹಾಗೂ ಎದೆಗೆ ಪೆಟ್ಟಾಗಿದೆ. ಕೂಡಲೇ ಸ್ಥಳೀಯ ಸಾರ್ವಜನಿಕರು ಇಬ್ಬರನ್ನೂ ಆಟೋರಿಕ್ಷಾ ಮೂಲಕ ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಹಿತ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ದಯಾನಂದ ಅವರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 29/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 281 ಹಾಗೂ 125(a) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Latest Articles