ಆಲಂಕಾರು: ರಾಮಕುಂಜದಲ್ಲಿ ಬಾವಿ ತೋಡುವಾಗ ಸ್ಫೋಟಕ ಬಳಕೆ:FIR ದಾಖಲು, ಬಾಂಬ್ ನಿಷ್ಕ್ರಿಯ ದಳ ಆಗಮನ

kadaba times

 ರಾಮಕುಂಜದಲ್ಲಿ ಬಾವಿ ತೋಡಲು ಸ್ಫೋಟಕ ಬಳಸಿದ ಪರಿಣಾಮ ಮನೆಗಳಿಗೆ ಹಾನಿಯಾಗಿದೆ. ಬಾವಿಯಲ್ಲಿ ಬಾಕಿ ಉಳಿದಿರುವ ಮದ್ದುಗುಂಡುಗಳನ್ನು ತೆರವುಗೊಳಿಸಲು ಬಾಂಬ್ ನಿಷ್ಕ್ರಿಯ ದಳ ಕಾರ್ಯಾಚರಣೆ ನಡೆಸುತ್ತಿದೆ

kadaba times
uniq

ಕಡಬ: ಬಾವಿ ತೋಡುವ ಸಂದರ್ಭದಲ್ಲಿ ಅತಿಯಾದ ಸ್ಫೋಟಕ ಬಳಕೆ ಮಾಡಿದ ಪರಿಣಾಮ ಸಮೀಪದ ಮನೆಗಳು ಜಖಂಗೊಂಡ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ನಡೆದಿದೆ. ಘಟನಾ ಸ್ಥಳದಲ್ಲಿ ಸ್ಫೋಟಗೊಳ್ಳದೆ ಬಾಕಿ ಉಳಿದಿರುವ ಮದ್ದುಗುಂಡುಗಳನ್ನು ತೆರವುಗೊಳಿಸಲು ಇಂದು (ಮಾ. 10) ಬೆಳಿಗ್ಗೆಯಿಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಮೈಸೂರು ನಿವಾಸಿ ಸೋಮಶೇಖರ ಎಂಬವರು ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ತಮ್ಮ ಸಂಬಂಧಿಕರಿಂದ 23 ಸೆಂಟ್ಸ್ ಅಡಿಕೆ ತೋಟದ ಜಾಗವನ್ನು ಖರೀದಿಸಿದ್ದರು. ಈ ಜಾಗದಲ್ಲಿ ನೀರಿಗಾಗಿ ಬಾವಿ ತೋಡುವ ಕೆಲಸ ನಡೆಯುತ್ತಿತ್ತು. ಸುಮಾರು 15 ಅಡಿ ಆಳದಲ್ಲಿ ಗಟ್ಟಿ ಕಲ್ಲು ಸಿಕ್ಕಿದ ಹಿನ್ನೆಲೆಯಲ್ಲಿ, ಕಲ್ಲು ಒಡೆಯಲು ಸ್ಫೋಟಕಗಳನ್ನು ಬಳಸಲಾಗಿತ್ತು.

kadaba times
kadaba times

ಮಾ. 8ರಂದು ಸ್ಫೋಟಕ ಸಿಡಿಸಿದ ರಭಸಕ್ಕೆ ಸಮೀಪದ ನಿವಾಸಿಗಳಾದ ವಾಮನ ಮೂಲ್ಯ ಹಾಗೂ ಕೆ.ಟಿ. ಮೋಹನ ಎಂಬವರ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದ ಆತಂಕಗೊಂಡ ಸ್ಥಳೀಯರು ಕಡಬ ಪೊಲೀಸರಿಗೆ ದೂರು ನೀಡಿದ್ದರು. ಅಂದೇ ಸ್ಥಳಕ್ಕೆ ಭೇಟಿ ನೀಡಿದ ಕಡಬ ಸಬ್ ಇನ್ಸ್‌ಪೆಕ್ಟರ್ ಜಂಬೂರಾಜ್ ಮಹಾಜನ್ ಅವರು ಪ್ರಕರಣ ದಾಖಲಿಸಿಕೊಂಡಿದ್ದರು.

ಬಾವಿಯೊಳಗೆ ಕೆಲವು ಮದ್ದುಗುಂಡುಗಳು ಸ್ಫೋಟಗೊಳ್ಳದೆ ಬಾಕಿ ಉಳಿದಿರುವುದು ತಪಾಸಣೆ ವೇಳೆ ಕಂಡುಬಂದಿದೆ. ಈ ಅಪಾಯಕಾರಿ ಸ್ಫೋಟಕಗಳನ್ನು ಸುರಕ್ಷಿತವಾಗಿ ತೆರವುಗೊಳಿಸಲು ಮಾರ್ಚ್ 10ರಂದು ಬೆಳಿಗ್ಗೆ ಬಾಂಬ್ ನಿಷ್ಕ್ರಿಯ ದಳ (Bomb Disposal Squad) ಮತ್ತು ಎಫ್‌ಎಸ್‌ಎಲ್ (FSL) ತಂಡ ಸ್ಥಳಕ್ಕೆ ಆಗಮಿಸಿದೆ.

Related Articles

Latest Articles