ಕಡಬ : ಮುಂಜಾನೆ ಮಗನ ಜೊತೆ ಕೊನೆಯ ಪೋನ್ ಸಂಭಾಷಣೆ: ಹಠಾತ್ತನೆ ಹೃದಯಾಘಾತಕ್ಕೆ ಬಲಿಯಾದ ಬೂತ್ ಕಾಂಗ್ರೆಸ್ ಅಧ್ಯಕ್ಷ

kadaba times

ಕಡಬದ  ಪಿಜಕ್ಕಳ ನಿವಾಸಿ, ಸಾಮಾಜಿಕ ಹಾಗೂ ರಾಜಕೀಯ ಮುಖಂಡ ಸದಾನಂದ ಗೌಡ (51) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

kadaba times
uniq

ಕಡಬ: “ನಿನ್ನೆಯಷ್ಟೇ ನಮ್ಮೊಂದಿಗೆ ಕೆಲಸದಲ್ಲಿದ್ದವರು, ಇವತ್ತು ನೆನಪಾಗಿ ಉಳಿದಿದ್ದಾರೆ…”  ಇದು ಇಂದು ಕಡಬದ ಪಿಜಕ್ಕಳ ನಿವಾಸಿಗಳ ಕಣ್ಣೀರಿನ ನುಡಿ. ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಸದಾನಂದ ಗೌಡ (51) ಅವರ ಅಕಾಲಿಕ ನಿಧನ ಕುಟುಂಬಕ್ಕೆ ಆಘಾತ ತರಿಸಿದೆ.

ಸದಾನಂದ ಗೌಡರು ಮೈಸೂರಿನಲ್ಲಿರುವ ತಮ್ಮ ಮಗನೊಂದಿಗೆ ಇಂದು ಮುಂಜಾನೆ  ಕೊನೆಯ ಬಾರಿ ಫೋನ್‌ನಲ್ಲಿ ಮಾತನಾಡಿದ್ದರು.  ತಂದೆ-ಮಗನ ನಡುವಿನ ಆ ಮಾತುಕತೆಯೇ ಕೊನೆಯದ್ದಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.  ಮಗನ ಭವಿಷ್ಯದ ಕನಸುಗಳನ್ನು ಹೊತ್ತಿದ್ದ ಆ ಧ್ವನಿ ಇಂದು ಮೌನವಾಗಿದೆ. ನಿನ್ನೆಯಷ್ಟೇ ಎಂದಿನಂತೆ ಉತ್ಸಾಹದಿಂದ ಕೆಲಸಕ್ಕೆ ತೆರಳಿದ್ದ ಅವರು, ಇಂದು ಹಠಾತ್ತನೆ ವಿಧಿವಶರಾಗಿರುವುದು ಕುಟುಂಬಸ್ಥರಿಗೆ ಹಾಗೂ ಹಿತೈಷಿಗಳಿಗೆ ಅರಗಿಸಿಕೊಳ್ಳಲಾಗದ ದುಖ ತರಿಸಿದೆ.

ಇಂದು ಅವರಿಗೆ ಎದೆನೋವು ಕಾಣಿಸಿಕೊಂಡ ತಕ್ಷಣ ತ ಕಡಬದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.  ವಿಧಿಯಾಟದ ಮುಂದೆ ಯಾವುದೂ ನಡೆಯಲಿಲ್ಲ.

kadaba times
kadaba times

ಪಿಜಕ್ಕಳ ಬೂತ್ ಕಾಂಗ್ರೆಸ್ ಅಧ್ಯಕ್ಷರಾಗಿ, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಾಗಿ ಹಾಗೂ ದೈವಸ್ಥಾನದ ಪರಿಚಾರಕರಾಗಿ ಅವರು ಸಲ್ಲಿಸಿದ ಸೇವೆ ಅನನ್ಯ.  ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದ, ಕಷ್ಟಕ್ಕೆ ಹೆಗಲಾಗುತ್ತಿದ್ದ ಒಬ್ಬ ಸ್ನೇಹಜೀವಿಯನ್ನು ಗ್ರಾಮದ ಜನ ಕಳೆದುಕೊಂಡಿದ್ದಾರೆ.

ಅವರ ನಿಧನದ ಸುದ್ದಿ ಕೇಳಿ ಕಡಬ ಪಟ್ಟಣ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು  ಅಂತಿಮ ದರ್ಶನ ಪಡೆದರು.

Related Articles

Latest Articles