ಸುಬ್ರಹ್ಮಣ್ಯದಲ್ಲಿ ಅಕ್ರಮ ಮರಳು ದಂಧೆಕೋರರ ಅಡ್ಡೆಗೆ ಪೊಲೀಸರ ದಾಳಿ

ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಬೆದರಿ ಮರಳುಗಳ್ಳರು ಪರಾರಿ

kadaba times

ಕಡಬ ತಾಲೂಕಿನ ಐನೆಕಿದು ಗ್ರಾಮದ ಕಲ್ಲಾಜೆ ಹೊಳೆಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಜಾಲವನ್ನು ಸುಬ್ರಹ್ಮಣ್ಯ ಪೊಲೀಸರು ಭೇದಿಸಿದ್ದಾರೆ. ಹಿಟಾಚಿ, ಟಿಪ್ಪರ್ ಸೇರಿ ಲಕ್ಷಾಂತರ ಮೌಲ್ಯದ ಸೊತ್ತು ಜಪ್ತಿ ಮಾಡಲಾಗಿದೆ.

kadaba times
uniq

ಸುಬ್ರಹ್ಮಣ್ಯ: ಹರಿಯುವ ನದಿಯ ಮಡಿಲಲ್ಲಿ ಅಕ್ರಮವಾಗಿ ಮರಳು ಲೂಟಿ ಮಾಡುತ್ತಿದ್ದ ದಂಧೆಕೋರರ ಮೇಲೆ ಸುಬ್ರಹ್ಮಣ್ಯ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕಡಬ ತಾಲೂಕಿನ ಐನೆಕಿದು ಗ್ರಾಮದ ಕಲ್ಲಾಜೆ ಎಂಬಲ್ಲಿ ಗುಟ್ಟಾಗಿ ನಡೆಯುತ್ತಿದ್ದ ಮರಳುಗಾರಿಕೆಯ ಅಡ್ಡೆಯ ಮೇಲೆ ದಾಳಿ ನಡೆಸಿ, ಲಕ್ಷಾಂತರ ರೂಪಾಯಿ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ.

ದಿನಾಂಕ 16.02.2026ರ ಸೋಮವಾರ ಬೆಳಿಗ್ಗೆ,  ಹೊಳೆಯ ಒಡಲಿಂದ ಅಕ್ರಮವಾಗಿ ಇಟಾಚಿ ವಾಹನದ ಮೂಲಕ ಮರಳು ತೆಗೆಯಲಾಗುತ್ತಿದೆ ಎಂಬ ಖಚಿತ ಮಾಹಿತಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ಜಿ.ವಿ ಅವರಿಗೆ ತಲುಪಿತ್ತು. ಕೂಡಲೇ ಎಚ್ಚೆತ್ತ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಕಲ್ಲಾಜೆ ಹೊಳೆಯತ್ತ ಧಾವಿಸಿದರು.

ಪೊಲೀಸರ ವಾಹನ ಬರುತ್ತಿದ್ದಂತೆ ಗಾಬರಿಗೊಂಡ ದಂಧೆಕೋರರು, ಕಾನೂನಿನ ಕೈಗೆ ಸಿಲುಕುವ ಭಯದಿಂದ ಸ್ಥಳದಲ್ಲೇ ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.

kadaba times
kadaba times

ಪೊಲೀಸರು ನಡೆಸಿದ ಮಹಜರು ಪ್ರಕ್ರಿಯೆಯಲ್ಲಿ ಈ ಕೆಳಗಿನ ಬೆಲೆಬಾಳುವ ವಾಹನ ಮತ್ತು ಮರಳನ್ನು ವಶಕ್ಕೆ ಪಡೆಯಲಾಗಿದೆ:ವಾಹನಗಳು: ಒಂದು ಟಾಟಾ ಹಿಟಾಚಿ (TATA HITACHI), KA-21-B-3929 ಸಂಖ್ಯೆಯ ಐಷರ್ ಟಿಪ್ಪರ್ ಹಾಗೂ KA-20-D-7639 ಸಂಖ್ಯೆಯ ಮತ್ತೊಂದು ಟಿಪ್ಪರ್ ಲಾರಿ.ಮರಳು: ಸುಮಾರು 50 ಟನ್ ಮರಳು (ಅಂದಾಜು ಮೌಲ್ಯ ₹50,000/-).ಒಟ್ಟು ಮೌಲ್ಯ: ವಶಪಡಿಸಿಕೊಂಡ ವಾಹನಗಳ ಒಟ್ಟು ಅಂದಾಜು ಮೌಲ್ಯ ಸುಮಾರು ₹20 ಲಕ್ಷ ಎಂದು ಅಂದಾಜಿಸಲಾಗಿದೆ.

ಈ ಅಕ್ರಮ ದಂಧೆಯ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 08/2026ರಂತೆ ಪ್ರಕರಣ ದಾಖಲಾಗಿದೆ. ಹೊಸ ಕಾನೂನು ಸಂಹಿತೆ BNS-2023 ರ ಕಲಂ 303(2), ಹಾಗೂ MMRD Act ಮತ್ತು KMMCR 1994 ರ ವಿವಿಧ ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ನದಿ ಮೂಲಗಳನ್ನು ಉಳಿಸಬೇಕಾದ ಅನಿವಾರ್ಯತೆ ಇರುವ ಈ ಕಾಲದಲ್ಲಿ, ಇಂತಹ ಅಕ್ರಮ ದಂಧೆಗಳು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿವೆ. ಪೊಲೀಸರ ಈ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

Related Articles

Latest Articles